ಆಯುಧ ಪೂಜಾ ಸೇವಾ ಸಮಿತಿ ದರ್ಬೆತ್ತಡ್ಕ ವತಿಯಿಂದ ಆಯುಧ ಪೂಜೆ

0

ಅರಿಯಡ್ಕ:ಆಯುಧ ಪೂಜಾ ಸೇವಾ ಸಮಿತಿ ದರ್ಬೆತ್ತಡ್ಕ ಇದರ ವತಿಯಿಂದ ಆಯುಧ ಪೂಜಾ ಕಾರ್ಯಕ್ರಮವು ಅ.6 ರಂದು ಸುಬ್ರಹ್ಮಣ್ಯ ಭಟ್ ಅಡ್ಯತ್ತಿಮಾರ್ ಇವರ ಪೌರೋಹಿತ್ಯದಲ್ಲಿ ನಡೆಯಿತು.

ನಂತರ ಸಭಾ ಕಾರ್ಯಕ್ರಮದ ಜೊತೆಗೆ ವಿವಿಧ ವೇಷಗಳ ಮಾರ್ನೆಮಿದ ರಂಗ್ 2024 ಆಹ್ವಾನಿತ ತಂಡಗಳಿಂದ ಸ್ಪರ್ಧೆಯು ನಡೆಯಿತು.


ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ರವೀಂದ್ರ ಮಣಿಯಾಣಿ ದರ್ಬೆತ್ತಡ್ಕ ವಹಿಸಿದ್ದರು.ವೇದಿಕೆಯಲ್ಲಿದ್ದ ಗಣ್ಯರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ವೇದಿಕೆಯಲ್ಲಿ ರೋಷನ್ ಬಂಗೇರ ಬಾಲಾಯ, ಶ್ರೀಧರ್ ಕುರಿಂಜ ಕುತ್ಯಾಡಿ , ರಾಮಚಂದ್ರಮಣಿಯಾಣಿ ಗುಂಡಿಗದ್ದೆ , ಪುರಂದರ ಶೆಟ್ಟಿ ಮೂಡಾಲ, ಜಯರಾಮ ಪೂಜಾರಿ ಕುಕ್ಕುತ್ತಡಿ, ಚಂದ್ರಶೇಖರ ಬೈರಮುಲೆ, ಪ್ರಮೋದಿನಿ ನವೀನ್ ರೈ, ಪುಷ್ಪರಾಜ ಕುಡ್ಚಿಲ, ಮೋಹನ್ ಕೆ ದರ್ಬೆತ್ತಡ್ಕ, ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೆ ಪ್ರಕಾಶ್ಚಂದ್ರ ರೈ ಕೈಕಾರ, ಮೋಹನ್ ದಾಸ್ ರೈ ಮಾತೃಶ್ರೀ ಅರ್ಥ್ ಮೂವರ್ಸ್ ಕುಂಬ್ರ, ರಕ್ಷಿತ್ ರೈ ಬಾಂದಲಪ್ಪು ಜನಸೇವಾ ಸಮಿತಿ ಕುಂಬ್ರ ,ಸದಾಶಿವ ಮಣಿಯಾಣಿ ಕುತ್ಯಾಡಿ, ಸದಾಶಿವ ರಕ್ಷಿತ್ ಪೂಟ್ ವೆರ್ ಕುಂಬ್ರ,ಸಂಪ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಪ್ರವೀಣ್ ರೈ ,ಪ್ರಸನ್ನ ಕುಮಾರ್ ಶೆಟ್ಟಿ ಸಾಮೆತ್ತಡ್ಕ ಮೊದಲಾದ ಗಣ್ಯರು ಆಗಮಿಸಿ ಶುಭಹಾರೈಸಿದರು.

ಪ್ರಥಮ ನಗದು ಬಹುಮಾನ ಮತ್ತು ಟ್ರೋಪಿಯನ್ನು ಎಸ್. ಕೆ.ಫ್ರೆಂಡ್ಸ್ ಬೆಳ್ಳಾರೆ, ದ್ವೀತಿಯ ನಗದು ಮತ್ತು ಟ್ರೋಪಿಯನ್ನು ಫ್ರೆಂಡ್ಸ್ ಮುಳ್ಯ, ತೃತೀಯ ನಗದು ಮತ್ತು ಟ್ರೋಫಿಯನ್ನು ಸ್ವಾಮಿ ಕೊರಗಜ್ಜ ಸೇವಾ ಬಳಗ ಡೊಂಬಟೆಗಿರಿ ನಿಡ್ಪಳ್ಳಿ ತಂಡವು ತನ್ನದಾಗಿಸಿಕೊಂಡಿತು. ಆಗಮಿಸಿದ ವಿವಿಧ ತಂಡಗಳಿಗೆ ಗೌರವಧನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಲಕ್ಕಿ ಡ್ರಾ 1 ಮುಡಿ ಅಕ್ಕಿಯನ್ನು ನೀಡಿದ ಗಿರೀಶ್ ರೈ ನೀರ್ಪಾಡಿ ಇವರನ್ನು ಗೌರವಿಸಲಾಯಿತು.ಕೃಷ್ಣ ಪ್ರಸಾದ್ ಬೆಟ್ಟಂಪಾಡಿ, ರಾಜೇಶ್ ಸುಳ್ಯ ಪದವು ,ಚಂದ್ರ ಶೇಖರ್ ಸುಳ್ಯ ಪದವು ತೀರ್ಪು ಗಾರರಾಗಿ ಸಹಕರಿಸಿದರು. ಹರ್ಷಿತ ಪ್ರಾರ್ಥಿಸಿ, ಸದಾನಂದ ಮಣಿಯಾಣಿ ಸ್ವಾಗತಿಸಿ,ಪುರುಷೋತ್ತಮ ಮಣಿಯಾಣಿ ಕೆ. ಎಂ,ಕಾರ್ಯಕ್ರಮಕ್ಕೆ ಧನ್ಯವಾದವಿತ್ತರು.ಯತೀಶ್ ಬೆಟ್ಟಂಪಾಡಿ ಕಾರ್ಯಕ್ರಮ ನಿರೂಪಿಸಿದರು.

LEAVE A REPLY

Please enter your comment!
Please enter your name here