ಪುತ್ತೂರು: ಶಿಕ್ಷಣ ಇಲಾಖೆಯ ವತಿಯಿಂದ ನಡೆದ 2024-25 ರ ನಗರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ಸುದಾನ ವಸತಿ ಶಾಲೆಯ 11 ವಿದ್ಯಾರ್ಥಿಗಳು ತಾಲೂಕು ಮಟ್ಟದ ಕ್ರೀಡಾ ಕೂಟಕ್ಕೆ ಆಯ್ಕೆಗೊಂಡಿರುತ್ತಾರೆ.
7ನೇ ತರಗತಿಯ ಜಯಂತ್ 600ಮೀ ಹಾಗೂ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ.7ನೇ ತರಗತಿಯ ಮಹಮ್ಮದ ಮಾಹಿರ್ ಎತ್ತರ ಜಿಗಿತದಲ್ಲಿ ದ್ವಿತೀಯ ಸ್ಥಾನ. 8ನೇ ತರಗತಿಯ ಯಶವಂತ್ ಗುಂಡು ಎಸೆತದಲ್ಲಿ ಪ್ರಥಮ ಸ್ಥಾನ. 6ನೇ ತರಗತಿಯ ಶ್ರೀ ಈಶ ಎನ್ ಹೆಗ್ಡೆ 600 ಮೀ ನಲ್ಲಿ ತೃತೀಯ ಸ್ಥಾನ. 10ನೇ ತರಗತಿಯ ವಿಘ್ನೇಶ್ ಸಿ ರೈ ಗುಂಡು ಎಸೆತದಲ್ಲಿ ದ್ವಿತೀಯ, ಚಕ್ರ ಎಸೆತದಲ್ಲಿ – ತೃತೀಯ ಸ್ಥಾನ 8ನೇ ತರಗತಿಯ ಶಶಾಂಕ್ 200 ಮೀ, 400 ಮೀ ದ್ವಿತೀಯ, 100 ಮೀ ತೃತೀಯ ಸ್ಥಾನ. 9ನೇ ತರಗತಿಯ ಗಗನ್ 100 ಮೀ, 200ಮೀ ತೃತೀಯ ಸ್ಥಾನ. ಅಕಿಲ್ (9ನೇ), ಆಭೀನ್ ಎಸ್ ರೈ (9ನೇ), ಯಶಸ್ (9ನೇ), ಅರ್ನವ್ ಅನಂತ್ ಅರಿಗ (10ನೇ) 4*100 ಮೀ ರಿಲೇ ಯಲ್ಲಿ ದ್ವಿತೀಯ ಸ್ಥಾನವನ್ನು ಹಾಗೂ ಉದಯ್ (8ನೇ), ಸಹನ್ ಎಸ್ (8ನೆ), ತನ್ಮಯ್(8ನೇ) 4*100 ಮೀ ರಿಲೆಯಲ್ಲಿ ತೃತೀಯ ಸ್ಥಾನವನ್ನು ಪಡೆದಿರುತ್ತಾರೆ.
ಇವರನ್ನು ಶಾಲಾ ಸಂಚಾಲಕ ರೆ. ವಿಜಯ ಹಾರ್ವಿನ್, ಮುಖ್ಯ ಶಿಕ್ಷಕಿ ಶೋಭಾನಾಗರಾಜ್ ಅಭಿನಂದಿಸಿ, ಶುಭಹಾರೈಸಿದ್ದಾರೆ. ಇವರಿಗೆ ಶಾಲಾ ದೈಹಿಕ ಶಿಕ್ಷಣ ಶಿಕ್ಷಕಿ ಲೀಲಾವತಿ, ಪುಷ್ಪರಾಜ್,. ನವೀನ್ ಮತ್ತು ಶ್ರೀನಿಧಿ ಆರ್ಯಪು ತರಬೇತಿ ನೀಡಿದ್ದಾರೆ.