ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಮುಂಡೋವುಮೂಲೆ ಬಾಬು ನಾಯ್ಕ ಮುರೂರು ನಿಧನ

0

ಪುತ್ತೂರು:ನಿವೃತ್ತ ಬಿ.ಎಸ್.ಎನ್.ಎಲ್ ಉದ್ಯೋಗಿ ಒಳಮೊಗ್ರು ಗ್ರಾಮದ ಮುಂಡೋವುಮೂಲೆಯವರಾಗಿದ್ದು, ಮಂಡೆಕೋಲು ಗ್ರಾಮದ ಮುರೂರು ಎಂಬಲ್ಲಿ ವಾಸವಾಗಿದ್ದ ಬಾಬು ನಾಯ್ಕ (68ವ.)ರವರು ಅ. 15ರಂದು ರಾತ್ರಿ ನಿಧನರಾದರು.


ಆರಂಭದಲ್ಲಿ ಬಿಡಿಒ ಕಚೇರಿಯಲ್ಲಿ ಉದ್ಯೋಗವನ್ನು ಪಡೆದು ಬಳಿಕ 1978ರಲ್ಲಿ ಸುಳ್ಯ ಬಿ.ಎಸ್.ಎನ್.ಎಲ್. ಕಚೇರಿಯಲ್ಲಿ ಸರಕಾರಿ ಸೇವೆಗೆ ಸೇರ್ಪಡೆಗೊಂಡರು. ಸುಮಾರು 36 ವರ್ಷಗಳ ಕಾಲ ಸುಳ್ಯ, ಬೆಳ್ಳಾರೆ ಮತ್ತು ಮತ್ತು ಅಡ್ಕಾರಿನಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದರು.


ಮೃತರು ಪತ್ನಿ ನಿವೃತ್ತ ಶಿಕ್ಷಕಿ ಶ್ರೀಮತಿ ಚಂದ್ರಿಕಾ, ಪುತ್ರ ಕಿರಣ ಬಿ.ಸಿ, ಪುತ್ರಿ ಶ್ರೀಮತಿ ಕೀರ್ತಿ ವಿನೋದ್ ಬಿ.ಸಿ, ಸಹೋದರರಾದ ಶೀನ ನಾಯ್ಕ ಮುಂಡೋವುಮೂಲೆ, ಜನಾರ್ಧನ ನಾಯ್ಕ ಮುಂಡೋವುಮೂಲೆ, ಸಹೋದರಿಯರು, ಮೊಮ್ಮಗಳನ್ನು ಅಗಲಿದ್ದಾರೆ.

LEAVE A REPLY

Please enter your comment!
Please enter your name here