ಪುತ್ತೂರು:ಅಡಿಕೆ ಬೆಳೆಗೆ ಬಾಧಿಸುತ್ತಿರುವ ಎಲೆಚುಕ್ಕಿ ರೋಗದ ನಿಯಂತ್ರಣಕ್ಕಾಗಿ ತೋಟಗಾರಿಕೆ ಇಲಾಖೆಯಿಂದ ಪ್ರೋಪಿಕೊನಝೋಲ್ ಎಂಬ ಶಿಲೀಂಧ್ರ ನಾಶಕವನ್ನು ಉಚಿತವಾಗಿ ವಿತರಿಸಲಾಗುತ್ತಿದೆ.
ತೋಟಗಾರಿಕ ಇಲಾಖೆಯ 2024-25ನೇ ಸಾಲಿನ ಕೀಟರೋಗ ನಿಯಂತ್ರಣ ಯೋಜನೆಯಡಿ ಎಲೆಚುಕ್ಕಿ ರೋಗಕ್ಕೆ ಶಿಲೀಂಧ್ರ ನಾಶಕವನ್ನು ಉಚಿತವಾಗಿ ವಿತರಿಸಲಾಗುತ್ತಿದ್ದು ರೈತರು ತಮ್ಮ ಜಮೀನಿಮ ಪಹಣಿ ಹಾಗೂ ಆಧಾರ್ ಪ್ರತಿ ಸಲ್ಲಿಸಿ ಶಿಲೀಂದ್ರ ನಾಶಕವನ್ನು ಪಡೆದುಕೊಳ್ಳಬಹುದು. ತಾಲೂಕಿನ ಅಡಿಕೆ ಬೆಳೆಗಾರರದು ಇದರ ಪಡೆದುಕೊಳ್ಳುವಂತೆ ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೆಶಕಿ ರೇಖಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.