ಪುತ್ತೂರು:ಸುದ್ದಿ ಅರಿವು ಕೃಷಿ ಸೇವಾ ಕೇಂದ್ರ ಪ್ರಾಯೋಜಿತ ಸೂಕ್ಷ್ಮ ಮಾರಾಟ ಮತ್ತು ಸಣ್ಣ ಪ್ರಮಾಣದ ಉತ್ಪಾದಕರಿಂದ ಪಡೆದ ನೈಸರ್ಗಿಕ, ಪರಿಸರ ಸ್ನೇಹಿ ಉತ್ಪನ್ನಗಳ ಮಳಿಗೆ ‘ಅರಿವು ಎಂಟರ್ಪ್ರೈಸಸ್ ಅ.5ರಂದು ಎಪಿಎಂಸಿ ರಸ್ತೆಯ ಕ್ರಿಸ್ತೋಫರ್ ಕಾಂಪ್ಲೆಕ್ಸ್ನಲ್ಲಿ ಶುಭಾರಂಭಗೊಂಡಿತು.ಸುದ್ದಿ ಸಮೂಹ ಸಂಸ್ಥೆಗಳ ನಿರ್ದೇಶಕಿ ಶೋಭಾ ಶಿವಾನಂದರವರು ದೀಪ ಪ್ರಜ್ವಲಿಸಿ ಮಳಿಗೆಯನ್ನು ಉದ್ಘಾಟಿಸಿದರು.
ಅರಿವು ಅಂದರೆ ಒಳಗಿನ ಜ್ಞಾನ-ಡಾ.ಯು.ಪಿ.ಶಿವಾನಂದ:
ಸುದ್ದಿ ಸಮೂಹ ಸಂಸ್ಥೆಗಳ ಆಡಳಿತ ನಿರ್ದೇಶಕ ಡಾ.ಯು.ಪಿ.ಶಿವಾನಂದರವರು ಪ್ರಾಸ್ತಾವಿಕವಾಗಿ ಮಾತನಾಡಿ ಅರಿವು ಅಂದರೆ ಒಳಗಿನ ಜ್ಞಾನ ಎಂಬರ್ಥ.ನಮ್ಮಲ್ಲಿ ಉತ್ತಮ ಉತ್ಪನ್ನಗಳಿವೆ. ಅದರ ಅರಿವು ಜನರಿಗಿರುವುದಿಲ್ಲ.ಇಂದು ಮಾರುಕಟ್ಟೆಯಲ್ಲಿ ನಮಗೆ ಗೊತ್ತಿಲ್ಲದ ವಿಷಕಾರಕ, ಕಲಬೆರಕೆ ಉತ್ಪನ್ನಗಳಿವೆ.ಅರಿವು ಕೇಂದ್ರದ ಮೂಲಕ ಹಾನಿಕಾರಕವಲ್ಲದ ಉತ್ಪನ್ನಗಳನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಆರೋಗ್ಯಕ್ಕೆ ಪೂರಕವಾದ ಉತ್ಪನ್ನಗಳನ್ನು ಇಲ್ಲಿ ಇಟ್ಟಿದ್ದೇವೆ. ಮನೆ ಮನೆಗಳ ಉತ್ಪನ್ನಗಳಿಗೆ ತರಬೇತಿಯಿಂದ ಮಾಹಿತಿ, ಮಾರ್ಕೆಟ್ವರೆಗಿನ ವ್ಯವಸ್ಥೆಯನ್ನು ಅರಿವು ಕೇಂದ್ರದಿಂದ ಮಾಡುತ್ತಿದ್ದೇವೆ. ಸಣ್ಣ ಮಟ್ಟಿನಿಂದ ಆರಂಭ ಮಾಡಿದ್ದೇವೆ ಎಂದು ಹೇಳಿ ಸಹಕಾರ ಕೋರಿದರು.
