ಮಂಗಳೂರು : ಜರ್ಮನಿ ಪ್ರವಾಸದಲ್ಲಿರುವ ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್ ನೇತೃತ್ವದ ನಿಯೋಗವು ಬುಧವಾರ ಜರ್ಮನಿಯ ಮ್ಯೂನಿಚ್‌ನಲ್ಲಿರುವ ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್‌ಗೆ ಭೇಟಿ ನೀಡಿತು.
ಈ ಸಂದರ್ಭ ಪಾರ್ಲಿಮೆಂಟ್ ವಿಐಪಿ ಭೇಟಿದಾರರ ಪುಸ್ತಕದಲ್ಲಿ ಯು.ಟಿ.ಖಾದರ್ ಸಹಿ ಮಾಡಿದರು. ಬವೇರಿಯನ್ ಸ್ಟೇಟ್ ಪಾರ್ಲಿಮೆಂಟ್ ಅಧ್ಯಕ್ಷ ಐಲ್ಸ್ ಏಗ್ನರ್ ಮತ್ತಿತರರು ಈ ವೇಳೆ ಉಪಸ್ಥಿತರಿದ್ದರು.
ನಿಯೋಗದಲ್ಲಿ ಖಾದರ್‌ರೊಂದಿಗೆ ವಿಧಾನಸಭಾ ಉಪಸಭಾಪತಿ ರುದ್ರಪ್ಪಲಮಾಣಿ, ಶಾಸಕರಾದ ಅಶೋಕ್ ಕುಮಾರ್ ರೈ, ಉಮಾನಾಥ ಕೋಟ್ಯಾನ್, ಮಹಾಂತೇಶ ಕೌಜಲಗಿ ಉಪಸ್ಥಿತರಿದ್ದರು.