ಡೊನ್ ಬೊಸ್ಕೊ ಕ್ಲಬ್ ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷ:ಅಂತೋನಿ ಒಲಿವೆರಾ ಪುನರಾಯ್ಕೆ,ಕಾರ್ಯದರ್ಶಿ:ಅನಿಲ್ ಪಾಯಿಸ್,ಕೋಶಾಧಿಕಾರಿ: ವಿಕ್ಟರ್ ಡಿ’ಸೋಜ

ಪುತ್ತೂರು: ಮಾಯಿದೆ ದೇವುಸ್ ಚರ್ಚ್ ವಠಾರದಲ್ಲಿ ಕಾರ್ಯಾಚರಿಸುತ್ತಿರುವ ಡೊನ್ ಬೊಸ್ಕೊ ಕ್ಲಬ್ ಪುತ್ತೂರು ಇದರ 2024-25ನೇ ಸಾಲಿನ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಜರಗಿದ್ದು, ಅಂತೋನಿ ಒಲಿವೆರಾರವರು ಮತ್ತೊಮ್ಮೆ ಅಧ್ಯಕ್ಷರಾಗಿ ಪುನರಾಯ್ಕೆಗೊಂಡಿದ್ದಾರೆ.


ಉಪಾಧ್ಯಕ್ಷರಾಗಿ ಫೆಬಿಯನ್ ಗೋವಿಯಸ್ ದರ್ಬೆ, ಕಾರ್ಯದರ್ಶಿಯಾಗಿ ಅನಿಲ್ ಜೆ.ಪಾಯಿಸ್ ಸಾಮೆತ್ತಡ್ಕ, ಜೊತೆ ಕಾರ್ಯದರ್ಶಿಯಾಗಿ ವಾಲ್ಟರ್ ಸಿಕ್ವೇರಾ ಪರ್ಲಡ್ಕ, ಕೋಶಾಧಿಕಾರಿಯಾಗಿ ವಿಕ್ಟರ್ ಶರೋನ್ ಡಿ’ಸೋಜ ಗುಂಡ್ಯಡ್ಕ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯದರ್ಶಿಯಾಗಿ ವಿಜಯ್ ವಿಲ್ಪ್ರೆಡ್ ಡಿ’ಸೋಜ ಮುರ, ಆಂತರಿಕ ಲೆಕ್ಕ ಪರಿಶೋಧಕರಾಗಿ ವಿಲ್ಪ್ರೆಡ್ ಪಿಂಟೊ ಸಾಮೆತ್ತಡ್ಕ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಗಿಲ್ಬರ್ಟ್ ರೊನಾಲ್ಡ್ ಮೊಂತೇರೊ ಮೊಟ್ಟೆತ್ತಡ್ಕ, ಜೋನ್ ಕುಟಿನ್ಹಾ ಹಾರಾಡಿ, ಆಲನ್ ಮಿನೇಜಸ್ ಕಲ್ಲಿಮಾರು, ರಾಕೇಶ್ ಮಸ್ಕರೇನ್ಹಸ್ ಪರ್ಲಡ್ಕ, ಬ್ಯಾಪ್ಟಿಸ್ಟ್ ರೊಡ್ರಿಗಸ್ ಮುರ, ಜ್ಯೋ ಡಿ’ಸೋಜ ಚಿಕ್ಕಪುತ್ತೂರು, ರೋಶನ್ ಡಾಯಸ್ ಬಪ್ಪಳಿಗೆರವರು ಆಯ್ಕೆಯಾಗಿದ್ದಾರೆ.


ನೂತನ ಅಧ್ಯಕ್ಷರ ಪರಿಚಯ:
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಅಂತೋನಿ ಒಲಿವೆರಾರವರು ಎಪಿಎಂಸಿ ರಸ್ತೆ ಜೆಎಂಜೆ ಕಾಂಪ್ಲೆಕ್ಸ್ ಮಾಲಕರಾಗಿದ್ದು, ಇವರು ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯ, ಸಂತ ಫಿಲೋಮಿನಾ ಕಾಲೇಜಿನ ರಕ್ಷಕ-ಶಿಕ್ಷಕ ಸಂಘದ ಉಪಾಧ್ಯಕ್ಷರಾಗಿ, ಕ್ರಿಸ್ಟೋಫರ್ ಅಸೋಸಿಯೇಷನ್ ನ ಉಪಾಧ್ಯಕ್ಷರಾಗಿ ಕರ್ತವ್ಯ ನಿರ್ವಹಿಸಿರುತ್ತಾರೆ.


ನೂತನ ಕಾರ್ಯದರ್ಶಿ ಪರಿಚಯ:
ನೂತನ ಕಾರ್ಯದರ್ಶಿಯಾಗಿ ಆಯ್ಕೆಯಾದ ಅನಿಲ್ ಜೆ.ಪಾಯಿಸ್ ರವರು ಡೊನ್ ಬೊಸ್ಕೊ ಕ್ಲಬ್ ಕೋಶಾಧಿಕಾರಿಯಾಗಿ, ಜೊತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ್ದರು. ಕೆ.ಎಸ್.ಆರ್.ಟಿ.ಸಿಯಲ್ಲಿ ಬಸ್ಸು ಚಾಲಕರಾಗಿ ಕರ್ತವ್ಯ ನಿರ್ವಹಿಸಿ ಸ್ವಯಂ ನಿವೃತ್ತಿ ಹೊಂದಿ ಇದೀಗ ಫ್ಯಾಬ್ರಿಕೇಶನ್ ಸ್ವ-ಉದ್ಯಮವನ್ನು ನಡೆಸುತ್ತಿದ್ದಾರೆ.


ನೂತನ ಕೋಶಾಧಿಕಾರಿ ಪರಿಚಯ:
ನೂತನ ಕೋಶಾಧಿಕಾರಿಯಾಗಿ ಆಯ್ಕೆಯಾದ ವಿಕ್ಟರ್ ಶರೋನ್ ಡಿ’ಸೋಜರವರು ಡೊನ್ ಬೊಸ್ಕೊ ಕ್ಲಬ್ ಕೋಶಾಧಿಕಾರಿಯಾಗಿ, ಸೈಂಟ್ ಮಿಲಾಗ್ರಿಸ್ ಕ್ರೆಡಿಟ್‌ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿಯ ಪುತ್ತೂರು, ಮಂಗಳೂರು ಹಾಗೂ ಚಿಕ್ಕಮಗಳೂರು ವಿಭಾಗದ ಡಿವಿಷನ್ ಮ್ಯಾನೇಜರ್ ಆಗಿ ಕಾರ್ಯ ನಿರ್ವಹಿಸಿರುತ್ತಾರೆ. ಪ್ರಸ್ತುತ ಎಪಿಎಂಸಿ ರಸ್ತೆಯ ಜೆಎಂಜೆ ಕಾಂಪ್ಲೆಕ್ಸ್ ನಲ್ಲಿ ಸ್ವಂತ ಉದ್ಯಮ ಕ್ಷೇತ್ರವಾದ ಅಭ್ಯುದಯ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಅನ್ನು ಸ್ಥಾಪಿಸಿ ವ್ಯವಸ್ಥಾಪಕ ನಿರ್ದೇಶಕರಾಗಿ ಮುನ್ನೆಡೆಸುತ್ತಿದ್ದಾರೆ.

LEAVE A REPLY

Please enter your comment!
Please enter your name here