ಕರ್ನಾಟಕ ಗಮಕ ಕಲಾ ಪರಿಷತ್ ದ.ಕ.ಜಿಲ್ಲೆ, ಪುತ್ತೂರು ಘಟಕದ ವತಿಯಿಂದ ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ

0

ಪುತ್ತೂರು: ಕರ್ನಾಟಕ ಗಮಕ ಕಲಾ ಪರಿಷತ್ತು ಬೆಂಗಳೂರು, ದ.ಕ.ಜಿಲ್ಲೆ, ಪುತ್ತೂರು ತಾಲೂಕು ಘಟಕದ ವತಿಯಿಂದ ಅ.17ರಂದು ಗಮಕ ವಾಚನ- ವ್ಯಾಖ್ಯಾನ ಕಾರ್ಯಕ್ರಮ ನಡೆಯಿತು. ಘಟಕದ
ಉಪಾಧ್ಯಕ್ಷರಾದ ಡಾl ಶೋಭಿತಾ ಸತೀಶ್ ರಾವ್ ಮತ್ತು ಡಾl ಸತೀಶ್ ರಾವ್ ದಂಪತಿ ಸ್ವಗೃಹ, ಪುತ್ತೂರಿನ ಬಪ್ಪಳಿಗೆಯ ‘ಸ್ವರಧೇನು’ ಇಲ್ಲಿ ನಡೆದ ಕಾರ್ಯಕ್ರಮದಲ್ಲಿ ವಾಲ್ಮೀಕಿ ಜನ್ಮದಿನಕ್ಕೆ ಪೂರಕವಾಗಿ, ತೊರವೆ ರಾಮಾಯಣದಿಂದ ಆಯ್ದ ‘ವಾಲ್ಮೀಕಿ ವೃತ್ತಾಂತ’ ಎಂಬ ಕಥಾಭಾಗವನ್ನು ಪ್ರಸ್ತುತಪಡಿಸಲಾಯಿತು.

ಕೊಂಬೆಟ್ಟು ಸರಕಾರಿ ಪದವಿಪೂರ್ವ ಕಾಲೇಜು ಉಪನ್ಯಾಸಕರು ಗಮಕಿ ಜಯಪ್ರಕಾಶ್ ನಾಕೂರು ಇವರು ಗಮಕ ವಾಚನಗೈದರು. ಈಶ್ವರ ಭಟ್, ಗುಂಡ್ಯಡ್ಕ ಇವರು ವ್ಯಾಖ್ಯಾನಗೈದರು.
ವ್ಯವಸ್ಥಿತವಾಗಿ ನಡೆದ ಕಾರ್ಯಕ್ರಮವು ನೆರೆದ ಕಲಾಪ್ರಿಯರ ಮನಸ್ಸನ್ನು ಗೆಲ್ಲುವಲ್ಲಿ ಯಶಸ್ವಿಯಾಯಿತು.

ಡಾl ಶೋಭಿತಾ ಸತೀಶ್ ರಾವ್ ಇವರು ಸರ್ವರನ್ನು ಸ್ವಾಗತಿಸಿ ಕಲಾವಿದರನ್ನು ಪರಿಚಯಿಸಿದರು. ಘಟಕದ ಅಧ್ಯಕ್ಷರಾದ ಪ್ರೊ. ವೇದವ್ಯಾಸ ರಾಮಕುಂಜ, ನಿವೃತ್ತ ಪ್ರಾಂಶುಪಾಲರು ಇವರು ದೀಪ ಪ್ರಜ್ವಲನೆಯೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮತ್ತು ಕಾರ್ಯಕ್ರಮದ ಕೊನೆಯಲ್ಲಿ ಧನ್ಯವಾದ ಸಮರ್ಪಿಸಿದರು. ಕಾರ್ಯದರ್ಶಿ ಶಂಕರಿ ಶರ್ಮ ಕಾರ್ಯಕ್ರಮ ನಿರ್ವಹಿಸಿದರು. ಕಲಾವಿದರಿಗೆ ಡಾl ಸತೀಶ್ ರಾವ್ ಇವರು ಶಾಲು ಹೊದಿಸಿ ಹಾಗೂ ಗೌರವಾಧ್ಯಕ್ಷ ಭಾಸ್ಕರ ಬಾರ್ಯ ಕಿರುಕಾಣಿಕೆ ನೀಡಿ ಗೌರವಿಸಿದರು.

ಉಪಾಧ್ಯಕ್ಷರಾದ ವತ್ಸಲಾ ರಾಜ್ಞಿ ಮತ್ತು ಜಯಂತಿ ಹೆಬ್ಬಾರ್, ಖಜಾಂಚಿ ವೀಣಾ ಸರಸ್ವತಿ, ಸದಸ್ಯರಾದ ಹರಿಣಾಕ್ಷಿ ಜೆ. ಶೆಟ್ಟಿ, ಜಯಲಕ್ಷ್ಮಿ ವಿ.ಭಟ್, ಪ್ರೇಮಾ ನೂರಿತ್ತಾಯ, ವೀಣಾ ನಾಗೇಶ ತಂತ್ರಿ, ಭಾರತಿ ರೈ ಅರಿಯಡ್ಕ ಮತ್ತು ಆಗಮಿಸಿದ ಅತಿಥಿಗಳು ಹಾಗೂ ಮನೆ ಮಂದಿ ಉಪಸ್ಥಿತರಿದ್ದರು. ಅತಿಥೇಯರು ನೀಡಿದ ಲಘು ಉಪಾಹಾರದೊಂದಿಗೆ ಸುಂದರ ಕಾರ್ಯಕ್ರಮವು ಸಂಪನ್ನಗೊಂಡಿತು.

LEAVE A REPLY

Please enter your comment!
Please enter your name here