ಅಡಿಕೆ ಧಾರಣೆ ಇಳಿಕೆಯ ಬಗ್ಗೆ ಗೊಂದಲ ಅನಾವಶ್ಯಕ-ಕ್ಯಾಂಪ್ಕೋ ಸ್ಪಷ್ಟನೆ

0

ಕಾವು: ಅಡಿಕೆ ಧಾರಣೆ ಇಳಿಕೆಯ ಬಗ್ಗೆ ಕೆಲವೊಂದು ಪತ್ರಿಕೆಯಲ್ಲಿ ಅನಾವಶ್ಯಕ ಗೊಂದಲ ಉಂಟಾಗಿದ್ದು, ಅಡಿಕೆ ಬೆಳೆಗಾರರ ಆತ್ಮ ಸೈರ್ಯ ಕುಗ್ಗಿಸುವ ಹೇಳಿಕೆ ಕೊಡುವುದನ್ನು ಕ್ಯಾಂಪ್ಲೋ ಸಂಸ್ಥೆ ಖಂಡಿಸುತ್ತದೆ ಎಂದು ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


ಉತ್ತರ ಭಾರತದಲ್ಲಿ ನಮ್ಮ ಚಾಲಿ ಅಡಿಕೆಗೆ ಉತ್ತಮ ಬೇಡಿಕೆ ಇದ್ದು, ಧಾರಣೆ ಕುಸಿಯುವ ಯಾವ ಕಾರಣವು ಇಲ್ಲ, ಹಾಗೂ ಕ್ಯಾಂಪ್ಲೋ ಅಡಿಕೆ ಬೆಳೆಗಾರರ ಹಿತ ಕಾಪಾಡುವಲ್ಲಿ, ಹಾಗೂ ಪ್ರಾಮಾಣಿಕ ಸೇವೆ ನೀಡುವಲ್ಲಿ ಕಟಿಬದ್ಧರಾಗಿದ್ದೇವೆ. ಅಡಿಕೆ ಸೇಟುಗಳು ಹಾಗೂ ವ್ಯಾಪಾರಿಗಳಿಗೆ ಅವರ ಹಿತಾಸಕ್ತಿ ಮುಖ್ಯವೇ ಹೊರತು ರೈತರ ಕಾಳಜಿ ಇರುವುದಿಲ್ಲ. ಅವರುಗಳು ಹೇಳಿದಂತೆ, ವಿದೇಶಿ ಅಡಿಕೆ ಗುಣಮಟ್ಟದಲ್ಲಿಯಾಗಲಿ, ದರದಲ್ಲಿಯೂ ನಮ್ಮ ಅಡಿಕೆಗೆ ಸರಿಸಾಟಿ ಅಲ್ಲ. ಅಡಿಕೆ ಬೆಳೆಗಾರರು ಯಾವುದೇ ಕಾರಣಕ್ಕೆ ಈ ವದಂತಿಗಳಿಗೆ ಮಣಿಯದೇ, ತಮಗೆ ಅಗತ್ಯವಿರುವಷ್ಟು ಅಡಿಕೆಯನ್ನು ಹಂತ ಹಂತವಾಗಿ ಕ್ಯಾಂಪ್ಕೋ ಸಂಸ್ಥೆ, ಹಾಗೂ ಸಹಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಬೇಕಾಗಿ ವಿನಂತಿಸುತ್ತೇವೆ.


ಈಗಾಗಲೆ ಚೋಲ್ ಅಡಿಕೆ ದರ ಹೆಚ್ಚಾಗಿದ್ದು, ಮಳೆಯಿಂದಾಗಿ ಹೊಸ ಅಡಿಕೆ ಗುಣಮಟ್ಟ ಸುಧಾರಣೆ ಆದಾಗ ಇನ್ನು ಹೆಚ್ಚಿನ ದರ ನಮ್ಮ ರೈತರಿಗೆ ಖಂಡಿತಾ ಸಿಗುತ್ತದೆ ಎಂಬ ಭರವಸೆ ಇದೆ. ದಯವಿಟ್ಟು ರೈತರು ಯಾವುದೇ ಕಾರಣದಿಂದ ತಮ್ಮ ಹೆಸರಿನಲ್ಲಿ ವ್ಯಾಪಾರಿಗಳ ಕಳಪೆ ಗುಣಮಟ್ಟದ ಅಡಿಕೆಯನ್ನು ತಮ್ಮ ಉತ್ತಮ ಗುಣಮಟ್ಟದ ಅಡಿಕೆಯೊಂದಿಗೆ ಮಿಕ್ಸ್ ಮಾಡಿ ನಮ್ಮ ಸಂಸ್ಥೆಗೆ ನೀಡಬಾರದಾಗಿ ಕ್ಯಾಂಪ್ಕೋ ಅಧ್ಯಕ್ಷರು ಮನವಿ ಮಾಡಿದ್ದಾರೆ.

LEAVE A REPLY

Please enter your comment!
Please enter your name here