ಪುತ್ತೂರು: ರೋಟರ್ಯಾಕ್ಟ್ ತಿಂಗಳಾಡಿ ಇದರ ವತಿಯಿಂದ ಸ್ವಚ್ಛತೆ ಆಲಡ್ಕ ಬಸ್ಸು ತಂಗುದಾಣವನ್ನು ಸ್ವಚ್ಛತೆ ಮಾಡಲಾಯಿತು. ಕೆದಂಬಾಡಿ ಮತ್ತು ಮುಂಡೂರು ಗ್ರಾಮ ಪಂಚಾಯತ್ ಮಧ್ಯೆ ಇರುವ ಈ ಬಸ್ಸು ತಂಗುದಾಣದ ಶೀಟು ಬಿದ್ದು ಹೋಗಿ ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಸ್ಸಿಗಾಗಿ ಕಾದು ನಿಲ್ಲಲು ತೊಂದರೆಯಾಗುತ್ತಿತ್ತು. ಇದಲ್ಲದೆ ಬಸ್ಸು ತಂಗುದಾಣದ ಒಳಭಾಗದಲ್ಲಿ ಬಾಟಲಿ, ಪ್ಲಾಸ್ಟಿಕ್ ಇತ್ಯಾದಿಗಳನ್ನು ಹಾಕಿ ಗಲೀಜು ಮಾಡಲಾಗಿತ್ತು. ಚಿರಂಜಿತ್ ಕೊಡಂಕೀರಿ , ಪುಷ್ಪರಾಜ್ ಚಾವಡಿ , ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ದುಗ್ಗಪ್ಪ ಕಡ್ಯರವರು ಕ್ಲಬ್‌ನ ಕಾರ್ಯಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು. ಮೋಹನ ನಾಯ್ಕ್ ಮನೆಯವರು ಹಾರೆ, ಬುಟ್ಟಿ ಇತ್ಯಾದಿಗಳನ್ನು ನೀಡಿ ಸಹಕರಿಸಿದರು. ಸ್ವಚ್ಛತಾ ಕಾರ್ಯಕ್ರಮದಲ್ಲಿ ಕ್ಲಬ್‌ನ ಅಧ್ಯಕ್ಷ ಮನ್ವಿತ್ ರೈ, ನಿಕಟ ಪೂರ್ವ ಅಧ್ಯಕ್ಷ ಹರ್ಷಿತ್ ರೈ, ಕ್ಲಬ್ ಸಲಹೆಗಾರ ಹಾಗೂ ಮಾಜಿ ಅಧ್ಯಕ್ಷ ಹರೀಶ್ ರೈ ಎಂ, ಮಾಜಿ ಅಧ್ಯಕ್ಷ ಪ್ರದ್ವಿನ್ ರೈ, ಪದಾಧಿಕಾರಿಗಳಾದ ಧನುಷ್ ರೈ , ಅರುಣ್ ರೈ, ಅಮೋಘ ರಾವ್ ಹಾಗೂ ಕ್ಲಬ್‌ನ ಕಾರ್ಯದರ್ಶಿ ಕಿರಣ್ ರೈ ಉಪಸ್ಥಿತರಿದ್ದರು.