ಸುಬ್ರಹ್ಮಣ್ಯ: ನದಿಗಿಳಿದು ಆತ್ಮಹತ್ಯೆಗೆತ್ನಿಸಿದ ಬೆಂಗಳೂರು ನಿವಾಸಿಯ ರಕ್ಷಣೆ

0

ಕಡಬ: ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟದ ಬಳಿ ವೃದ್ದರೊಬ್ಬರು ನದಿಗಿಳಿದು ಆತ್ಮಹತ್ಯೆಗೆ ಯತ್ನಿಸಿದ್ದು ದೇಗುಲದ ಭದ್ರತಾ ಸಿಬ್ಬಂದಿಗಳ ಸಮಯ ಪ್ರಜ್ಞೆಯಿಂದ ಜೀವ ಬದುಕುಳಿದಿದೆ.


ಶುಕ್ರವಾರ ವೃದ್ದರೊಬ್ಬರು ನದಿ ನೀರಿನಲ್ಲಿ ಕೊಚ್ಚಿಹೋಗುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ ,ಕೂಡಲೇ ಸ್ಥಳದಲ್ಲಿದ್ದ ಭದ್ರತಾ ಸಿಬ್ಬಂದಿಗಳು ರಕ್ಷಣೆಗೆ ಧಾವಿಸಿದ್ದಾರೆ. ರಕ್ಷಣೆ ವೇಳೆ “ನನ್ನನ್ನು ಸಾಯಲು ಬಿಡಿ ಯಾಕೆ ರಕ್ಷಣೆ ಮಾಡ್ತೀರಿ” ಎಂದು ವೃದ್ದ ಬೊಬ್ಬೆ ಹೊಡೆದಿರುವುದಾಗಿ ರಕ್ಷಣೆಗೆ ಮುಂದಾದವರು ತಿಳಿಸಿದ್ದಾರೆ.


ರಕ್ಷಿಸಲ್ಪಟ್ಟವರನ್ನು ಪೊಲೀಸ್ ಠಾಣೆಗೆ ಕರೆದೊಯ್ದು ವಿಚಾರಿಸಲಾಗಿದೆ. ಆತ್ಮಹತ್ಯೆಗೆ ಯತ್ನಿಸಿದವರು ಬೆಂಗಳೂರು ನಿವಾಸಿ ಕೃಷ್ಣಮೂರ್ತಿ ಎಂಬವರಾಗಿದ್ದು ಮನೆ ವಿಚಾರವಾಗಿ ಮನಸ್ತಾಪಗೊಂಡು ಹತ್ತು ದಿನಗಳ ಹಿಂದೆ ಮನೆಬಿಟ್ಟು ಕುಕ್ಕೆಯತ್ತ ಬಂದಿದ್ದರು ಎಂಬುದು ಪೊಲೀಸರ ವಿಚಾರಣೆ ವೇಳೆ ಬೆಳಕಿಗೆ ಬಂದಿದೆ.


ಸಾಯಂಕಾಲದ ವೇಳೆ ಮನೆಯವರು ಬಂದು ವೃದ್ದನನ್ನು ಮನೆಗೆ ಕರೆದುಕೊಂಡು ಹೋಗಿದ್ದಾರೆ. ರಕ್ಷಣಾ ಕಾರ್ಯದಲ್ಲಿ ದೇಗುಲದ ಭದ್ರತಾ ಸಿಬ್ಬಂದಿ ಲೋಕನಾಥ್, ಸ್ಥಳೀಯರಾದ ಗೋಪಾಲ, ಕೊಕ್ಕಡ ಬಾಬು ಭಾಗಿಯಾಗಿದ್ದರು. ಸಕಾಲಕ್ಕೆ ನದಿಗಳಿದು ವೃದ್ದನ ಪ್ರಾಣ ಕಾಪಾಡಿದ ತಂಡಕ್ಕೆ ಸಾರ್ವಜನಿಕರಿಂದ ಮೆಚ್ಚುಗೆ ವ್ಯಕ್ತವಾಗಿದೆ.

LEAVE A REPLY

Please enter your comment!
Please enter your name here