ಪ್ರಥಮ ಪ್ರದರ್ಶನದಲ್ಲೇ ಹತ್ತೂರಿನಲ್ಲಿ ಸದ್ದು ಮಾಡಿದ ಪುತ್ತೂರುದ ಪಿಲಿಗೊಬ್ಬು-ಆ.5ಕ್ಕೆ ಫುಸ್ ಫೆಸ್ಟ್. ಅ.6ಕ್ಕೆ ಪಿಲಿಗೊಬ್ಬು ಸೀಸನ್ -2 ಉದ್ಘಾಟನೆ

0

*ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ತಂಡಗಳು ಭಾಗಿ
*ಸ್ಯಾಂಡಲ್ ವುಡ್ ನಟ-ನಟಿಯರ ಮೆರುಗು
*ಫುಡ್ ಫೆಸ್ಟ್‌ನಲ್ಲಿ 50ಕ್ಕೂ ಅಧಿಕ ಸ್ಟಾಲ್
*ಸುಸಜ್ಜಿತ ವಿಶಾಲವಾದ ವಾಹನ ಪಾರ್ಕಿಂಗ್

ಪುತ್ತೂರು: ಪ್ರಥಮ ಪ್ರದರ್ಶನದಲ್ಲೇ ಹತ್ತೂರಿನಲ್ಲಿ ಸದ್ದು ಮಾಡಿದ ವಿಜಯಸಾಮ್ರಾಟ್ ನೇತೃತ್ವದ ಪುತ್ತೂರುದ ಪಿಲಿಗೊಬ್ಬು ಸಂಘಟನೆಯ ಸ್ಥಾಪಕಾದ್ಯಕ್ಷ ಸಹಜ್ ರೈ ಬಳಜ್ಜ ಸಾರಥ್ಯದಲ್ಲಿ ಹಲವು ವೈಶಿಷ್ಟ್ಯತೆಗಳನ್ನೊಳಗೊಂಡು ಅ.5 ಮತ್ತು 6 ಕ್ಕೆ ವಿಜೃಂಭಣೆಯಿಂದ ನಡೆಯಲಿದೆ.


ಪತ್ರಿಕಾಗೋಷ್ಟಿಯಲ್ಲಿ ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ ಇದರ ಸ್ಥಾಪಕ ಅಧ್ಯಕ್ಷರೂ ಮತ್ತು ಪುತ್ತೂರು ಪಿಲಿಗೊಬ್ಬು ಸಮಿತಿಯ ಗೌರವಾಧ್ಯಕ್ಷರಾಗಿರುವ ಸಹಜ್ ರೈ ಬಳಜ್ಜ ಅವರು ಮಾತನಾಡಿ ಹುಲಿವೇಷ ಕುಣಿತ ತುಳು ನಾಡಿನ ಧಾರ್ಮಿಕ ಹಿನ್ನೆಲೆ ಇರುವ ಜಾನಪದ ಕಲೆ. ಈ ಕಲೆಯನ್ನು ಉಳಿಸಿ ಬೆಳಸುವ ನಿಟ್ಟಿನಲ್ಲಿ ಪಿಲಿಗೊಬ್ಬು ಹಾಗು ಜೊತೆಗೆ ಜನರ ಸಂಭ್ರಮಕ್ಕಾಗಿ ಪುತ್ತೂರು ಫುಡ್ ಫೆಸ್ಟ್ ಅನ್ನು ಅ.5ರಂದು ಮತ್ತು ಅ.6ರಂದು ಇತಿಹಾಸ ಪ್ರಸಿದ್ಧ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯಲ್ಲಿ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ ಎಂದವರು ಹೇಳಿದರು.