ನವರಾತ್ರಿಯಲ್ಲಿ ಆರಂಭಿಸಿದ ಕಾರ್ಯಗಳು ವಿಜಯಿಯಾಗಲಿ-ಕೃಷ್ಣಕುಮಾರ್:
ಕ್ಯಾಂಪ್ಕೋದ ನಿವೃತ್ತ ಆಡಳಿತ ನಿರ್ದೇಶಕ ಕೃಷ್ಣಕುಮಾರ್ ಹೆಚ್.ಎಂ.ಮಾತನಾಡಿ ನವರಾತ್ರಿಯ ಮೂರನೇ ದಿನದಲ್ಲಿ ಚಂದ್ರಘಂಟಾ ಮಾತೆಯನ್ನು ಆರಾಽಸುವ ದಿನ.ಇವತ್ತು ನಾವು ಮಾಡುವ ಕಾರ್ಯಗಳು ವಿಜಯಿಯಾಗುತ್ತದೆ ಎನ್ನುವ ನಂಬಿಕೆ ಪುರಾಣದಲ್ಲಿದೆ.ನವರಾತ್ರಿಯಲ್ಲಿ ಆರಂಭ ಮಾಡಿದ ಕಾರ್ಯ ಉನ್ನತ ಮಟ್ಟಕ್ಕೇರಲಿ.ಮಕ್ಕಳಿಂದ ಹಿಡಿದು ವೃದ್ಧಾಪ್ಯದವರೆಗೆ ಒಳ್ಳೆಯ ಆಹಾರ ಕೊಟ್ಟರೆ ಅದು ಸಾರ್ಥಕ. ಪ್ರತಿಯೊಂದು ಪ್ರದೇಶಕ್ಕೆ ವಿಶಿಷ್ಟವಾದ ಆಹಾರ ಪದ್ಧತಿ ಇದೆ.ಇದನ್ನು ಮುಂದಿನ ದಿನಗಳಲ್ಲಿ ಆರಂಭ ಮಾಡುತ್ತೇವೆ.ಸ್ವಸ್ಥ ಆಹಾರದ ಮೂಲಕ ಸ್ವಸ್ಥ ಸಮಾಜ ನಿರ್ಮಾಣ ಮಾಡುವ ಆಶಯದಂತೆ ಎಲ್ಲರೂ ನಮ್ಮೊಂದಿಗೆ ಕೈಜೋಡಿಸಿ ಎಂದರು.
ಮುಂದಿನ ಪೀಳಿಗೆ ಆರೋಗ್ಯವಂತರಾಗಿರಲು ಸುರಕ್ಷಿತ ಉತ್ಪನ್ನ ಅಗತ್ಯ-ಆಶಿಷ್:
ಆಶಿಷ್ ಮಾತನಾಡಿ ಪ್ರಧಾನ ಮಂತ್ರಿಯವರ ಆಶಯದಂತೆ ಝೆಡ್ ಯೋಜನೆಯಂತೆ ಉತ್ತಮ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ಧೇಶ ಇಟ್ಟುಕೊಂಡು ಆರಂಭಿಸಿದ್ದೇವೆ.ನೈಸರ್ಗಿಕ ಹಾಗೂ ಗುಣಮಟ್ಟದ ಉತ್ಪನ್ನಗಳು ಅರಿವು ಕೇಂದ್ರದಲ್ಲಿದೆ.ಮುಂದಿನ ಪೀಳಿಗೆ ಆರೋಗ್ಯವಂತರಾಗಬೇಕಾದರೆ ಉಪಯೋಗಿಸುವಂತಹ ಉತ್ಪನ್ನಗಳು ಸುರಕ್ಷಿತವಾಗಿರಬೇಕು.ಉತ್ತಮ ಗುಣಮಟ್ಟದ ಉತ್ಪನ್ನಗಳನ್ನು ನಾವು ಮಾರಾಟ ಮಾಡಲು ಸಿದ್ಧರಿದ್ದೇವೆ. ಫೈರ್, ಮಳೆಕೊಯ್ಲು, ಚಾಕಲೇಟ್ ಮುಂತಾದ ಉತ್ಪನ್ನಗಳು ನಮ್ಮಲ್ಲಿವೆ.ಇದರ ಪ್ರಯೋಜನ ಪಡೆಯಿರಿ ಎಂದರು.
