ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಗಾಂಧಿ, ಲಾಲ್ ಬಹುದ್ದೂರ್ ಶಾಸ್ತ್ರಿ ದಿನಾಚರಣೆ

0

ಪುತ್ತೂರು: ಸಂತ ಫಿಲೋಮಿನಾ ಅನುದಾನಿತ ಪ್ರೌಢಶಾಲೆಯಲ್ಲಿ ಗಾಂಧಿ ಜಯಂತಿ ಹಾಗೂ ಲಾಲ್ ಬಹುದ್ದೂರ್ ಶಾಸ್ತ್ರಿ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಶಾಲಾ ವಿದ್ಯಾರ್ಥಿಗಳಿಂದ ಸರ್ವಧರ್ಮ ಪ್ರಾರ್ಥನಾ ವಿಧಿ ನೆರವೇರಿತು. ವಿವಿಧ ಸ್ಪರ್ಧೆಗಳಲ್ಲಿ ಜಯಿಸಿದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು. ಸಂತ ಫಿಲೋಮಿನಾ ಮೆನ್ಸ್ ಹಾಸ್ಟೆಲ್ ವಾರ್ಡನ್ ಫಾ| ರೂಪೇಶ್ ತಾವ್ರೊ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರ್ ಶಾಸ್ತ್ರಿರವರ ಸತ್ಯ ಹಾಗೂ ಸರಳತೆಯ ಬಗ್ಗೆ ತಿಳಿಸಿದರು.

ಶಾಲಾ ಮುಖ್ಯಗುರು ಫಾ| ಮ್ಯಾಕ್ಸಿಮ್ ಡಿಸೋಜ ದಿನದ ಮಹತ್ವ ತಿಳಿಸಿದರು.ಶಾಲಾ ಶಿಕ್ಷಕಿ ಆಶಾ ರೆಬೆಲ್ಲೊ ಸ್ವಾಗತಿಸಿದರು. ಶಾಲಾ ಶಿಕ್ಷಕಿ ಸಂಧ್ಯಾ ಕೆ.ಎನ್ ವಂದಿಸಿದರು. ವಿದ್ಯಾರ್ಥಿಗಳಿಂದ ಸ್ವಚ್ಛತಾ ಜಾಥಾ ಕಾರ್ಯಕ್ರಮ ಜರುಗಿತು. ಶಿಕ್ಷಕಿಯರಾದ ಮೋಲಿ ಫೆರ್ನಾಂಡಿಸ್ ಮತ್ತು ಆಶಾ ರೆಬೆಲ್ಲೊ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ ವೃಂದದವರು ಸಹಕರಿಸಿದರು.

LEAVE A REPLY

Please enter your comment!
Please enter your name here