ಅ.6ಕ್ಕೆ ಬೆಳಿಗ್ಗೆ ಗಂಟೆ 10.30ಕ್ಕೆ ಪುತ್ತೂರುದ ಪಿಲಿಗೊಬ್ಬು ಉದ್ಘಾಟನೆಯು ನಡೆಯಲಿದ್ದು, ಮೂಡುಬಿದಿರೆಯ ಆಳ್ವಾಸ್ ವಿದ್ಯಾ ಸಂಸ್ಥೆಯ ಮೋಹನ್ ಆಳ್ವ ನೆರವೇರಿಸಲಿದ್ದಾರೆ. ಪಿಲಿಗೊಬ್ಬ ಕಾರ್ಯಕ್ರಮದ ಉದ್ಘಾಟನೆಯನ್ನು ಶಾಸಕ ಅಶೋಕ್ ಕುಮಾರ್ ರೈ ಮಾಡಲಿದ್ದು, ಮಾಜಿ ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಪುತ್ತೂರು ಸಹಾಯಕ ಆಯುಕ್ತ ಜುಬಿನ್ ಮೊಹಪಾತ್ರ, ಹಿರಿಯ ವೈದ್ಯ ಡಾ.ಎಂ.ಕೆ.ಪ್ರಸಾದ್, ಡಿವೈಎಸ್ ಪಿ ಅರುಣ್ ನಾಗೇಗೌಡ, ಮಾಜಿ ಶಾಸಕ ಸಂಜೀವ ಮಠಂದೂರು, ಎಸ್.ಆರ್.ಕೆ.ಲ್ಯಾಡರ‍್ಸ್‌ನ ಮಾಲಕ ಕೇಶವ ಅಮೈ, ಉದ್ಯಮಿ ಸುನಿಲ್ ಆಚಾರ್, ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಸ್ವಣೋದ್ಯಮಿ ಜಿ.ಎಲ್.ಬಲರಾಮ ಆಚಾರ್ಯ, ಸ್ವರ್ಣೋದ್ಯಮಿ ಮುಳಿಯ ಜ್ಯುವೆಲ್ಸ್‌ನ ಕೇಶವಪ್ರಸಾದ್ ಮುಳಿಯ, ಎಸಿಎಫ್ ಪ್ರವೀಣ್ ಶೆಟ್ಟಿ, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ರಾಧಾಕೃಷ್ಣ ನಾಕ್, ಬ್ರೈಟ್‌ವೇ ಇಂಡಿಯಾ ಮಂಗಳೂರು ಇದರ ಆಡಳಿತ ನಿರ್ದೇಶಕ ಹರ್ಷ ಕುಮಾರ್ ರೈ ಮಾಡಾವು, ಪೌರಾಯುಕ್ತ ಮಧು ಎಸ್ ಮನೋಹರ್, ಉಪ್ಪಿನಂಗಡಿ ಸಹಸ್ರಲಿಂಗೇಶ್ವರ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ಕರುಣಾಕರ ಸುವರ್ಣ, ಅಕ್ಷಯ ಕಾಲೇಜಿನ ಸಂಚಾಲಕ ಜಯಂತ ನಡುಬೈಲು, ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯನಿರ್ವಹಣಧಿಕಾರಿ ಕೆ.