ಸೂಕ್ಷ್ಮ ಮತ್ತು ಸಣ್ಣಪ್ರಮಾಣ ಇಂಡಸ್ಟ್ರೀಸ್ ಉತ್ಪನ್ನಗಳ ಮಾರಾಟಕ್ಕೆ ಅವಕಾಶ-ಸೃಜನ್ ಊರುಬೈಲು:
ಅರಿವು ಎಂಟರ್ಪ್ರೈಸಸ್ನ ಪಾಲುದಾರ ಸೃಜನ್ ಊರುಬೈಲು ಮಾತನಾಡಿ ಸೂಕ್ಷ್ಮ ಮತ್ತು ಸಣ್ಣಪ್ರಮಾಣದ ಕೈಗಾರಿಕೆಗಳ ಉತ್ಪನ್ನಗಳ ಮಾರಾಟಕ್ಕೆ ಅವಕಾಶ ಮಾಡಿಕೊಡುವ ಉದ್ಧೇಶದಿಂದ ಅರಿವು ಕೇಂದ್ರ ಆರಂಭಿಸಿದ್ದೇವೆ.ಹಲವಾರು ಉತ್ಪನ್ನಗಳನ್ನು ನಮ್ಮ ಮೂಲಕ ಮಾರಾಟ ಮಾಡಲು ಅವಕಾಶವಿದೆ.ನಮ್ಮೊಂದಿಗೆ ಕೈಜೋಡಿಸಿದವರಿಗೆ ಧನ್ಯವಾದಗಳು ಎಂದರು.
ಕೃಷಿ ಉತ್ಪನ್ನಗಳಿಗೆ ಪುತ್ತೂರು ಶ್ರೇಷ್ಟ ಮಾರುಕಟ್ಟೆ-ಸತೀಶ್ ಮಾಬೆನ್:
ಪ್ರಧಾನ ಮಂತ್ರಿಗಳ ಕಿರು ಆಹಾರ ಸಂಸ್ಕರಣಾ ಉದ್ದಿಮೆಗಳ ಅಭಿವೃದ್ಧಿ ಯೋಜನೆ ದ.ಕ.ಜಿಲ್ಲೆಯ ಸಂಪನ್ಮೂಲ ವ್ಯಕ್ತಿ ಸತೀಶ್ ಮಾಬೆನ್ ಮಾತನಾಡಿ ಉತ್ಪನ್ನಗಳಿಗೆ ಮಾರುಕಟ್ಟೆಯನ್ನು ನಾವು ಮಾಡಬೇಕು. ಮಾರುಕಟ್ಟೆಗೆ ಗುಣಮಟ್ಟ ಮತ್ತು ಪ್ರಮಾಣ ಮುಖ್ಯ. ಈಗ ಮಾರುಕಟ್ಟೆ ವಿಸ್ತರಣೆಗೆ ಸೋಷಿಯಲ್ ಮೀಡಿಯಾ ಇದೆ. ಕೃಷಿ ಉತ್ಪನ್ನಗಳಿಗೆ ಪುತ್ತೂರು ಶ್ರೇಷ್ಟ ಮಾರುಕಟ್ಟೆಯಾಗಿದೆ ಎಂದು ಹೇಳಿ ಹಾರೈಸಿದರು.
