ಪುತ್ತೂರು: ಪವಿತ್ರವಾದ ತಿರುಪತಿ ಲಡ್ಡು ಪ್ರಸಾದವನ್ನು ಅಪವಿತ್ರಗೊಳಿಸಿರುವ ಬಗೆಗೆ ಪುತ್ತೂರಿನ ಬಪ್ಪಳಿಗೆಯ ಸುಬ್ರಹ್ಮಣ್ಯ ನಟ್ಟೋಜ ಅವರು ಪುತ್ತೂರು ನಗರ ಪೋಲಿಸ್ ಠಾಣೆಯಲ್ಲಿ ನೀಡಿರುವ ದೂರನ್ನು ಹೈದರಾಬಾದಿನ ಜುಬ್ಲಿಹಿಲ್ ಪೋಲಿಸ್ ಠಾಣೆಗೆ ರವಾನಿಸಲಾಗಿದ್ದು, ಅಲ್ಲಿ ಕೇಸು ದಾಖಲಾಗಿದೆ ಹಾಗೂ ಪೋಲೀಸರು ತನಿಖೆ ನಡೆಸುತ್ತಿದ್ದಾರೆ.
ತಾವು ನೀಡಿರುವ ದೂರಿನ ತನಿಖೆಯ ವಿವರದ ಕುರಿತಾಗಿ ಸುಬ್ರಹ್ಮಣ್ಯ ನಟ್ಟೋಜ ಅವರು ಮಾಹಿತಿ ಹಕ್ಕಿನ ಮುಖಾಂತರ ಪುತ್ತೂರು ಠಾಣೆಯ ಸಾರ್ವಜನಿಕ ಮಾಹಿತಿ ಅಧಿಕಾರಿಯರಿಗೆ ಅರ್ಜಿ ಸಲ್ಲಿಸಿದ್ದರು. ಅದಕ್ಕೆ ಪ್ರತಿಯಾಗಿ ಇದೀಗ ಮಾಹಿತಿ ಅಧಿಕಾರಿಯವರು ಪತ್ರಮುಖೇನ ಸುಬ್ರಹ್ಮಣ್ಯ ನಟ್ಟೋಜ ಅವರಿಗೆ ದೂರಿನ ತನಿಖಾ ಪ್ರಕ್ರಿಯೆಯ ಕುರಿತು ಹೈದರಾಬಾದ್ ಠಾಣೆಯ ಪೋಲೀಸರು ಕಾರ್ಯಪ್ರವೃತ್ತರಾಗಿರುವ ಬಗ್ಗೆ ತಿಳಿಸಿದ್ದಾರೆ.