ವಿ.ಶ್ರೀನಿವಾಸ್, ಆರ್‌ಎಫ್‌ಒ ಕಿರಣ್ ಬಿ.ಎಮ್, ದತ್ತಾತ್ರೇಯ ಕನ್‌ಸ್ಟ್ರಕ್ಷನ್‌ನ ಹರಿಪ್ರಸಾದ್ ರೈ ಮೇಗಿನಗುತ್ತು, ನಗರಸಭೆ ಸದಸ್ಯ ರಮೇಶ್ ರೈ ಮೊಟ್ಟೆತ್ತಡ್ಕ ಪಾಲ್ಗೊಳ್ಳಲಿದ್ದಾರೆ ಎಂದು ಹೇಳಿದರು. ಸಂಜೆ ಸಭಾಕಾರ್ಯಕ್ರಮದಲ್ಲಿ ಭಾರತ ಸರಕಾರದ ಭಾರಿ ಕೈಗಾರಿಕೆ ಮತ್ತು ಉಕ್ಕಿನ ಸಚಿವಾಲಯದ ಸಚಿವರಾದ ಎಚ್. ಡಿ. ಕುಮಾರಸ್ವಾಮಿ, ದಕ್ಷಿಣ ಕನ್ನಡ ಸಂಸದ ಬ್ರಿಜೇಶ್ ಚೌಟ, ರಾಜ್ಯ ಮಹಾಮಂಡಲದ ಅಧ್ಯಕ್ಷ ಡಾ. ಎಂ. ಎನ್. ರಾಜೇಂದ್ರ ಕುಮಾರ್, ಮಾನವ ಹಕ್ಕು ಆಯೋಗದ ಅಧ್ಯಕ್ಷ ಡಾ. ಟಿ. ಶ್ಯಾಮ್ ಭಟ್ ಐ. ಎ. ಎಸ್, ಮತ್ತಿತರು ಗಣ್ಯರು ಆಗಮಿಸಲಿದ್ದಾರೆ ಎಂದು ಹೇಳಿದರು.


ಹಲವು ಸಮಾಜಮುಖಿ ಕಾರ್ಯ:
ಸಮಾಜಮುಖಿ ಚಿಂತನೆಯ ಮೂಲಕ ರೂಪತಾಳಿ 2020ರಲ್ಲಿ ಪ್ರಾರಂಭಗೊಂಡ ವಿಜಯಸಾಮ್ರಾಟ್ ಚಾರಿಟೇಬಲ್ ಟ್ರಸ್ಟ್ (ರಿ.) ಪುತ್ತೂರು ಸಂಸ್ಥೆಯು ಹತ್ತು ಹಲವು ಸಾಮಾಜಿಕ ಕಾರ್ಯಗಳ ಮೂಲಕ ಪುತ್ತೂರಿನಲ್ಲಿ ಚಿರಪರಿಚಿತವಾಗಿದೆ. ಸುಮಾರು 200ಕ್ಕೂ ಅಧಿಕ ಯುವ ತಂಡ ಸದಸ್ಯರಾಗಿ ಸಕ್ರೀಯರಾಗಿದ್ದಾರೆ. ಸಮಾಜ ಸೇವೆ, ಸಾಮಾಜಿಕ ಕಾರ್ಯದ ಜೊತೆಗೆ ಕಲೆ, ಕ್ರೀಡಾ ಕ್ಷೇತ್ರದ ಜೊತೆಗೆ ಸಾಂಸ್ಕೃತಿಕವಾಗಿ ಪ್ರೋತ್ಸಾಹ ನೀಡುತ್ತಾ ಇದೀಗ ತುಳುನಾಡಿನ ಕಲೆ ಸಂಸ್ಕೃತಿಯನ್ನು ಬಿಂಬಿಸುವ ಪುತ್ತೂರುದ ಪಿಲಿಗೊಬ್ಬು ಫುಡ್ ಫೆಸ್ಟ್-2024 ಸೀಸನ್-2 ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಆಯ್ದ ತಂಡಗಳು ಪ್ರದರ್ಶನ ನೀಡಲಿವೆ. ಕೋವಿಡ್ ಸಂದರ್ಭದಲ್ಲಿ ಹುಟ್ಟಿದ ಸಂಸ್ಥೆ ಆಗಲೇ ಸುಮಾರು 5 ಸಾವಿರ ಕುಟುಂಬಕ್ಕೆ ಆಹಾರ ಕಿಟ್ ವಿತರಣೆ, ಮನೆ ಇಲ್ಲದವರಿಗೆ ಮನೆ ಕಟ್ಟಿಕೊಡುವ ಕೆಲಸವನ್ನೂ ಮಾಡಿದೆ. ಮತ್ತೆ ಬೆಳವಣಿಗೆಯಲ್ಲಿ ಸಾಂಸ್ಕೃತಿಕವಾಗಿ ನಗರ ಪ್ರದೇಶಗಳ ವೇದಿಕೆಗಳಲ್ಲಿ ಏರ್ಪಡುತ್ತಿದ್ದ ಹುಲಿವೇಷ ಸ್ಪರ್ಧೆಗಳನ್ನು ಗ್ರಾಮೀಣ ಹಳ್ಳಿ ಪ್ರದೇಶಗಳನ್ನೊಳಗೊಂಡ ಪುತ್ತೂರಿನಂತಹ ಪ್ರದೇಶಗಳಲ್ಲಿ ಸ್ಪರ್ದೆ ಏರ್ಪಡಿಸಿ ಪುತ್ತೂರು ಭಾಗದ ಜನರಿಗೆ ಈ ಕಲೆಯನ್ನು ಪಸರಿಸುವುದರ ಜೊತೆಗೆ ರಾಜ್ಯಮಟ್ಟದ ಆಹಾರ ಮಳಿಗೆಗಳು ಫುಡ್ ಫೆಸ್ಟ್ ನಲ್ಲಿ ಪಾಲು ಪಡೆಯುತ್ತಿದ್ದು , ವಿಶಿಷ್ಟ ಬಗೆಯ ತಿಂಡಿ ತಿನಿಸುಗಳು, ಖಾದ್ಯಗಳನ್ನು ಪುತ್ತೂರಿನ ಜನತೆಗೆ ಪರಿಚಯಿಸುವುದು ಫುಡ್ ಫೆಸ್ಟ್ ಕಾರ್ಯಕ್ರಮದ ಮೂಲ ಉದ್ದೇಶವಾಗಿದೆ ಎಂದು ಸಹಜ್ ರೈ ಹೇಳಿದರು.


9 ಹುಲಿವೇಷ ತಂಡಗಳಿಗೂ ಆರಂಭದ ಪ್ರದರ್ಶನದಲ್ಲೇ ತಲಾ ರೂ.50 ಸಾವಿರ ನೀಡಿ ಗೌರವ:
ದಕ್ಷಿಣ ಕನ್ನಡ ಜಿಲ್ಲೆಯ ಪ್ರಖ್ಯಾತ ಆಯ್ದ 9 ಹುಲಿವೇಷ ತಂಡಗಳನ್ನು ಆಹ್ವಾನಿಸಿ ಅವರೊಳಗೆ ಉತ್ತಮ ನಿರ್ವಹಣೆ ಮಾಡಿದ ತಂಡಕ್ಕೆ ಪ್ರಥಮ ಬಹುಮಾನ ರೂ 3 ಲಕ್ಷ ದ್ವಿತೀಯ ಬಹುಮಾನ 2 ಲಕ್ಷ, ಹಾಗೂ ತೃತೀಯ ಬಹುಮಾನ 1 ಲಕ್ಷ ಹಾಗೂ ಪ್ರೋತ್ಸಾಹಕ ಬಹುಮಾನ ನೀಡಿ ಗೌರವಿಸಲಾಗುವುದು ಮಾತ್ರವಲ್ಲದೆ ಭಾಗಿಯಾದ ತಂಡಗಳಿಗೆ ತಲಾ 50,೦೦೦ ಗೌರವ ಸಂಭಾವನೆಯನ್ನು ನೀಡಿ ಗೌರವಿಸಲಾಗುವುದು. ಸಮಗ್ರ ತಂಡ ಪ್ರಶಸ್ತಿ, ಸಮಗ್ರ ಶಿಸ್ತಿನ ತಂಡ ಗುಂಪು ಪ್ರಶಸ್ತಿ ವಿಭಾಗದಲ್ಲಿ ಉತ್ತಮ ಪ್ರವೇಶ ಹಾಗೂ ನಿರ್ಗಮನ, ಉತ್ತಮ ತಾಸ, ಉತ್ತಮ ಬಣ್ಣ ಉತ್ತಮ ಧರಣಿ ಮಂಡಲ ಕುಣಿತ ವೈಯುಕ್ತಿಕ ಪ್ರಶಸ್ತಿ ವಿಭಾಗದಲ್ಲಿ ಕಪ್ಪು ಹುಲಿ, ಮರಿ ಹುಲಿ ಪುತ್ತೂರುದ ಹುಲಿ, ಮುಡಿ ಹಾರಿಸುವುದು, ನಾಣ್ಯ ತೆಗೆಯುವುದಕ್ಕೆ ವಿಶೇಷ 10,೦೦೦ ನಗದು ಬಹುಮಾನದ 10 ಪ್ರತ್ಯೇಕ ವೈಯುಕ್ತಿಕ ಬಹುಮಾನವಿದೆ. ಪ್ರತಿ ತಂಡದಲ್ಲಿ 15 ಹುಲಿವೇಷ ಹಾಗೂ ಪ್ರತಿ ತಂಡಕ್ಕೆ ಹುಲಿ ವೇಷ ಕುಣಿತದ ಕಲಾ ಪ್ರದರ್ಶನ ನೀಡಲು 22 ನಿಮಿಷದ ಕಾಲಾವಕಾಶವಿರುತ್ತದೆ. ಈ ಕ್ಷೇತ್ರದಲ್ಲಿ ಉತ್ತಮ ಪರಿಣತಿ ಹೊಂದಿದ ಜಿಲ್ಲೆಯ ಖ್ಯಾತ ತೀರ್ಪುಗಾರರು ಭಾಗವಹಿಸಲಿದ್ದಾರೆ. ಪ್ರತಿ ತಂಡಕ್ಕೂ ಆರಂಭದಲ್ಲೇ ರೂ. 50ಸಾವಿರ ನೀಡಿ ಗೌರವಿಸಲಾಗುವುದು ಎಂದು ಸಹಜ್ ರೈ ಹೇಳಿದರು.


ಲಕ್ಷಕ್ಕೂ ಮೀರಿ ಜನ ಸೇರುವ ನಿರೀಕ್ಷೆ
ಕಾರ್ಯಕ್ರಮದಲ್ಲಿ ಸ್ಯಾಂಡಲ್ ವುಡ್ ನಾಯಕ ನಟ ಶ್ರೀಮುರಳಿ, ಶಿವಧ್ವಜ್, ರೂಪೇಶ್ ಶೆಟ್ಟಿ, ಅರವಿಂದ್ ಕೆ.ಪಿ., ಮಿಸ್ ಕರ್ನಾಟಕ ಕು.ವಿಜೇತ ಪೂಜಾರಿ, ಸರಿಗಮಪ ಖ್ಯಾತಿಯ ಗಾಯಕಿ ಸಮನ್ವಿ ರೈ ಮುಂತಾದವರು ಭಾಗವಹಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಪುತ್ತೂರು ಹಾಗೂ ಸುತ್ತಲಿನ ಹತ್ತುರಿನಿಂದ ಲಕ್ಷಕ್ಕೂ ಅಧಿಕ ಜನ ಸೇರುವ ನಿರೀಕ್ಷೆಯಿದೆ ಎಂದು ಸಹಜ್ ರೈ ಹೇಳಿದರು.