ಕ್ರಿಸ್ತೋಫರ್ ಕಟ್ಟಡ ಮಾಲಕ ವಲೇರಿಯನ್ ಡಯಾಸ್ ದೀಪ ಬೆಳಗಿಸಿ ಶುಭಹಾರೈಸಿದರು. ಎಸ್ಸಿಡಿಸಿಸಿ ಬ್ಯಾಂಕ್ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು,ಸ್ವರ್ಣೋದ್ಯಮಿ ಕೇಶವ ಪ್ರಸಾದ್ ಮುಳಿಯ, ಕೃಷ್ಣವೇಣಿ ಮುಳಿಯ, ನಿತ್ಯ ಫುಡ್ ಪ್ರೊಡಕ್ಟ್ ನ ರಾಧಾಕೃಷ್ಣ ಇಟ್ಟಿಗುಂಡಿ, ಉಮೇಶ್ ನಾಯಕ್ ಪುತ್ತೂರು, ವೆಂಕಟರಮಣ ಗೌಡ ಕಳುವಾಜೆ,ಎಂ.ಸುಬ್ರಾಯ ಶೆಣೈ, ಕಾರ್ಪಾಡಿ ದೇವಳದ ಮಾಜಿ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧಾಕರ ರಾವ್ ಆರ್ಯಾಪು,ಪ್ರಗತಿಪರ ಕೃಷಿಕರಾದ ಸುಭಾಷ್ ರೈ ಕಡಮಜಲು, ಗೋಪಾಲಕೃಷ್ಣ ಪಟೇಲ್ ಚಾರ್ವಾಕ, ದ.ಕ.ಜೇನು ವ್ಯವಸಾಯಗಾರರ ಸಹಕಾರ ಸಂಘದ ಅಧ್ಯಕ್ಷ ಚಂದ್ರ ಕೋಲ್ಚಾರು, ಪ್ರಗತಿ ಸ್ಟಡಿ ಸೆಂಟರ್ನ ಸಂಚಾಲಕ ಪಿ.ವಿ.ಗೋಕುಲ್ನಾಥ್, ಸುದ್ದಿ ಸೌಹಾರ್ದ ಸಹಕಾರಿ ಸಂಘದ ನಿರ್ದೇಶಕರಾದ ಡಾ.ಜೆ.ಸಿ.ಅಡಿಗ, ಎನ್.ಕೆ.ಜಗನ್ನೀವಾಸ ರಾವ್, ಸುಂದರ ನಾಯ್ಕ, ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಸವಣೂರು ವಿದ್ಯಾರಶ್ಮಿ ವಿದ್ಯಾಸಂಸ್ಥೆಯ ಸೀತಾರಾಮ ರೈ ಸವಣೂರು, ನಿತ್ಯಾನಂದ ಮುಂಡೋಡಿ, ಪ್ರಸನ್ನ ಮುಂಡೋಡಿ, ನಾರಾಯಣ ರೈ ಕುಕ್ಕುವಳ್ಳಿ, ಗಣೇಶ್ ಶೆಟ್ಟಿ, ದುರ್ಗಾಪ್ರಸಾದ್ ರೈ ಕುಂಬ್ರ, ಒರಾಸರಸ್ಮಿ ಮಾಲಕರಾದ ಡಾ.