ಕೆಯ್ಯೂರು: ಕೆಪಿಎಸ್ ಕೆಯ್ಯೂರಿನ ಪ್ರಾಥಮಿಕ, ಪ್ರೌಢಶಾಲೆ, ಕಾಲೇಜು ವಿಭಾಗದ ಏಕೀಕೃತ ಹಿರಿಯ ವಿದ್ಯಾರ್ಥಿ ಸಂಘದ ರಚನೆಯ ಬಗ್ಗೆ ಹಿರಿಯ ವಿದ್ಯಾರ್ಥಿ ಸಂಘದ ರಚನೆಯ ಪೂರ್ವಭಾವಿ ಸಭೆಯು ಕೆಪಿಎಸ್ ಕೆಯ್ಯೂರು ಎಸ್ ಡಿಎಂಸಿ ಕಾರ್ಯಾಧ್ಯಕ್ಷ ಎ.ಕೆ ಜಯರಾಮ ರೈ ಕೆಯ್ಯೂರು ಅಧ್ಯಕ್ಷತೆಯಲ್ಲಿ ಪ್ರೌಢಶಾಲಾ ಸಭಾಂಗಣದಲ್ಲಿ ಅ.2ರಂದು ನಡೆಯಿತು.
ಈ ಸಂದರ್ಭದಲ್ಲಿ ವಿದ್ಯಾರ್ಥಿಗಳ ಅಭ್ಯುದಯಕ್ಕಾಗಿ ಯೋಜನೆ ರೂಪಿಸುವುದು ಮತ್ತು ಶೈಕ್ಷಣಿಕ ಬೆಳವಣಿಗೆಗಾಗಿ ಸಾಮಾಜಿಕ ಕಳಕಳಿ ಸೇರಿದಂತೆ ಸೇವಾ ಮನೋಭಾವದ ಚಟುವಟಿಕೆಗಳ ತೊಡಗಿಸಿಕೊಳ್ಳಲು ಸಹಕರಿಸಬೇಕು. ಸಂಘದ ನೊಂದಣಿ ಕಾರ್ಯಕ್ರಮ ಶೀಘ್ರವೇ ಆಗಬೇಕು ಎಂದರು ಮತ್ತು ಹಿರಿಯ ವಿದ್ಯಾರ್ಥಿಗಳು ವಿದ್ಯಾರ್ಥಿ ಸಂಘ ರಚನೆಯ ಬಗ್ಗೆ ಅತ್ಯಮೂಲ್ಯವಾದ ಸಲಹೆ ಸೂಚನೆಗಳನ್ನು ನೀಡಿದರು. ಅ.13ರಂದು ಹಿರಿಯ ವಿದ್ಯಾರ್ಥಿ ಸಂಘದ ರಚನೆಯು ಮಾಡುವುದೆಂದು ನಿರ್ಣಯಿಸಲಾಯಿತು. ಈ ಸಂದರ್ಭದಲ್ಲಿ ಕೆಪಿಎಸ್ ಕೆಯ್ಯೂರು ಪ್ರಾಂಶುಪಾಲ ಇಸ್ಮಾಯಿಲ್ ಪಿ, ಕೆಪಿಎಸ್ ಕೆಯ್ಯೂರು ಎಸ್ ಡಿ ಎಂಸಿ ನಿಕಟ ಪೂರ್ವ ಕಾರ್ಯದ್ಯಕ್ಷ ಎಸ್. ಬಿ ಜಯರಾಮ ರೈ ಬಳಜ್ಜ, ಹಿರಿಯ ವಿದ್ಯಾರ್ಥಿಗಳು, ಉಪನ್ಯಾಸಕರು, ಶಿಕ್ಷಕವೃಂದ, ಪೋಷಕರು, ಉಪಸ್ಥಿತರಿದ್ದರು. ಕೆಪಿಎಸ್ ಕೆಯ್ಯೂರು ಉಪ ಪ್ರಾಂಶುಪಾಲ ವಿನೋದ್ ಕುಮಾರ್ ಕೆ ಎಸ್ ಪ್ರಾಸ್ತಾವಿಕವಾಗಿ ಸ್ವಾಗತಿಸಿ, ಕೆಪಿಎಸ್ ಕೆಯ್ಯೂರು ಪ್ರಾಥಮಿಕ ವಿಭಾಗ ಮುಖ್ಯಗುರು ಬಾಬು ಎಂ ವಂದಿಸಿದರು.