ಸಂಪ್ಯದಲ್ಲಿ ಪುತ್ತೂರು ದಸರಾ ಮಹೋತ್ಸವ- ಧಾರ್ಮಿಕ ಸಭೆ ಉದ್ಘಾಟನೆ

0

ಧಾರ್ಮಿಕ ಆಚರಣೆಯಿಂದ ಸಂಪ್ರದಾಯ, ಸಂಸ್ಕೃತಿ ಉಳಿವು – ಬೂಡಿಯಾರ್ ರಾಧಾಕೃಷ್ಣ ರೈ

ಪುತ್ತೂರು: ನಮ್ಮ ಪೂರ್ವಜರ ಕಾಲದಿಂದ ನಡೆದುಕೊಂಡು ಬಂದ ಅನೇಕ ಧಾರ್ಮಿಕ ಆಚರಣೆಗಳ ವಿಧಿ ವಿಧಾನಗಳು ಎಂದೆಂದೂ ಅಳಿಸಿ ಹೋಗುವುದಿಲ್ಲ. ಧಾರ್ಮಿಕ ಆಚರಣೆಯಿಂದ ಸಂಪ್ರದಾಯ, ಸಂಸ್ಕೃತಿಯ ಉಳಿವು ಆಗುತ್ತದೆ ಎಂದು ಕಾರ್ಪಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಬೂಡಿಯಾರು ರಾಧಾಕೃಷ್ಣ ರೈ ಅವರು ಹೇಳಿದರು.‌


ಸಂಪ್ಯ ಶ್ರೀ ವಿಷ್ಣುಮೂರ್ತಿ ಅನ್ನಪೂರ್ಣೇಶ್ವರಿ ಕ್ಷೇತ್ರದಲ್ಲಿ ಪುತ್ತೂರು ದಸರಾ ನವದುರ್ಗಾರಾಧನಾ ಸಮಿತಿಯ ನೇತೃತ್ವದಲ್ಲಿ ನಡೆಯುವ ಪುತ್ತೂರು ದಸರಾ ಮಹೋತ್ಸವದಲ್ಲಿ ಅ.3ರಂದು ಸಂಜೆ ನಡೆದ ಧಾರ್ಮಿಕ ಸಭಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ದೇವಸ್ಥಾನಗಳ ಉತ್ಸವಾದಿಗಳು, ನಾಗಾರಾಧನೆ, ಭೂತರಾಧನೆ ಜತೆಗೆ ಭಜನಾ ಮಂದಿರಗಳ ಮಂಗಲೋತ್ಸವಗಳು ಭಕ್ತಿ, ಶ್ರದ್ಧೆಯಿಂದ ನಡೆಯುತ್ತಿರುವ ಭಕ್ತರ ಮನಸ್ಸಿನ ಭಾವನೆಗಳ ಪ್ರತೀಕ. ಇದರ ಜೊತೆ ಹಿಂದುತ್ವವನ್ನು ಗಟ್ಟಿಗೊಳಿಸಿ ಧಾರ್ಮಿಕ ಆಚರಣೆಗಳು ಮುಖ್ಯ ಎಂದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಅಧ್ಯಕ್ಷ ಯು ಲೋಕೇಶ್ ಹೆಗ್ಡೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ಚಲನಚಿತ್ರದ ಇಬ್ಬರು ನಟರಿಗೆ ಸನ್ಮಾನ:
ಕಾರ್ಯಕ್ರಮಕ್ಕೆ ವಿಶೇಷ ಆಕರ್ಷಣೆಯಾಗಿ ಆಗಮಿಸಿದ ತುಡರ್ ಚಲನಚಿತ್ರದ ನಾಯಕ ನಟ ಸಿದ್ಧಾರ್ಥ್, ಆರಾಟ ಕನ್ನಡ ಚಲನಚಿತ್ರದ ಸುನೀಲ್ ನೆಲ್ಲಿಗುಡ್ಡೆ ಅವರನ್ನು ಇದೇ ಸಂದರ್ಭದಲ್ಲಿ ಸಮಿತಿ ವತಿಯಿಂದ ಸನ್ಮಾನಿಸಲಾಯಿತು. ಸನ್ಮಾನಿತರು ದೇವರ ಕಾರ್ಯದಲ್ಲಿ ಭಾಗವಹಿಸಲು ಅವಕಾಶ ನೀಡಿದ ಊರವರಿಗೆ ಕೃತಜ್ಞತೆ ಸಲ್ಲಿಸಿದರು. ಎಮ್.ಆರ್.ಪಿ.ಎಲ್‌ನ ಸೀತಾರಾಮ ರೈ ಕೈಕಾರ, ಚಲನಚಿತ್ರ ನಿರ್ದೇಶಕ ರಮಾನಂದ್, ಚಲನಚಿತ್ರ ನಟ ಕೀರ್ತೆಶ್, ಪುತ್ತೂರು ದಸಾರ ಮಹೋತ್ಸವ ಸಮಿತಿ ಕಾರ್ಯಾಧ್ಯಕ್ಷ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ, ಪ್ರಧಾನ ಕಾರ್ಯದರ್ಶಿ ನೇಮಾಕ್ಷ ಸುವರ್ಣ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪುತ್ತೂರು ದಸರಾ ಮಹೋತ್ಸವ ಸಮಿತಿ ಸಂಚಾಲಕ ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಮಿತಿ ಉಪಾಧ್ಯಕ್ಷ ಜಯಂತ ಶೆಟ್ಟಿ ಕಂಬಳತ್ತಡ್ಡ ಸ್ವಾಗತಿಸಿ, ಗೌರವ ಸಲಹೆಗಾರ ರಾಧಾಕೃಷ್ಣ ಬೋರ್ಕರ್ ವಂದಿಸಿದರು. ಉದಯ ಕುಮಾರ್ ರೈ ಕಾರ್ಯಕ್ರಮ ನಿರೂಪಿಸಿದರು.

ಕ್ಷೇತ್ರದಲ್ಲಿ ಬ್ರಹ್ಮಕಲಶಕ್ಕೆ ಸಿದ್ಧತೆ
ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನದ ಪುನರ್‌ನಿರ್ಮಾಣ ಬ್ರಹ್ಮಕಲಶೋತ್ಸವ ಡಿಸೆಂಬರ್, ಜನವರಿ ತಿಂಗಳಲ್ಲಿ ನಡೆಯಲಿದೆ. ಈ ನಿಟ್ಟಿನಲ್ಲಿ ಊರವರ ಪೂರ್ಣ ಸಹಕಾರ ನೀಡುತ್ತಿದ್ದಾರೆ. ನವರಾತ್ರಿಯ ಸಂದರ್ಭ ನಡೆಯುವ ಕಾರ್ಯಕ್ರಮಕ್ಕೂ ಊರವರ ಪೂರ್ಣ ಸಹಕಾರ ನೀಡುತ್ತಿರುವುದು ತಾಯಿಯ ಕೃಪೆ.
ಕುಕ್ಕಾಡಿ ತಂತ್ರಿ ಪ್ರೀತಂ ಪುತ್ತೂರಾಯ

LEAVE A REPLY

Please enter your comment!
Please enter your name here