ಕ್ರಿಸ್ಟೋಫರ್ ಅಸೋಸಿಯೇಶನ್ ನೇತೃತ್ವದಲ್ಲಿ ಮಾಯಿದೆ ದೇವುಸ್ ಚರ್ಚ್ ನಲ್ಲಿ ವಾಹನಗಳಿಗೆ ಆಶೀರ್ವಚನ

0

ಪುತ್ತೂರು: ಪುತ್ತೂರು ಮಾಯಿದೆ ದೇವುಸ್ ಚರ್ಚ್ ನ ಸೈಂಟ್ ಕ್ರಿಸ್ಟೋಫರ್ ಅಸೋಸಿಯೇಶನ್ ವತಿಯಿಂದ, ಚರ್ಚ್ ವ್ಯಾಪ್ತಿಯ ವಾಹನಗಳಿಗೆ ಆಶೀರ್ವಚನ ಕಾರ್ಯಕ್ರಮ ಅ.12 ಹಾಗೂ 13ರಂದು ಜರಗಿತು.

ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್, ಸಹಾಯಕ ಧರ್ಮಗುರು ವಂ|ಲೋಹಿತ್ ಅಜಯ್ ಮಸ್ಕರೇನ್ಹಸ್ ರವರು ವಾಹನಗಳ ಮೇಲೆ ಪವಿತ್ರ ಜಲ ಸಿಂಪಡಿಸಿ, ಸಂದೇಶ ನೀಡುತ್ತಾ, ಪ್ರಯಾಣಿಕರನ್ನು ಸುಗಮವಾಗಿ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಕೊಂಡೊಯ್ಯಲು ವಾಹನದ ಅವಶ್ಯಕತೆಯಿದೆ. ವಾಹನಗಳು ಮನುಷ್ಯನ ಜೀವನದ ಪಯಣದಲ್ಲಿ ಸಂಗಾತಿಯಾಗಿ ಪರಿಣಮಿಸಿದೆ. ವಾಹನ ಚಲಾಯಿಸುವಾಗ ವಾಹನ ಸವಾರರಲ್ಲಿ ಜಾಗರೂಕತೆ ಅತೀ ಅಗತ್ಯವಾಗಿ ಬೇಕಾಗಿದೆ ಎಂದು ಹೇಳಿ ಆಶೀರ್ವಚನ ನೀಡಿದರು.

ಕ್ರಿಸ್ಟೋಫರ್ ಅಸೋಸಿಯೇಶನ್ ಅಧ್ಯಕ್ಷ ವಿಕ್ಟರ್ ಶರೂನ್ ಡಿ’ಸೋಜ, ಕಾರ್ಯದರ್ಶಿ ನಿಶಾ ಮಸ್ಕರೇನ್ಹಸ್, ಉಪಾಧ್ಯಕ್ಷ ಅಂತೋನಿ ಒಲಿವೆರಾ,ಜೊತೆ ಕಾರ್ಯದರ್ಶಿ ಪಾವ್ಲ್ ಮೊಂತೇರೊ, ಮಾಜಿ ಅಧ್ಯಕ್ಷರಾದ ವಲೇರಿಯನ್ ಡಾಯಸ್, ರೋಶನ್ ಡಾಯಸ್  ಸಹಿತ ಹಲವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಕ್ರಿಸ್ಟೋಫರ್ ಅಸೋಸಿಯೇಷನ್ ವತಿಯಿಂದ ಭಕ್ತರಿಗೆ ಕೇಕ್ ಹಂಚಲಾಯಿತು.

ಪೂಜಾವಿಧಿ ಬಳಿಕ ಆಶೀರ್ವಚನ..

ದಿನೇ ದಿನೇ ವಾಹನಗಳ ಸಂಖ್ಯೆ ಹೆಚ್ಚುತ್ತಿರುವ ಸಂದರ್ಭದಲ್ಲಿ ವಾಹನಗಳ ಪಾರ್ಕಿಂಗಿಗೆ ಜಾಗದ ಅನಾನುಕೂಲತೆ ಮನಗಂಡು ಚರ್ಚ್ ನಲ್ಲಿ ಶನಿವಾರ ಸಂಜೆ ಹಾಗೂ ಆದಿತ್ಯವಾರ ಬೆಳಗ್ಗೆ  ನಡೆಯುವ ಪೂಜಾವಿಧಿಗಳ ಬಳಿಕ ವಾಹನಗಳಿಗೆ ಪವಿತ್ರಜಲ ಸಿಂಪಡಿಸುವ ಮೂಲಕ ಆಶೀರ್ವಚನ ಕಾರ್ಯ ನೆರವೇರಿತು.

ಲೋಗೋ ಅನಾವರಣ..
ಈ ಸಂದರ್ಭದಲ್ಲಿ ಕ್ರಿಸ್ಟೋಫರ್ ಅಸೋಸಿಯೇಷನ್ ನ ಸೇವೆಯೊಂದಿಗೆ ಏಕತೆ ಎಂಬ ಧ್ಯೇಯವಾಕ್ಯವುಳ್ಳ ಲೋಗೋ ಅನ್ನು ಮಾಯಿದೆ ದೇವುಸ್ ಚರ್ಚ್ ಪ್ರಧಾನ ಧರ್ಮಗುರು ವಂ|ಲಾರೆನ್ಸ್ ಮಸ್ಕರೇನ್ಹಸ್ ರವರು ಅನಾವರಣಗೊಳಿಸಿದರು.

LEAVE A REPLY

Please enter your comment!
Please enter your name here