ಅ.12ಕ್ಕೆ ಉಪನ್ಯಾಸಕಿ ಉಷಾ ಕೆ ಅವರ ಕೃತಿ ‘ತೆರೆದ ಗವಾಕ್ಷಿ’ ಲೋಕಾರ್ಪಣೆ

0

ಪುತ್ತೂರು: ಕಳೆದ 35 ವರ್ಷಗಳಿಂದ ಉಪನ್ಯಾಸಕಿಯಾಗಿ ಸುದೀರ್ಘ ಸೇವೆಯನ್ನು ಸಲ್ಲಿಸಿ ನಿವೃತ್ತರಾಗಿರುವ ಉಷಾ ಕೆ ಅವರು ನಿರಂತರವಾಗಿ ಪತ್ರಿಕೆಗಳಲ್ಲಿ ಪ್ರಕಟಿಸುತ್ತಿದ್ದ ವೈಚಾರಿಕ – ಮಾನವೀಯ ಮೌಲ್ಯಗಳ್ಳ ಲೇಖನಗಳ ಸಂಗ್ರಹ ’ತೆರೆದ ಗವಾಕ್ಷಿ’ ಕೃತಿ ಅ.12, ಸಂಜೆ ಗಂಟೆ 4.30ಕ್ಕೆ ಪುತ್ತೂರಿನ ಅನುರಾಗ ವಠಾರದಲ್ಲಿ ಲೋಕಾರ್ಪಣೆಗೊಳ್ಳಲಿದೆ.


ಉಷಾ ಕೆ ಅವರು ಸುಳ್ಯದ ಸರಕಾರಿ ಜೂನಿಯರ್ ಕಾಲೇಜು, ಪುತ್ತೂರು ಕೊಂಬೆಟ್ಟು ಜ್ಯೂನಿಯರ್ ಕಾಲೇಜು ಹಾಗೂ ಕಬಕದ ಸರಕಾರಿ ಪ್ರೌಢಶಾಲೆಯಲ್ಲಿ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ.

ಕೋಡಿಂಬಾಡಿಯಲ್ಲಿ ವಾಸವಿರುವ ಇವರು ವಿವೇಕಾನಂದ ಪದವಿ ಮಹಾವಿದ್ಯಾಲಯದಲ್ಲಿ ಸಂಸ್ಕೃತ ಹಾಗೂ ಹಿಂದಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಡಾ. ವಿಷ್ಣು ಭಟ್ ಪತ್ನಿಯಾಗಿದ್ದಾರೆ. ಈ ಕೃತಿಯನ್ನು ರಾಜೇಶ್ ಪವರ್ ಪ್ರೆಸ್‌ನ ಮಾಲಕ ರಘುನಾಥ ರಾವ್ ಅವರು ಲೋಕಾರ್ಪಣೆಗೊಳಿಸಲಿದ್ದಾರೆ. ಹಿರಿಯ ಸಾಹಿತಿ ನಾರಾಯಣ ರೈ ಕುಕ್ಕುವಳ್ಳಿ ಅವರು ಕೃತಿ ಕುರಿತು, ಸಾರಸ್ವತ ಸೌರಭದ ವ್ಯವಸ್ಥಾಪಕ ಸಂಪಾದಕ ಸುಳ್ಳಿ ರಾಧಾಕೃಷ್ಣ ನಾಯಕ್ ಅವರು ಕೃತಿಕಾರರ ಕುರಿತು ಮಾತನಾಡಲಿದ್ದಾರೆ. ಪುತ್ತೂರು ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುತ್ತೂರು ಉಮೇಶ್ ನಾಯಕ್ ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

LEAVE A REPLY

Please enter your comment!
Please enter your name here