ಪುತ್ತೂರು: ವೆಲ್ಡರ‍್ಸ್‌ಗಳ ಆಯ್ಕೆಯಾಗಿರುವ ವೆಲ್ಡಿಂಗ್ ವಿದ್ಯುದ್ಧಾರ(ಎಲೆಕ್ಟ್ರೋಡ್)ಗಳ ತಯಾರಕಾಗಿರುವ ಪ್ರಸಿದ್ಧ ಮಾರ್ಟಿಸ್ ಆಂಡ್ ಕಂಪೆನಿಯ ಆರ‍್ಕೋ ಪ್ರಾಡಕ್ಟ್ ಲಾಂಚ್‌ನ ಉದ್ಘಾಟನೆಯು ಅ.4 ರಂದು ಮುಕ್ರಂಪಾಡಿ ಇಂಡಸ್ಟ್ರಿಯಲ್ ಏರಿಯದಲ್ಲಿ ಉದ್ಘಾಟನೆಗೊಳ್ಳಲಿದೆ.
ಎಲೆಕ್ಟ್ರೋಡ್(ಇ 6013) ಅದರ ನಯವಾದ ಆರ್ಕ್, ಬೆಳಕಿನ ನುಗ್ಗುವಿಕೆ ಮತ್ತು ಸುಲಭವಾದ ಸ್ಲ್ಯಾಗ್ ತೆಗೆಯುವಿಕೆಗೆ ಹೆಸರುವಾಸಿಯಾದ ಸಾಮಾನ್ಯ ಉದ್ಧೇಶದ ವೆಲ್ಡಿಂಗ್ ರಾಡ್ ಜೊತೆಗೆ ಸೌಮ್ಯವಾದ ಉಕ್ಕಿನಂತಹ ತೆಳುವಾದ, ಶುದ್ಧವಾದ ವಸ್ತುಗಳ ಮೇಲೆ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತದೆ. ಸಾಮಾನ್ಯವಾಗಿ ಶೀಟ್ ಮೆಟಲ್ ವೆಲ್ಡಿಂಗ್, ಸಾಮಾನ್ಯ ನಿರ್ವಹಣೆ ಮತ್ತು ದುರಸ್ತಿ ಕಾರ್ಯಗಳಲ್ಲಿ ಬಳಸಲಾಗುತ್ತದೆ.
ಉದ್ಘಾಟನೆಯನ್ನು ಪುತ್ತೂರು ಶಾಸಕ ಅಶೋಕ್ ಕುಮಾರ್ ರೈಯವರು ನೆರವೇರಿಸಲಿರುವರು. ಸಂಸ್ಥೆಯ ಆಶೀರ್ವಚನವನ್ನು ಮರೀಲು ಸೆಕ್ರೇಡ್ ಹಾರ್ಟ್ ಚರ್ಚ್ ಧರ್ಮಗುರು ವಂ|ಜೆ.ಬಿ ಮೊರಾಸ್‌ರವರು ನೆರವೇರಿಸಲಿರುವರು. ಗೌರವ ಅತಿಥಿಗಳಾಗಿ ಪುತ್ತೂರು ನಗರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಜಾನ್ಸನ್ ಡಿ’ಸೋಜ, ಪುತ್ತೂರು ನಗರಸಭೆಯ ಉಪಾಧ್ಯಕ್ಷ ಬಾಲಚಂದ್ರ ಕೆ, ಪುತ್ತೂರು ನಗರ ಕಾಂಗ್ರೆಸ್ ಅಧ್ಯಕ್ಷ ಎಚ್.ಮಹಮದ್ ಆಲಿ, ಮಾಯಿದೆ ದೇವುಸ್ ಚರ್ಚ್ ಸಹಾಯಕ ಧರ್ಮಗುರು ವಂ|ಲೋಹಿತ್ ಅಜೇಯ್ ಮಸ್ಕರೇನ್ಹಸ್‌ರವರು ಭಾಗವಹಿಸಲಿರುವರು ಎಂದು ನೂತನ ಇಂಡಸ್ಟ್ರೀ ಮಾಲಕ ಲಿಯೋ ಮಾರ್ಟಿಸ್‌ರವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.