ನರೇಂದ್ರ ಪ.ಪೂ.ಕಾಲೇಜಿನಲ್ಲಿ ನವರಾತ್ರಿ ಆಚರಣೆ -ವಿಶೇಷ ಉಪನ್ಯಾಸ ಕಾರ‍್ಯಕ್ರಮ

0


ಪುತ್ತೂರು: ನವರಾತ್ರಿಯು ಒಂದು ಮಂಗಳಕರ ಹಿಂದೂ ಹಬ್ಬವಾಗಿದ್ದು, ಭಕ್ತರು ದುರ್ಗಾ ದೇವಿಯನ್ನು ಪೂಜಿಸುತ್ತಾರೆ. ಇದು ಕೆಟ್ಟದ್ದರ ಮೇಲೆ ಒಳ್ಳೆಯದರ ವಿಜಯವನ್ನು ಸೂಚಿಸುತ್ತದೆ.
ಶಕ್ತಿ, ಜ್ಞಾನ, ಸಂಪತ್ತು ಹೀಗೆ, ಪ್ರತಿ ದಿನವೂ ಜೀವನದ ವಿವಿಧ ಭಾಗಗಳಲ್ಲಿ ದುರ್ಗೆಯ ಒಂಬತ್ತು ರೂಪಗಳನ್ನು ಸಂಕೇತಿಸುತ್ತದೆ. ಒಂಬತ್ತು ದಿನಗಳ ಹಬ್ಬವು ಮಹತ್ತರವಾದ ಅರ್ಥವನ್ನು ಹೊಂದಿದೆ ಮತ್ತು ದೇಶಾದ್ಯಂತ ಆಚರಿಸಲು ಸುದೀರ್ಘ ಇತಿಹಾಸವನ್ನು ಹೊಂದಿದೆ. ವಿವಿಧ ಸಮುದಾಯಗಳ ಜನರು ದುರ್ಗಾ ದೇವಿಯನ್ನು ಪೂಜಿಸುವ ಮೂಲಕ ಮತ್ತು ಕತ್ತಲೆಯ ಮೇಲೆ ಬೆಳಕಿನ ವಿಜಯವನ್ನು ಗುರುತಿಸುವುದರೊಂದಿಗೆ ಹಬ್ಬದ ಋತುವು ಪ್ರಾರಂಭವಾಗುತ್ತದೆ.ಇದು ಭಕ್ತಿ ತುಂಬಿದ ಉಪವಾಸ ಮತ್ತು ಪ್ರಾರ್ಥನೆಗಳ ಮೂಲಕ ನವೀಕರಣಕ್ಕೆ ಅವಕಾಶವನ್ನು ನೀಡುವ ಹಬ್ಬವಾಗಿದೆ. ಎಂದು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯ(ಸ್ವಾಯತ್ತ) ಇದರ ಆಡಳಿತ ಮಂಡಳಿಯ ಸದಸ್ಯರಾದ ಶೋಭಾ ಸಿ. ಅಡಿಗ ಇವರು ಹೇಳಿದರು.


ನರೇಂದ್ರ ಪ.ಪೂ.ಕಾಲೇಜಿನಲ್ಲಿ ಅ.3ರಂದು ನಡೆದ ನವರಾತ್ರಿ ಆಚರಣೆ -ವಿಶೇಷ ಉಪನ್ಯಾಸ ಕಾರ‍್ಯಕ್ರಮದಲ್ಲಿ ಅವರು ಮಾತನಾಡಿದರು.
ತಿರುಗುವುದು ಪೃಥ್ವಿಯ ಗುಣಧರ್ಮವಾಗಿದೆ. ಪೃಥ್ವಿಯು ತಿರುಗುತ್ತಿರುವುದರಿಂದ ಬದಲಾವಣೆಗಳು ಆಗುತ್ತಿರುತ್ತವೆ. ಅಂದರೆ ರಾತ್ರಿ ಮತ್ತು ಹಗಲು ಆಗುತ್ತವೆ. ಇಂತಹ ಬದಲಾವಣೆಗಳನ್ನು ಸಹಿಸುವ ಶಕ್ತಿಯು ಶರೀರದಲ್ಲಿರಬೇಕೆಂದು ವ್ರತಗಳನ್ನು ಮಾಡುತ್ತಾರೆ. ಜಗತ್ತಿನಲ್ಲಿ ಯಾವಾಗ ತಾಮಸಿಕ, ಅಸುರೀ ಮತ್ತು ಕ್ರೂರ ಜನರು ಪ್ರಬಲರಾಗಿ ಸಾತ್ವಿಕ ಮತ್ತು ಧರ್ಮನಿಷ್ಠ ಸಜ್ಜನರನ್ನು ಪೀಡಿಸುತ್ತಾರೆಯೋ, ಆಗ ದೇವಿಯು ಧರ್ಮಸಂಸ್ಥಾಪನೆಗಾಗಿ ಪುನಃ ಪುನಃ ಅವತಾರ ತಾಳುತ್ತಾಳೆ ಎಂದು ಹೇಳಿದರು. ವೇದಿಕೆಯಲ್ಲಿ ಕಾಲೇಜಿನ ಪ್ರಾಂಶುಪಾಲರಾದ ಪ್ರಸಾದ್ ಶ್ಯಾನಭಾಗ್ ಉಪಸ್ಥಿತರಿದ್ದರು. ಕಾರ‍್ಯಕ್ರಮದಲ್ಲಿ ಪ್ರಥಮ ವಿಜ್ಞಾನ ವಿಭಾಗದ ವಿದ್ಯಾರ್ಥಿನಿಯಾದ ಹರಿಣಿ ಇವರು ಸ್ವಾಗತಿಸಿ,ವಂದಿಸಿದರು.

LEAVE A REPLY

Please enter your comment!
Please enter your name here