ಅ.5ಕ್ಕೆ ಫುಡ್ ಫೆಸ್ಟ್ ಉದ್ಘಾಟನೆ, 50ಕ್ಕೂ ಅಧಿಕ ಸ್ಟಾಲ್:
ಅಕ್ಟೋಬರ್ 5 ಶನಿವಾರ ಸಂಜೆ ಗಂಟೆ 4:೦೦ ಫುಡ್ ಫೆಸ್ಟ್ ಕಾರ್ಯಕ್ರಮವನ್ನು ಯು.ಆರ್.ಪ್ರಾಪರ್ಟಿಯ ಉಜ್ವಲ್ ಪ್ರಭು ಉದ್ಘಾಟಿಸಲಿದ್ದು, ಪಾಪ್ಯುಲರ್ ನ್ಯೂಟ್ರಿಷಿಯಸ್ ನ ನರೇಂದ್ರ ಕಾಮತ್ ಪಾಲ್ಗೊಳ್ಳುವರು. ಪಕೋಡ ಮಾದರಿಯ ಸುಂದರ ಸುಸಜ್ಜಿತ ಆಹಾರ ಮಳಿಗೆಯಲ್ಲಿ ಬರ್ಗರ್, ಸ್ಯಾಂಡ್ ವಿಚ್, ಕೇರಳ ಹುಟ್ಟು ಲೈವ್ ಮಸಾಲೆ ದೋಸೆ, ಲೈವ್ ಹಲಸಿನ ಹೋಳಿಗೆ, ಲೈನ್ ರುಮಾಲಿ ರೊಟ್ಟಿ, ಕರಾವಳಿಯ ರುಚಿಕರ ಖಾದ್ಯಗಳ ಸಹಿತ ರಾಜ್ಯದ ವಿವಿಧ ಭಾಗಗಳಿಂದ ಬಂದಿರುವ ಐವತ್ತು ವಿವಿಧ ಖಾದ್ಯಗಳ ಮಳಿಗೆಗಳು ವಿಜೃಂಭಿಸಲಿದೆ. ಯಾವುದೇ ಸಂದರ್ಭದಲ್ಲಿ ಕಸ ಕಡ್ಡಿಗಳು ಮಾರ್ಗದಲ್ಲಿ ಅಥವಾ ಆಹಾರ ಮಳಿಗೆಗಳ ಸುತ್ತಮುತ್ತ ಕಸದ ಬುಟ್ಟಿಯಲ್ಲಿ ತುಂಬಿ ತುಳುಕದಂತೆ ಮುಂಜಾಗ್ರತೆಯನ್ನು ವಹಿಸಲಾಗುವುದು. ಒಟ್ಟಾರೆ ಆಹಾರ ಮಳಿಗೆಗಳ ಮಾಲಕರಿಗೆ ಸ್ವಚ್ಛತೆಗೆ ಆದ್ಯತೆಯ ಜೊತೆಗೆ ಪ್ರೋತ್ಸಾಹಿಸುವ ನಿಟ್ಟಿನಲ್ಲಿ ವಿಶೇಷ ಸ್ಪರ್ಧೆಯನ್ನು ಏರ್ಪಡಿಸಲಾಗಿದೆ. ಪ್ರಥಮ ಬಹುಮಾನ 5,೦೦೦, ದ್ವಿತೀಯ ಬಹುಮಾನ 3೦೦೦, ತೃತೀಯ ಬಹುಮಾನ 2೦೦೦ ಜೊತೆಗೆ ಪ್ರಮಾಣ ಪತ್ರವನ್ನು ನೀಡಿ ಗೌರವಿಸಲಾಗುವುದು, ಶೌಚಾಲಯದ ವ್ಯವಸ್ಥೆ ಮಾಡಲಾಗಿದ್ದು, ಪುರುಷರು, ಮಹಿಳೆಯರಿಗೆ ಪ್ರತ್ಯೇಕ ಶೌಚಾಲಯದ ವ್ಯವಸ್ಥೆ ಮಾಡಲಾಗಿದೆ ಎಂದು ವಿಜಯ ಸಾಮ್ರಾಟ್ ಮತ್ತು ಪಿಲಿಗೊಬ್ಬು ಸಮಿತಿ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಹೇಳಿದರು.


