ಉಪ್ಪಿನಂಗಡಿ: ಅ.6ರಂದು ಸಂಜೆ ಸುರಿದ ಭಾರೀ ಮಳೆಗೆ ಕೆಮ್ಮಾರ ಬಡ್ಡಮೆ ಸಮೀಪ ನೀರು ತೋಟಕ್ಕೆ ನುಗ್ಗಿದೆ.
ಈ ಭಾಗದಲ್ಲಿ ಭಾರೀ ಮಳೆಯಾಗಿದ್ದು ಬಡ್ಡಮೆ ತೋಡಿನಿಂದ ಮಳೆನೀರು ಪಕ್ಕದ ತೋಟ,ಗದ್ದೆಗಳಿಗೆ ನುಗ್ಗಿದೆ ಎಂದು ವರದಿಯಾಗಿದೆ.
ತಡೆಗೋಡೆ ನಿರ್ಮಿಸಿ;
ಭಾರೀ ಮಳೆಯಿಂದಾಗಿ ತೋಡಿನಲ್ಲಿ ನೀರಿನ ಮಟ್ಟ ಏರಿಕೆಯಾಗಿ ಕಾಲುದಾರಿ ಮತ್ತು ತೋಟಕ್ಕೆ ನೀರು ನುಗ್ಗಿದೆ. ಇದಕ್ಕೆ ತಡೆಗೋಡೆ ನಿರ್ಮಾಣದ ಅವಶ್ಯಕತೆ ಇದೆ. ಇಲ್ಲಿ ಶಾಲಾ ಮಕ್ಕಳು ನಡೆದುಕೊಂಡು ಹೋಗುತ್ತಾರೆ. ಆದ್ದರಿಂದ ಸಂಬಂಧಪಟ್ಟವರು ಅನಾಹುತ ಸಂಭವಿಸುವ ಮೊದಲೇ ಎಚ್ಚೆತ್ತುಕೊಂಡು ತಡೆಗೋಡೆ ಅಥವಾ ತಡೆಬೇಲಿ ನಿರ್ಮಿಸುವ ಮೂಲಕ ಶಾಶ್ವತ ಪರಿಹಾರ ಒದಗಿಸುವಂತೆ ಕೆಮ್ಮಾರ ಶಾಲಾ ಎಸ್‌ಡಿಎಂಸಿ ಅಧ್ಯಕ್ಷ ಅಝೀಝ್ ಬಿ.ಕೆ. ಒತ್ತಾಯಿಸಿದ್ದಾರೆ.