ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆ ‘ಪಿಲಿಪಜ್ಜೆ’ ಹುಲಿಕುಣಿತ ಪ್ರದರ್ಶನ-ಜನರ ಕಣ್ಮನ ಸೆಳೆದ ಶ್ರೀದೇವಿ ಕಲ್ಲೇಗ ಹುಲಿ ವೇಷಧಾರಿಗಳ ಕುಣಿತ

0

ಪುತ್ತೂರು : ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆ ಇದರ ಆಶ್ರಯದಲ್ಲಿ ಪ್ರಥಮ ವರ್ಷದ ‘ಪಿಲಿಪಜ್ಜೆ’ ಹುಲಿ ಕುಣಿತ ಪ್ರದರ್ಶನ ನಗರದ ಬಪ್ಪಳಿಗೆ ಸಿಂಗಾಣಿಯ ಹಿಲ್ ಗ್ರೌಂಡ್ ನಲ್ಲಿ ವಿಜೃಂಭಣೆಯಿಂದ ನಡೆಯಿತು.

ಶ್ರೀ ದೇವಿ ಕಲ್ಲೇಗ ಹುಲಿ ವೇಷಧಾರಿಗಳ ತಂಡ ಪ್ರದರ್ಶನ ನೀಡುವ ಗಮನ ಸೆಳೆಯಿತು. ಸುಮಾರು 500 ಕ್ಕೂ ಅಧಿಕ ಮಂದಿಯ ಗಮನ ಸೆಳೆದ ಶ್ರೀದೇವಿ ಕಲ್ಲೇಗ ಹುಲಿ ವೇಷಧಾರಿಗಳು, ವಿವಿಧ ಶೈಲಿಯ ನೃತ್ಯದ ಪ್ರದರ್ಶನ ನೀಡಿದರು. ತೆಂಗಿನಕಾಯಿಯನ್ನ ಕೈಯಲ್ಲಿ ಒಡೆಯುವ ಪ್ರದರ್ಶನ, ನಿಂಬೆ ಹಣ್ಣು ತಲೆಯಲ್ಲಿ ಒಡೆಯುವ ಪ್ರದರ್ಶನ, ಹಣವನ್ನು ವಿವಿಧ ಭಂಗಿಯಲ್ಲಿ ಹೆಕ್ಕುವ ಪ್ರದರ್ಶನ, ತೆಂಗಿನ ಕಾಯಿಯ ಸಿಪ್ಪೆಯನ್ನ ಬಾಯಿಯಲ್ಲಿ ಕಚ್ಚಿ ತಗೆಯುವುದು ಹೀಗೆ ಹತ್ತು ಹಲವು ಪ್ರದರ್ಶನ ನೀಡಿ ಗಮನಸೆಳೆದರು.

ಕಾರ್ಯಕ್ರಮದಲ್ಲಿ ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆಯ ಶರತ್ ಪುತ್ತೂರು, ಗಿರೀಶ್ ಸಿಂಗಾಣಿ, ಅರುಣ್ ಬಪ್ಪಳಿಗೆ, ಲಿಖಿತ್ ಸಿಂಗಾಣಿ, ಬಾಲಕೃಷ್ಣ ಸಿಂಗಾಣಿ, ಶರತ್ ಬಪ್ಪಳಿಗೆ, ಸಂದೀಪ್ ಬಪ್ಪಳಿಗೆ, ರವಿ ಬಪ್ಪಳಿಗೆ, ಸುರೇಶ್ ನೆಕ್ಕಿತಪುಣಿ, ಗಣೇಶ್ ಸಿಂಗಾಣಿ, ಸುಬ್ರಹ್ಮಣ್ಯ ಸಿಂಗಾಣಿ, ನಿವೃತ್ತ ಸೈನಿಕ ನೀಲಪ್ಪ ಗೌಡ, ಸ್ಟೀವನ್ ವೇಗಸ್ ಮೊದಲಾದವರು ಉಪಸ್ಥಿರಿದ್ದರು.

ಇದೇ ಮೊದಲ ಬಾರಿಗೆ ಶಿವಾಮೃತ ಫ್ರೆಂಡ್ಸ್ ಬಪ್ಪಳಿಗೆ ಹುಲಿವೇಷ ಕುಣಿತ ಪ್ರದರ್ಶನವನ್ನ ಮಾಡಿದೆ. ಅಲ್ಲದೇ ಈಗಾಗಲೇ ಹತ್ತು ಹಲವು ಕಾರ್ಯಕ್ರಮಗಳನ್ನ ಮಾಡಿ ಬಡವರಿಗೆ ನೆರವು, ಚಿಕಿತ್ಸೆಗೆ ಹಣವಿಲ್ಲದವರಿಗೆ ನೆರವು, ಬಡ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡುವ ಮೂಲಕ ಸಮಾಜದಲ್ಲಿ ಗುರುತಿಸಿಕೊಂಡಿದೆ. ಮುಂದಿನ ವರ್ಷ ಹುಲಿ ಕುಣಿತ ಪ್ರದರ್ಶನ ನೀಡುವ ಆಯ್ದ ಕೆಲವು ತಂಡಗಳನ್ನ ಕರೆದು ಅದರಲ್ಲಿ ಉಳಿಯುವ ಮೊತ್ತವನ್ನ ಬಡವರಿಗೆ ದೇಣಿಗೆ ನೀಡುವ ಆಲೋಚನೆಯನ್ನ ಮಾಡಿದೆ.

LEAVE A REPLY

Please enter your comment!
Please enter your name here