ಅನುಷಾ ಮತ್ತು ವಿಶ್ವೇಶ್ವರ ಭಟ್, ಹಾರ್ದಿಕ್ ಹರ್ಬಲ್ಸ್(ಸತ್ವಮ್) ಮಾಲಕ ಮುರಳಿಕೃಷ್ಣ ಮತ್ತು ಸಿಬ್ಬಂದಿಗಳು, ವಿಮೇಡ್ ಬಬಲ್ ಡ್ರಾಪ್ ಮಾಲಕ ಮಹೇಶ್ ಭಟ್, ವಕೀಲರಾದ ನಿರ್ಮಲ್ಕುಮಾರ್ ಜೈನ್, ಉದ್ಯಮಿ ಭರತ್ ಪೈ, ಶ್ರೀ ಮಹಾಲಿಂಗೇಶ್ವರ ಗ್ಲಾಸ್ ಮತ್ತು ಪ್ಲೈವುಡ್ ಸಂಸ್ಥೆ ಮಾಲಕ ಜಗನ್ನಾಥ, ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ, ಮಾಜಿ ಪುರಸಭಾಧ್ಯಕ್ಷ ರಾಜೇಶ್ ಬನ್ನೂರು,ಶ್ರೀರಾಮಕೃಷ್ಣ ಶಾಲಾ ಸಂಚಾಲಕ ಹೇಮನಾಥ ಶೆಟ್ಟಿ ಕಾವು, ಎವಿಜಿ ಎಸೋಸಿಯೇಟ್ಸ್ನ ಎ.ವಿ. ನಾರಾಯಣ, ಯುವ ಬಂಟರ ಸಂಘದ ಮಾಜಿ ಅಧ್ಯಕ್ಷ ಶಶಿರಾಜ್ ರೈ, ಜೇನು ತರಬೇತುದಾರ ಮನಮೋಹನ ಅರಂಬ್ಯ, ಎಪಿಎಂಸಿ ಮಾಜಿ ಅಧ್ಯಕ್ಷ ಅಮ್ಮಣ್ಣ ರೈ ದೇರ್ಲ, ಉಪನ್ಯಾಸಕರಾದ ಡಾ|ಪುಂಡರೀಕ ಅಡ್ಪಂಗಾಯ, ಗೀತಾ ಪುಂಡರೀಕ, ನಿವೃತ್ತ ದೈಹಿಕ ಶಿಕ್ಷಣ ನಿರ್ದೇಶಕ ದಯಾನಂದ ರೈ ಕೋರ್ಮಂಡ, ಪುಡಾ ಸದಸ್ಯ ನಿಹಾಲ್ ಶೆಟ್ಟಿ, ಅಕ್ರಮ ಸಕ್ರಮ ಸಮಿತಿ ಸದಸ್ಯ ಮಹಮ್ಮದ್ ಬಡಗನ್ನೂರು, ರವಿಪ್ರಸಾದ್ ಶೆಟ್ಟಿ ಬನ್ನೂರು, ನಗರಸಭಾ ಮಾಜಿ ಅಧ್ಯಕ್ಷ ನೆಲ್ಲಿಕಟ್ಟೆ ಜಗದೀಶ್ ಶೆಟ್ಟಿ, ದುರ್ಗಾದೇವಿ, ಮೋಹನ್ ಗ್ರಾಫಿಕ್ಸ್ನ ಮೋಹನ್, ಕುಸುಮರಾಜ್ ಲಹರಿ, ಜೀಮ್ ತರಬೇತುದಾರ ನವನೀತ್, ವಚನಾ ಜಯರಾಮ್, ಪ್ರದೀಪ್, ರಾಮಕೃಷ್ಣ , ನಿಶಿತ್ ಮುಂಡೋಡಿ, ಲೀಲಾವತಿ ಜಯಪ್ರಕಾಶ್, ಕೂಸಪ್ಪ ಗೌಡ ನೀರ್ಪಾಡಿ, ಕೆ.ವೆಂಕಟ್ರಮಣ ಗೌಡ ಕುದ್ಕುಳಿ, ದೇವಕಿ ಕುದ್ಕುಳಿ, ಮಹೇಶ್ ಕುಮಾರ್ ಪಡ್ನೂರು, ಚಂದ್ರಶೇಖರ ಗೌಡ ಬೆದ್ರಾಳ, ಮಂಗಳ ಗೌರಿ, ವೆಂಕಪ್ಪ ಗೌಡ ದೇವಳಿಕೆ ಕೆಯ್ಯೂರು, ಗೀತಾ ಬಿರ್ಮನಕಜೆ, ಸುರೇಶ್ ಗೌಡ, ಪ್ರಶಾಂತ್ ಎಂ., ಪಿತ್ರ, ಸ್ವಸ್ತಿಕ್, ಶ್ರೀಲಕ್ಷ್ಮಿ, ರಾಜ್ದೀಪ್, ಲಕ್ಷ್ಮೀಶ್, ಜಯಶ್ರೀ ಭಟ್, ರಾಧಿಕಾ, ಅನಿ, ವಿಶ್ವೇಶ್ವರ ಭಟ್, ಅವಿನಾಶ್, ರವಿ, ಮಧು ಸುದೇಶ್, ಜಗದೀಶ್, ವಿದ್ಯಾಲಿಂಗಪ್ಪ ಗೌಡ, ಮೀನಾಕ್ಷಿ ಡಿ. ಗೌಡ, ದಿಲೀಪ್, ಪುರಂದರ, ಜಗನ್ನಾಥ, ನವನೀತ್, ರೋಹಿತ್ ಮರಿಕೆ, ಶೀಲಾವತಿ ಮರಿಕೆ, ನಮಿತಾ ದಿಲೀಪ್, ಅಚಲ್ ಉಪ್ಪಿನಂಗಡಿ, ಲೋಕೇಶ್ ಆಲಂಕಾರು, ವಾರಿಜ ಬೆಳಿಯಪ್ಪ, ಸಂಧ್ಯಾ ಶಶಿಧರ್, ಉಷಾಮಣಿ ದಯಾನಂದ್, ಅಶ್ರಫ್ ಕಟ್ಟತ್ತಾರು,ಉಮಾಶಂಕರ್, ಪ್ರಸನ್ನ ಕುಮಾರ್, ಪದ್ಮಯ್ಯ ಗೌಡ ಬರೆಪ್ಪಾಡಿ, ಸುಂದರ ರೈ ಮಂದಾರ, ಅಹಲ್ಯ ಭಟ್, ಮಹೇಶ್ ಕುಮಾರ್, ಸತೀಶ್, ಇಂಪಿರಿಯಲ್ ಫರ್ನಿಚರ್ಸ್ ಮಾಲಕರು, ರಕ್ಷಿತ್ ರೈ ಮುಗೇರುಕುಂಬ್ರ, ಗಣೇಶ್ ಶೆಟ್ಟಿ ನೆಲ್ಲಿಕಟ್ಟೆ, ಸುಪ್ರೀತ್ ಕಣ್ಣರಾಯ, ಸುದ್ದಿ ಪ್ರತಿನಿಽಗಳಾದ ರಮೇಶ್ ಕೆಮ್ಮಾಯಿ, ತಿಲಕ್ ರೈ ಅರಿಯಡ್ಕ, ವಸಂತ ಪುಣಚ, ಸುಧಾಕರ ಕಾಣಿಯೂರು, ಗಂಗಾಧರ ನಿಡ್ಪಳ್ಳಿ, ಸಿಬ್ಬಂದಿಗಳಾದ ಉಮೇಶ್ ಮಿತ್ತಡ್ಕ, ಗೌತಮ್ ಶೆಟ್ಟಿ, ಸುಧಾಕರ, ಸೇರಿದಂತೆ ಹಲವರು ಆಗಮಿಸಿ ಶುಭಹಾರೈಸಿದರು. ಅರಿವು ಎಂಟರ್ಪ್ರೈಸಸ್ನ ಇನ್ನೋರ್ವ ಪಾಲುದಾರರಾದ ಸಿಂಚನಾ ಊರುಬೈಲು ಸ್ವಾಗತಿಸಿದರು. ಸುದ್ದಿ ಕೃಷಿ ಸೇವಾ ಕೇಂದ್ರದ ಸಿಬ್ಬಂದಿಗಳು ಸಹಕರಿಸಿದರು.
ಹೋಮ್ ಮೇಡ್ ಉತ್ಪನ್ನಗಳನ್ನು ಬೆಳೆಸುವ ಉದ್ದೇಶ ಹಾಗೂ ದೂರದೃಷ್ಠಿಯ ಯೋಜನೆಯಿಂದ ಅರಿವು ಕೇಂದ್ರ ಪ್ರಾರಂಭ ಮಾಡಿದ್ದಾರೆ.ಇದೊಂದು ಪುತ್ತೂರಿನಲ್ಲಿ ಮೆರುಗನ್ನು ನೀಡುವ ಕಾರ್ಯಕ್ರಮವಾಗಿದೆ.ಈ ಸಂಸ್ಥೆ ಉತ್ತರೋತ್ತರವಾಗಿ ಬೆಳೆಯಲಿ
