ಕಿರಿಯ ಕುಸುಮ ಮಿಷನ್ ಲೀಗ್ ಉದನ ವಲಯ ಸಾಂಸ್ಕೃತಿಕ ವೈಭವ-ನೆಲ್ಯಾಡಿ ಸೆಂಟ್ ಅಲ್ಫೋನ್ಸ ಪ್ರಥಮ, ಸೆಂಟ್ ಮೇರಿಸ್ ಆರ್ಲ ದ್ವಿತೀಯ

0

ನೆಲ್ಯಾಡಿ :ನೆಲ್ಯಾಡಿ ಸಂತ ಅಲ್ಫೋನ್ಸ ಸಭಾಂಗಣದಲ್ಲಿ ಕೊನೆಗೊಂಡ ಬೆಳ್ತಂಗಡಿ ಧರ್ಮ ಪ್ರಾಂತ್ಯದ ಹದಿನೈದು ವರ್ಷದೊಳಗಿನ ಬಾಲಕ ಬಾಲಕಿಯರ ಕಿರಿಯ ಕುಸುಮ ಮಿಷನ್ ಲೀಗ್ ಇದರ ದ್ವೈವಾರ್ಷಿಕ ಸಾಂಸ್ಕೃತಿಕ ಸ್ಪರ್ಧೆ ಗಳಲ್ಲಿ ಗುಂಪು ವಿಭಾಗದಲ್ಲಿ ಸ್ಕಿಟ್ ನಲ್ಲಿ ಪ್ರಥಮ ಸಮೂಹ ಗಾಯನದಲ್ಲಿ ಪ್ರಥಮ ವ್ಯಕ್ತಿಗತ ವಿಭಾಗದಲ್ಲಿ ನೃತ್ಯ ಪ್ರಥಮ, ಸೋಲೋ ಗಾಯನದಲ್ಲಿ ಪ್ರಥಮ, ಬೈಬಲ್ ವಾಚನದಲ್ಲಿ ಪ್ರಥಮ, ಭಾಷಣದಲ್ಲಿ ಪ್ರಥಮ, ವಚನ ಮಾಲೆಯಲ್ಲಿ ಪ್ರಥಮ ಹೀಗೆ ಒಟ್ಟು ಮೂವತ್ತೈದು ಅಂಕಗಳೊಂದಿಗೆ ಗ್ರೂಪ್ ಚಾಂಪಿಯನ್ಸ್ ಆಗಿ ನೆಲ್ಯಾಡಿ ಸೆಂಟ್ ಅಲ್ಫೋನ್ಸ ಹೊರ ಹೊಮ್ಮಿತು.

ಅದೇ ರೀತಿ, ಭಾಷಣದಲ್ಲಿ ಪ್ರಥಮ ಸೋಲೋ ಗಾಯನದಲ್ಲಿ ಪ್ರಥಮ ವಚನ ಮಾಲೆಯಲ್ಲಿ ಪ್ರಥಮ ಹಾಗೂ ಸಮೂಹ ಗಾಯನದಲ್ಲಿ ತೃತೀಯ ಸ್ಥಾನದೊಂದಿಗೆ ರನ್ನರ್ಸ್ ಅಪ್ ಪ್ರಶಸ್ತಿಯನ್ನು ಸೆಂಟ್ ಮೇರಿಸ್ ಆರ್ಲ ಪಡೆದುಕೊಂಡಿತು.


ಕಾರ್ಯಕ್ರಮದಲ್ಲಿ ಉದನೆ ಸೆಂಟ್ ತೋಮಸ್ ಫೋರೆನ್ ಚರ್ಚ್ ನ ಧರ್ಮ ಗುರು ಫಾ.ಸಿಬಿ ತೋಮಸ್ ಪನಚಿಕ್ಕಲ್, ಫಾ. ಜೋಸೆಫ್ ಪೂದಕ್ಕುಯಿ, ಶಿರಾಡಿರೊಯ್ ನೆಲ್ಯಾಡಿ, ಶ್ಶ್ರೀ ಟೊಮಿ ಮಟ್ಟಮ್, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷರು ಉಪಸ್ಥಿತರಿದ್ದರು. ನೆಲ್ಯಾಡಿ ಚರ್ಚ್ ನ ಫಾ. ಶಾಜಿ ಮಾತ್ಯು ವಿಜೇತರನ್ನು ಅಭಿನಂದಿಸಿದರು. ಅಡ್ಡ ಹೊಳೆ ಸೆಂಟ್ ಜೋಸೆಫ್ ಚರ್ಚ್ ನ ವ.ಫಾ. ಜೋಸೆಫ್ ಪಾಂಪಕಲ್ ಕಾರ್ಯಕ್ರಮದ ಮುಖ್ಯ ನಿರ್ದೇಶಕರಾಗಿ ಕರ್ತವ್ಯ ನಿರ್ವಹಿಸಿದರು.

LEAVE A REPLY

Please enter your comment!
Please enter your name here