ಸ್ವಚ್ಚತಾ ಸೇನಾನಿಗಳಿಗೆ ವಿಶೇಷ ಗೌರವ:
ಕಳೆದ ವರ್ಷ ಅತ್ಯಂತ ಶ್ರದ್ದಾಪೂರ್ವಕವಾಗಿ ಸ್ವತಃ ಕಾರ್ಯವನ್ನು ನೀಡಿ ಕಾರ್ಯಕ್ರಮದ ಯಶಸ್ವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ವಚ್ಛತಾ ಸೇವಕರಾದ ಗದಗ್ ಮೂಲದ ರೇಣಾಕಾ ಮತ್ತು 10 ಸ್ವಚ್ಛತಾ ಸಿಬ್ಬಂದಿಗಳಿಗೆ ಗೌರವಾರ್ಪಣೆ ಮತ್ತು ಸ್ವಚ್ಚತಾ ಸಿಬ್ಬಂದಿಗಳ ಕುಟುಂಬದ ವಿದ್ಯಾರ್ಥಿಗಳಿಗೆ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ಹಸ್ತಾಂತರ ಮೂಲಕ ವಿಜಂiiಸಾಮ್ರಾಟ್‌ನ ಸಾಮಾಜಿಕ ಸೇವಾ ಕಾರ್ಯ ನಡೆಯಲಿದೆ ಎಂದು ಸಹಜ್ ರೈ ಅವರು ಹೇಳಿದರು.


ಸುಸಜ್ಜಿತ ವಿಶಾಲವಾದ ವಾಹನ ಪಾರ್ಕಿಂಗ್:
ಕಾರ್ಯಕ್ರಮಕ್ಕೆ ಆಗಮಿಸುವ ಸಾರ್ವಜನಿಕರು ತಮ್ಮ ತಮ್ಮ ವಾಹನಗಳನ್ನು ಕಿಲ್ಲೆ ಮೈದಾನ, ಮಹಾಲಿಂಗೇಶ್ವರ ದೇವಸ್ಥಾನದ ರಥ ನಿಲ್ಲಿಸುವ ಜಾಗದ ಮುಂಭಾಗ, ನಾಗನಕಟ್ಟೆ ಹಾಗೂ ಅಯ್ಯಪ್ಪ ಗುಡಿಯ ಮುಂಭಾಗ, ಖಾಸಗಿ ಬಸ್ ನಿಲ್ದಾಣದ ಮುಂಭಾಗದ ಕಂಬಳ ಕೆರೆಯ ಎಡಭಾಗ ಹಾಗೂ ಮೂಲ ನಾಗ ಸನ್ನಿಧಿಯ ಮುಂಭಾಗದಲ್ಲಿ, ಪಾರ್ಕಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಸಾರ್ವಜನಿಕರು ವಾಹನದಟ್ಟಣೆಯನ್ನು ನಿಯಂತ್ರಿಸುವಲ್ಲಿ ಕೈಜೋಡಿಸಬೇಕೆಂದು ಸಮಿತಿ ಸಂಚಾಲಕ ನಾಗರಾಜ್ ಭಟ್ ನಡುವಡ್ಕ ಅವರು ಹೇಳಿದರು. ಪತ್ರಿಕಾಗೋಷ್ಠಿಯಲ್ಲಿ ಪಿಲಿಗೊಬ್ಬು ಸಮಿತಿ ಅಧ್ಯಕ್ಷ, ಫುಡ್ ಫೆಸ್ಟ್ ರೂಪಾರಿ ಪುತ್ತೂರು ಉಮೇಶ್ ನಾಯಕ್, ಸಂಚಾಲಕ ನಾಗರಾಜ ಭಟ್, ಕಾರ್ಯಾಧ್ಯಕ್ಷ ಸುಜಿತ್ ರೈ ಪಾಲ್ತಾಡ್, ಕಾರ್ಯಾಧ್ಯಕ್ಷ ಶರತ್ ಆಳ್ವ ಕೂರೆಲು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here