ಬುರೂಜ್ ಶಾಲೆ: ಹುಬ್ಬೆ ರಸೂಲ್ ಮಿಲಾದ್ ಫೆಸ್ಟ್

0

puttur: ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿ ಪ್ರವಾದಿಯವರ ಜನ್ಮದಿನ ಅಂಗವಾಗಿ ಮಿಲಾದ್ ಫೆಸ್ಟ್ ನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಧರ್ಮಗುರು ಬುರೂಜ್ ಶಾಲಾ ಸದರ್ ಅಬೂಬಕ್ಕರ್ ಸಿದ್ದೀಕ್ ಸಖಾಫಿಯವರ ದುಆದೊಂದಿಗೆ ಕಾರ್ಯಕ್ರಮ ಆರಂಭವಾಯಿತು. ಈ ಸಂದರ್ಭದಲ್ಲಿ ಬಸ್ತಿಕೋಡಿ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಹಮ್ದಾನಿ, ಪರಾರಿ ಜುಮಾ ಮಸೀದಿ ಖತೀಬರಾದ ಹಝ್ರತ್ ಅಯಾನ್ ರಝಾ, ಉಳ್ತೂರಿನ ಯು.ಎ. ಅಬ್ದುಲ್ ಹಮೀದ್ ಅಲ್ ಪುರ್ಖಾನಿ, ಖಮರುಲ್ ಇಸ್ಲಾಮ್ ರಝಾನಗರ ಖತೀಬರಾದ ಹಝ್ರತ್ ಸಮಿಯುಲ್ಲಾ ಖಾದ್ರಿ ಉಪಸ್ಥಿತರಿದ್ದರು .

ಮದ್ರಸ ವಿದ್ಯಾರ್ಥಿಗಳಿಂದ ಕಿರಾಹತ್ ಪಠಣ, ನಾಥ್ ,ಪ್ರವಾದಿ ಚರಿತ್ರೆ ಈ ಬಗ್ಗೆ ಸ್ಪರ್ಧೆ ನಡೆಯಿತು. ನಂತರ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು .ಈ ಸಂಧರ್ಭದಲ್ಲಿ ಸಂಚಾಲಕ ಶೇಖ್ ರಹ್ಮತ್ತುಲ್ಲಾಹ್ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here