ಪುತ್ತೂರು:ಬೆಥನಿ ಐಟಿಐಯಲ್ಲಿ ನೂತನ ವಿದ್ಯಾರ್ಥಿಗಳಿಗೆ ಸ್ವಾಗತ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸಂಸ್ಥೆಯ ನಿರ್ದೇಶಕ ರೆ. ಫಾ. ಜೈಸನ್ ಸೈಮನ್ ಒ ಐ ಸಿ ಮಾತನಾಡಿ, ವಿದ್ಯಾರ್ಥಿಗಳು ಈ ಸಂಸ್ಥೆಯಲ್ಲಿ ಒಂದು ಅಥವಾ ಎರಡು ವರ್ಷಗಳ ತರಬೇತಿಯನ್ನು ಪೂರ್ಣಗೊಳಿಸಿದ ನಂತರ ಸಂಸ್ಥೆಯನ್ನು ಬಿಟ್ಟು ಹೋಗುವಾಗ ಈ ಸಂಸ್ಥೆಯಲ್ಲಿ ನೀವು ಕಲಿತಿದ್ದೀರಿ ಎನ್ನುವ ಕುರಿತು ಒಂದು ಧನಾತ್ಮಕ ಕುರುಹನ್ನು ಬಿಟ್ಟು ಹೋಗಬೇಕು, ಆ ಮೂಲಕ ಮುಂಬರುವ ವಿದ್ಯಾರ್ಥಿಗಳಿಗೆ ಮಾರ್ಗದರ್ಶಕರಾಗಬೇಕು ಹಾಗೆಯೇ ಅನುಭವೀ ಅಧ್ಯಾಪಕರಿಂದ ಸಾಧ್ಯವಾದಷ್ಟು ಕೌಶಲ್ಯವನ್ನು ಪಡೆದುಕೊಂಡು ಸಮಾಜಕ್ಕೆ ಉತ್ತಮ ಕೊಡುಗೆ ನೀಡುವವರಾಗಿ ಎಂದರು.
ಹಿರಿಯ ವಿದ್ಯಾರ್ಥಿಗಳು ನೂತನ ವಿದ್ಯಾರ್ಥಿಗಳಿಗೆ ಗುಲಾಬಿ ಹೂವನ್ನ ನೀಡಿ ಸ್ವಾಗತಿಸಿದರು. ಸಂಸ್ಥೆಯ ಪ್ರಾಚಾರ್ಯ ಸಜಿ ಕೆ ತೋಮಸ್, ತರಬೇತಿ ಅಧಿಕಾರಿ ಜಾನ್ ಪಿ ಎಸ್, ನೂತನ ಸಿಬ್ಬಂದಿ ವರ್ಗದ ಕಾರ್ಯದರ್ಶಿ ಹರಿಪ್ರಸಾದ್ ರೈ ವೇದಿಕೆಯಲ್ಲಿದ್ದು ನೂತನ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಕಿರಿಯ ತರಬೇತಿ ಅಧಿಕಾರಿ ಸಂತೋಷ್ ಪಿಂಟೋ ಸ್ವಾಗತಿಸಿದರು. ಜೇಮ್ಸ್ ಕೆ ಎ ವಂದನಾರ್ಪಣೆಗೈದರು.ಸುಬ್ರಾಯ ನಾಯಕ್ ಕಾರ್ಯಕ್ರಮವನ್ನು ನಿರೂಪಿಸಿದರು.