





ಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೌಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಪ್ರಥಮ ವಾರದ ಡ್ರಾ.ವು ಅ.14ರಂದು ಮಳಿಗೆಯಲ್ಲಿ ನಡೆಯಿತು.


ಸವಿತಾ ಬಾಲಕೃಷ್ಣ ಕಲ್ಲಾರೆ ಪ್ರಥಮ ಬಹುಮಾನದ ಡ್ರಾ. ನಡೆಸಿಕೊಟ್ಟರು. ಇತರ ಬಹುಮಾನಗಳನ್ನು ಪುಟಾಣಿಗಳು ನಡೆಸಿಕೊಟ್ಟರು. ಮಳಿಗೆಯ ಮ್ಯಾನೇಜರ್ ಸಂಜಯ್ ಕಾಮತ್ ಹಾಗೂ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು. ಅಶ್ವಿನಿ(20) ಪ್ರಥಮ ಬಹುಮಾನ ರೆಫ್ರೀಜರೇಟರ್, ಸಚಿನ್ ವಗ್ಗ(17) ದ್ವಿತೀಯ ಬಹುಮಾನ ಕುಶನ್ ಸೋಫಾ, ಕಾವ್ಯ ಸೂರಿಕುಮೇರು(100) ತೃತೀಯ ಬಹುಮಾನ 32 ಇಂಚು ಟಿವಿ ವಿಜೇತರಾದರು. ಜಸ್ವಿ ಎಸ್.ಆರ್ ಹಳೆನೇರಂಕಿ(379), ಝಿಯನ್ ಬೆಟ್ಟಂಪಾಡಿ(640), ವೈಷ್ಣವೀ ಸವಣೂರು(736), ರುಕ್ಮಯ್ಯ ದಾಸ್ ಸುಳ್ಯ(198), ಜಶ್ವಿನ್ ಪೂಜಾರಿ(132), ಶಶಿಕಲಾ ಗೋಳಿತೊಟ್ಟು(366), ವಿಹಾ ರೈ ಪೆರ್ಲಂಪಾಡಿ(267), ಸೆಪಿನ ಕಾಣಿಯೂರು(327) ಹಾಗೂ ಹರೀಶ್ ರೈ ಸಾರಕೆರೆ(483) ಆಕರ್ಷಕ ಬಹುಮಾನಗಳ ವಿಜೇತರಾದರು.





ಆಫರ್‌ಗಳ ಬಿಗ್‌ಬಾಸ್ ರಾಧಾಸ್ ಉತ್ಸವದಲ್ಲಿ ಶಾಪ್ & ವಿನ್ ವಿಶೇಷ ಕೊಡುಗೆಗಳನ್ನು ನೀಡುಲಾಗುವುದು. ಜವುಳಿ ಖರೀದಿಗೆ ಶೇ.15 ರಿಯಾಯಿತಿಯೊಂದಿಗೆ ರೂ.3,999ರ ಜವುಳಿ ಖರೀದಿಗೆ ಗಿಫ್ಟ್ ಕೂಪನ್ ನೀಡಲಾಗುತ್ತಿದೆ. ಪ್ರತಿವಾರ ಪ್ರಥಮ, ದ್ವಿತೀಯ. ತೃತೀಯ ಬಹುಮಾನಗಳ ಜೊತೆಗೆ 9 ಆಕರ್ಷಕ ಬಹುಮಾನಗಳು ಸೇರಿದಂತೆ ಒಟ್ಟು 12 ಬಹುಮಾನಗಳನ್ನು ನೀಡಲಾಗುತ್ತಿದೆ. ವಿಜೇತರಿಗೆ ಪ್ರತಿವಾರ ವಿಭಿನ್ನ ಬಹುಮಾನಗಳನ್ನು ನೀಡಲಾಗುವುದು.
ಪ್ರತಿ ತಿಂಗಳು ಬಂಪರ್ ಡ್ರಾ ನಡೆಯಲಿದ್ದು ಅದೃಷ್ಠ ಗ್ರಾಹಕರಿಗೆ ಟಿವಿಎಸ್ ಜ್ಯುಪಿಟರ್ ದ್ವಿಚಕ್ರ ವಾಹನ ಗೆಲ್ಲುವ ಅವಕಾಶವಿದೆ. ಈ ಕೊಡುಗೆಗಳು ಡಿ.31ರ ತನಕ ಮಾತ್ರವೇ ಇದ್ದು ಗ್ರಾಹಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಸಂಸ್ಥೆಯ ಪ್ರಕಟಣೆ ತಿಳಿಸಿದೆ.
ನವ ಜೋಡಿಗಳಿಗೆ ಒಲಿದ ಬಹುಮಾನಗಳು…!
ಡಿಸೆಂಬರ್‌ನಲ್ಲಿ ವಿವಾಹವಾಗಲಿರುವ ಬಂಟ್ವಾಳ ತಾಲೂಕಿನ ವಗ್ಗದ ವರನ ಮನೆಯವರು ಹಾಗೂ ಸೂರಿಕುಮೇರಿನ ವಧುವಿನ ಮನೆಯವರು ಮಳಿಗೆಯಿಂದ ವಿವಾಹಕ್ಕೆ ಜವುಳಿ ಖರೀದಿಸಿದ್ದರು. ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಪ್ರಥಮ ವಾರದ ಡ್ರಾ.ದಲ್ಲಿ ವಗ್ಗದ ವರನ ಮನೆಯವರಿಗೆ ದ್ವಿತೀಯ ಬಹುಮಾನ ಕುಶನ್ ಸೋಫಾ ಹಾಗೂ ಸೂರಿಕುಮೇರಿನ ವಧುವಿನ ಮನೆಯವರು ತೃತೀಯ ಬಹುಮಾನ 32 ಇಂಚಿನ ಟಿವಿಯ ವಿಜೇತರಾದರು. ಪ್ರಥಮ ಡ್ರಾ.ದಲ್ಲಿ ವಧು ಹಾಗೂ ವರನ ಮನೆಯವರು ವಿಜೇತರಾಗಿದ್ದು ಲಕ್ಕಿ ಜೋಡಿಗಳಾಗಿದ್ದಾರೆ ಎನ್ನುವ ಮಾತುಗಳು ಕೇಳಿಬರುತ್ತಿದೆ. ಡ್ರಾ.ದಲ್ಲಿ ವಿಜೇತರಾಗಿರುವ ಬಗ್ಗೆ ಮನೆಯವರಿಗೆ ಕರೆ ಮಾಡಿ ಮಾಹಿತಿ ನೀಡುವಾಗ ಈ ವಿಚಾರ ಮಳಿಗೆಯವರಿಗೆ ತಿಳಿದುಬಂದಿದೆ.










