ಪುತ್ತೂರು: ಶಾಲಾ ಶಿಕ್ಷಣ ಇಲಾಖೆ ಹಾಗೂ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಛೇರಿ ಪುತ್ತೂರು ಇದರ ಆಶ್ರಯದಲ್ಲಿ ಕಡಬ ಸರಸ್ವತಿ ವಿದ್ಯಾಲಯದಲ್ಲಿ ಜರುಗಿದ ಪುತ್ತೂರು ತಾಲೂಕು ಮಟ್ಟದ ಕರಾಟೆ ಪಂದ್ಯಾಟದಲ್ಲಿ ಸಂತ ವಿಕ್ಟರ್ ಬಾಲಿಕಾ ಪ್ರೌಢಶಾಲಾ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
17ರ ವಯೋಮಿತಿಯ ಬಾಲಕಿಯರ ವಿಭಾಗದಲ್ಲಿ ಖುಷಿ ಕೆ.ಎಂ (10ನೇ) ಪ್ರಥಮ (ಕೆ.ವಿ ಮಂಜುನಾಥ್ ಹಾಗೂ ಭವ್ಯರವರ ಪುತ್ರಿ) ರಂಶ ಡಿ. ಕೆ (10ನೇ) ಪ್ರಥಮ (ಮಹಮ್ಮದ್ ಶರೀಫ್ ಡಿ. ಕೆ. ಹಾಗೂ ರೇಶ್ಮಾ ಎಚ್. ಎ.ರವರ ಪುತ್ರಿ), ಇಚ್ಛಿಕಾ (10ನೇ) ಪ್ರಥಮ (ಪ್ರದೀಪ್ ಜೈನ್ ಹಾಗೂ ಪ್ರೇಕ್ಷಾ ಎಸ್.ರವರ ಪುತ್ರಿ) ಪ್ರಥಮ ಸ್ಥಾನ ಪಡೆದುಕೊಂಡು ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಚಂದನ (10ನೇ) ದ್ವಿತೀಯ (ರಮೇಶ್ ಡಿ. ಹಾಗೂ ಹರಿಣಾಕ್ಷಿರವರ ಪುತ್ರಿ) ಸ್ಥಾನವನ್ನು ಪಡೆದುಕೊಂಡಿರುತ್ತಾರೆ.