ಪುತ್ತೂರು: ಇಲ್ಲಿನ ಕೆಎಸ್ಆರ್ಟಿಸಿ ಬಸ್ನಿಲ್ದಾಣದ ಬಳಿಯ ಹೋಟೆಲ್ನಲ್ಲಿ ಕೆಲಸ ಮಾಡುತ್ತಿದ್ದ ಉತ್ತರ ಪ್ರದೇಶ ಮೂಲದ ರಾಧೆಶ್ಯಾಮ್(47ವ.)ಅವರು ಹೃದಯಾಘಾತದಿಂದ ನಿಧನರಾಗಿದ್ದಾರೆ.
ರಾಧೆಶ್ಯಾಮ್ ಅವರು ಅ.27ರಂದು ಬೆಳಿಗ್ಗೆ ಎಂದಿನಂತೆ ಹೋಟೆಲಿನಲ್ಲಿ ಕೆಲಸ ಮಾಡುತ್ತಿದ್ದ ಸಮಯ ಮೈಗೆ ಹುಷಾರಿಲ್ಲ ಎಂದು ಹೋಟೆಲಿನ ಮ್ಯಾನೇಜರ್ರವರಿಗೆ ತಿಳಿಸಿ ಹೋಟೆಲ್ ಕಟ್ಟಡದ ಹಿಂಬದಿ ತನ್ನ ವಾಸ್ತವ್ಯದ ಬಾಡಿಗೆ ಮನೆಗೆ ಹೋಗಿದ್ದಾರೆ. ಬಾಡಿಗೆ ಮನೆಯಲ್ಲಿ ರಾಧೆಶ್ಯಾಮ್ರವರಿಗೆ ತೀವ್ರ ಎದೆನೋವು ಕಾಣಿಸಿಕೊಂಡಿದ್ದು, ಜೊತೆ ಇದ್ದ ಅವರ ಊರಿನವರಾದ ಹೋಟೆಲ್ ಕೆಲಸದಾಳು ರವಿಕುಮಾರ್ರವರು ಕೂಡಲೇ ಮ್ಯಾನೇಜರ್ರವರಿಗೆ ವಿಚಾರ ತಿಳಿಸಿದ್ದು ಅವರು ಆಟೋ ರಿಕ್ಷಾವೊಂದರಲ್ಲಿ ರಾಧೆಶ್ಯಾಮ್ರವರನ್ನು ಪುತ್ತೂರು ಸರಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿಯ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದನ್ನು ಧೃಢಪಡಿಸಿದ್ದಾರೆ.
ಈ ಬಗ್ಗೆ ರಾಧೆಶ್ಯಾಮ್ ಅವರ ಸಂಬಂಧಿಕರಾದ ಭರತಿಕುಮಾರ್ ಎಂಬವರು ನೀಡಿದ ದೂರಿನಂತೆ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.