ದೇಶಕ್ಕೆ ವಾಲ್ಮೀಕಿ ಕೊಡುಗೆ ಅನನ್ಯ- ವಾಲ್ಮೀಕಿ ಜಯಂತಿಯಲ್ಲಿ ತಹಸೀಲ್ದಾರ್ ಪುರಂದರ

0

ಪುತ್ತೂರು: ಮಹಾಕಾವ್ಯ ರಾಮಾಯಣ ಬರೆದಿರುವ ವಾಲ್ಮೀಕಿ ಮಹರ್ಷಿ ದೇಶಕ್ಕೆ ಅಪಾರ ಕೊಡುಗೆ ನೀಡಿದ್ದಾರೆ ಎಂದು ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಅಧ್ಯಕ್ಷ ತಹಸೀಲ್ದಾರ್ ಪುರಂದರ ಅವರು ಹೇಳಿದರು.


ತಾಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ವತಿಯಿಂದ ಪುತ್ತೂರು ತಾಲೂಕು ಆಡಳಿತ ಸೌಧದಲ್ಲಿರುವ ತಾಲೂಕು ಕಚೇರಿ ಸಭಾಂಗಣದಲ್ಲಿ ಅ.17ರಂದು ನಡೆದ ಶ್ರೀ ವಾಲ್ಮೀಕಿ ಮಹರ್ಷಿ ಜಯಂತಿ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು.

ವಾಲ್ಮೀಕಿ ಎಂದರೆ ಹುತ್ತದಿಂದ ಜನಿಸಿದವರು ಎಂದರ್ಥ. ರಾಮಾಯಣವು ನಾಡಿನ ಒಂದು ಮಹಾನ್ ಗ್ರಂಥವಾಗಿದೆ. ವಾಲ್ಮೀಕಿ ಹುಟ್ಟು ಹಾಕಿರುವ ಆದರ್ಶಗಳು ನಮಗೆ ಮಾದರಿಯಾಗಿವೆ. ಅವರ ಸಾಮಾಜಿಕ- ಸಾಂಸ್ಕೃತಿಕ ಚಿಂತನೆಗಳು ನಮಗೆ ಉಸಿರಾಗಬೇಕು ವಾಲ್ಮೀಕಿಯವರ ಕೃತಿಗಳು ಸಮಾಜಕ್ಕೆ ವಿವಿಧ ರೀತಿಯಲ್ಲಿ ಕೊಡುಗೆಗಳನ್ನು ನೀಡಿವೆ. ಮಾನವ ಕುಲ ಏಳಿಗೆಗಾಗಿ ಅವರ ತತ್ವ ಆದರ್ಶಗಳನ್ನು ಪಾಲಿಸಬೇಕು ಎಂದ ಅವರು ವಾಲ್ಮೀಕಿ ಜನಾಂಗವನ್ನು ಬಲಿಷ್ಠ ಮಾಡಲು ಸರಕಾರ ಅನೇಕ ಯೋಜನೆಯನ್ನು ಕೂಡಾ ಜಾರಿಗೊಳಿಸುತ್ತಿದೆ ಎಂದರು.

ವಾಲ್ಮೀಕಿ ಜನಾಂಗದ ಮುಖಂಡ ರಾಜ್ ಬಪ್ಪಳಿಗೆ ಅವರು ಸಂದರ್ಭೊಚಿತವಾಗಿ ಮಾತನಾಡಿದರು. ತಾ.ಪಂ ಕಾರ್ಯನಿರ್ವಾಹಕ ಅಧಿಕಾರಿ ನವೀನ್ ಕುಮಾರ್ ಭಂಡಾರಿ ಹೆಚ್, ಪೌರಾಯುಕ್ತ ಮಧು ಎಸ್ ಮನೋಹರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.

ತಾಲೂಕು ಆರೋಗ್ಯಾಧಿಕಾರಿ ಡಾ.ದೀಪಕ್ ರೈ, ಅಕ್ಷರ ದಾಸೋಹ ಸಹಾಯಕ ನಿರ್ದೇಶಕ ವಿಷ್ಣುಪ್ರಸಾದ್, ತಾಲೂಕು ಕಚೇರಿಯ ದಯಾನಂದ್, ಶಿಕ್ಷಣ ಸಂಯೋಜಕ ಹರಿಪ್ರಸಾದ್ ಅತಿಥಿಗಳನ್ನು ಗೌರವಿಸಿದರು. ಸಮಾಜಕಲ್ಯಾಣ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೃಷ್ಣ ಸ್ವಾಗತಿಸಿ, ಹಾರಾಡಿ ಬಾಲಕಿಯರ ವಸತಿ ನಿಲಯದ ಮೇಲ್ವಿಚಾರಕಿ ಪ್ರೇಮಲತಾ ಎಮ್ ಅವರು ವಂದಿಸಿದರು. ಮಹಾಲಿಂಗ ನಾಯ್ಕ್, ಸಾಮಾಜಿಕ ವಲಯ ಅರಣ್ಯಾಧಿಕಾರಿ ವಿದ್ಯಾ ರಾಣಿ ಹಲವಾರು ಮಂದಿ ಈ ಸಂದರ್ಭ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here