–ಶಶಿಕುಮಾರ್ ರೈ ಬಾಲ್ಯೊಟ್ಟು, ನಿರ್ದೇಶಕರು ಎಸ್ಸಿಡಿಸಿಸಿ ಬ್ಯಾಂಕ್
ಈ ಕೇಂದ್ರ ಸ್ಮಾಲ್ ಸ್ಕೇಲ್ ಇಂಡಸ್ಟ್ರಿಯವರಿಗೆ ಮಾರುಕಟ್ಟೆ ನಿರ್ಮಾಣ ಮಾಡುವುದು ಮತ್ತು ಕೃಷಿಗೆ ಸಂಬಂಧಿಸಿದ ಮಾಹಿತಿ ನೀಡುವುದು. ಗುಣಮಟ್ಟದ ಉತ್ಪನ್ನಗಳಿಗೆ ಬೇಡಿಕೆ ಕೊಡುವುದು ಇವರ ಉದ್ದೇಶವಾಗಿದೆ.ದೂರದರ್ಶಿತ್ವದ ಯೋಜನೆಯನ್ನು ಶಿವಾನಂದರು ಆರಂಭಿಸುತ್ತಾರೆ-
ರಾಧಾಕೃಷ್ಣ, ನಿತ್ಯ ಪ್ರಾಡಕ್ಟ್ ಮಾಲಕ
ಕೃಷಿ ಉತ್ಪನ್ನಗಳು ಆರೋಗ್ಯಪೂರ್ಣ ಉತ್ಪನಗಳನ್ನು ಮನೆಯಲ್ಲಿ ಮಾಡುತ್ತೇವೆ.ಇದಕ್ಕೆ ಮಾರುಕಟ್ಟೆ ಒದಗಿಸಿರುವುದು ಶ್ಲಾಘನೀಯ.ರೈತರಿಗೆ ಪೂರಕವಾದ ಕಾರ್ಯಗಳನ್ನು ಮಾಡಿ-
ವೆಂಕಟ್ರಮಣ ಕಳುವಾಜೆ,ಉದ್ಯಮಿ
ಉತ್ಪನ್ನಗಳನ್ನು ನೋಡಿದೆ. ಆರೋಗ್ಯಪೂರ್ಣ ಗುಣಮಟ್ಟದ ಉತ್ಪನ್ನಗಳಿವೆ. ಮಾರಾಟ ಮತ್ತು ಮಾಹಿತಿಯನ್ನು ನೀಡುವ ಅರಿವು ಕೇಂದ್ರ ಅಭಿವೃದ್ಧಿ ಹೊಂದಲಿ-
ಕಡಮಜಲು ಸುಭಾಷ್ ರೈ,ಪ್ರಗತಿಪರ ಕೃಷಿಕ
ಪುತ್ತೂರಿನಲ್ಲಿ ಪ್ರಪ್ರಥಮವಾಗಿ ಆರಂಭ ಮಾಡಿದಕ್ಕೆ ಅಭಿನಂದನೆ ಸಲ್ಲಿಸುತ್ತೇನೆ.ಇದೊಂದು ಸಮಾಜಕ್ಕೆ ಕೊಡುಗೆಯಾಗಿದೆ.ಇಲ್ಲಿ ನೈಸರ್ಗಿಕ, ಗುಣಮಟ್ಟದ ಉತ್ಪನ್ನಗಳು ಸಿಗುತ್ತಿರುವುದು ಸಂತೋಷದಾಯಕ.ಸಂಸ್ಥೆ ಅಭಿವೃದ್ಧಿ ಹೊಂದಲಿ
-ಪಂಜಿಗುಡ್ಡೆ ಈಶ್ವರ ಭಟ್, ಅಧ್ಯಕ್ಷರು,
ಬನ್ನೂರು ರೈತರ ಸೇವಾ ಸಹಕಾರಿ ಸಂಘ
ಕೃಷಿಕರಿಗೆ ಮತ್ತು ಸಣ್ಣ ಪ್ರಮಾಣದ ಕೈಗಾರಿಕೆಗಳ ಉತ್ಪನ್ನಗಳಿಗೆ ಅಗತ್ಯವಾಗಿ ಬೇಕಾದ ವ್ಯವಸ್ಥೆ. ಮಳಿಗೆ ಯಶಸ್ಸಿಯಾಗಿ ನಡೆಯಲಿ
-ಸಹಕಾರ ರತ್ನ ದಂಬೆಕ್ಕಾನ ಸದಾಶಿವ ರೈ