





ಪುತ್ತೂರು: ಬೆನಕ ಇವೆಂಟ್ಸ್ ಕುಂದಾಪುರ ಇದರ ವತಿಯಿಂದ ಸ್ವದೇಶಿ ಉತ್ಪನ್ನಗಳ ಮಾರಾಟ ಮತ್ತು ಆಹಾರ ಮೇಳವು ಅ.31 ರಿಂದ ನ.3ರ ನ ಪುತ್ತೂರಿನ ಅರುಣಾ ಕಲಾಮಂದಿರದಲ್ಲಿ ಬೆಳಗ್ಗೆ ಗಂಟೆ 10 ರಿಂದ ರಾತ್ರಿ 10 ಗಂಟೆಯ ತನಕ ನಡೆಯಲಿದೆ ಎಂದು ಸಂಘಟಕ ಬ್ರಹ್ಮಾವರ ಗಣೇಶ್ ಶೆಟ್ಟಿಯವರು ಪತ್ರಿಕಾಗೋಷ್ಟಿಯಲ್ಲಿ ತಿಳಿಸಿದ್ದಾರೆ.


ರೋಟರಿಕ್ಲಬ್ ಸಹಯೋಗದೊಂದಿಗೆ 4 ವರ್ಷಗಳ ಹಿಂದೆ ಬ್ರಹ್ಮಾವರದಲ್ಲಿ ಹಲಸು ಮೇಳ ಮಾಡಿದ್ದೇವು. ಅದಾದ ಬಳಿಕ ಸ್ವದೇಶಿ ಉತ್ಪನ್ನಗಳಿಗೆ ಹೆಚ್ಚಿನ ಆದ್ಯತೆ ನೀಡಿ ಭಟ್ಕಳ, ಸಾಗರ, ಕುಮಟ, ಅಂಕೋಲ ಇದೀಗ ಪುತ್ತೂರಿನಲ್ಲಿ ಸ್ವದೇಶಿ ಮೇಳ ಮಾಡುತ್ತಿದ್ದೇವೆ. ಮೇಳಕ್ಕೆ ಉಚಿತ ಪ್ರವೇಶವಿದೆ. ಸುಮಾರು 70 ಸ್ಟಾಲ್ಗಳಿವೆ. ಎಲ್ಲವೂ ಒಂದಕ್ಕಿಂತ ಒಂದು ಭಿನ್ನವಾದ ಸ್ಟಾಲ್ಗಳನ್ನು ಹಾಕಿಸಲಾಗಿದೆ. ನೈಸರ್ಗಿಕ ಸೌಂದರ್ಯ ವರ್ಧಕಗಳು, ಖಾದಿ ಉತ್ಪನ್ನಗಳು, ದೇಶಿಯ ಆಹಾರ, ನಿತ್ಯ ಬಳಕೆಯ ವಸ್ತುಗಳು, ಸಾವಯವ ಉತ್ಪನ್ನಗಳು, ಫ್ಯಾನ್ಸಿ ಸೀರೆಗಳು, ಗೃಹ ಅಲಂಕಾರಿಕ ವಸ್ತುಗಳು, ರೆಡಿಮೆಡ್ ಡ್ರೆಸ್ಗಳು, ಚೆನ್ನಪಟ್ಟಣದ ಬೊಂಬೆಗಳು, ಇಳಕಲ್ ಸೀರೆಗಳು, ಒನ್ಗ್ರಾಂ ಗೋಲ್ಡ್ ಜ್ಯುವೆಲರಿ, ಮಕ್ಕಳ ಉಡುಪು, ಹಪ್ಪಳ, ಸಂಡಿಗೆ, ಉಪ್ಪಿನಕಾಯಿ, ಆದಿವಾಸಿ ಹರ್ಬಲ್ ಹೇರ್ ಆಯಿಲ್, ಹೋಂಮೇಡ್ ಕಾಂಡಿಮೆಂಡ್ಸ್, ಉತ್ತರ ಮತ್ತು ದಕ್ಷಿಣ ಭಾರತದ ಆಹಾರಗಳು ಸಹಿತ ಹಲವಾರು ಉತ್ಪನ್ನಗಳ ಮಾರಾಟ ಮೇಳವಿದೆ. ಇದರ ಜೊತೆಗೆ ಹಲಸು ಮತ್ತು ಮಾವಿನ ಗಿಡಗಳು, ಹೂವಿನ ಗಿಡಗಳು, ಗೆಡ್ಡೆಗಳು, ತರಕಾರಿ ಬೀಜ ಹಲವು ಅನೇಕ ನರ್ಸರಿ ಗಿಡಗಳಿವೆ. ಹಳೆಯ ಜರಿ ಸೀರೆಗಳನ್ನು ಖರೀದಿಸಿ, ಸೂಕ್ತ ಮೌಲ್ಯನೀಡಲಾಗುವುದು ಎಂದು ಅವರು ತಿಳಿಸಿದರು. ಪತ್ರಿಕಾಗೋಷ್ಟಿಯಲ್ಲಿ ಭಾಸ್ಕರ್ ಪೂಜಾರಿ, ಪ್ರಶಾಂತ್ ದೇವಾಡಿಗ ಉಪಸ್ಥಿತರಿದ್ದರು.







 
            
