





ಪುತ್ತೂರು: ನೆಹರೂ ನಗರದಲ್ಲಿರುವ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ರಾಷ್ಟ್ರೀಯ ಸೇವಾ ಯೋಜನಾ ಘಟಕದ 2024-25ರ ಸಾಲಿನ ವಿದ್ಯಾರ್ಥಿ ನಾಯಕರಾಗಿ ದ್ವಿತೀಯ ಎಲ್. ಎಲ್.ಬಿ.ಯ ಪೃಥ್ವಿ ಸಾಗರ್, ದ್ವಿತೀಯ ಬಿ.ಎ.ಎಲ್. ಎಲ್.ಬಿ.ಯ ಪ್ರಣಾಮ್ಯ ಪಕಳ, ಧನಿಷ್ ಹಾಗೂ ಸಂಪ್ರೀತಾ ರವರು ಆಯ್ಕೆಯಾಗಿದ್ದಾರೆ. ಇವರಿಗೆ ವಿವೇಕಾನಂದ ಕಾನೂನು ಮಹಾವಿದ್ಯಾಲಯದ ಪ್ರಾಂಶುಪಾಲರಾದ ಅಕ್ಷತಾ ಎ. ಪಿ. ರವರು ‘ಎನ್. ಎಸ್. ಎಸ್ ಕಾರ್ಯ ಚಟುವಟಿಕೆಗಳ ಪುಸ್ತಕ’ವನ್ನು ನೀಡುವ ಮೂಲಕ ಜವಾಬ್ದಾರಿಯನ್ನು ವಹಿಸಲಾಯಿತು.







