ಬೆಳಕಿನ ಹಬ್ಬದ ಸಂಭ್ರಮಕ್ಕೆ “ಗ್ಲೋವಿಂಗ್ 100” ಪ್ರಭೆ – ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಗ್ರಾಹಕರಿಗೆ ‘ಡಬಲ್ ಧಮಾಕಾ’

0

ಪುತ್ತೂರು: ನಾಡಿನ ಹೆಸರಾಂತ ಚಿನ್ನಾಭರಣಗಳ ಮಳಿಗೆ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಈ ಬಾರಿಯ ದೀಪಾವಳಿ ಸಂಭ್ರಮ ‘ಡಬಲ್ ಧಮಾಕ’ವಾಗಿ ಇನ್ನಷ್ಟು ಪ್ರಭೆಯಿಂದ ಬೆಳಗಲಿದೆ..! ಹೌದು, “ಗ್ಲೋವಿಂಗ್ 100” ದಿ| ಜಿ.ಎಲ್.ಆಚಾರ್ಯ ಜನ್ಮ ಶತಾಬ್ಧಿ ಹಾಗೂ ದಿಪಾವಳಿ ಪ್ರಯುಕ್ತ ಚಿನ್ನಾಭರಣಗಳ ಖರೀದಿಗೆ ಗ್ರಾಹಕರಿಗೆ ವಿಶೇಷ ಕೊಡುಗೆಯನ್ನು ಘೋಷಿಸಲಾಗಿದೆ.

ಬೆಳಕಿನ ಹಬ್ಬದ ಈ ವಿಶೇಷ ಸಂದರ್ಭದಲ್ಲಿ ಸಂಪತ್ತಿನ ಅಧಿದೇವತೆಯಾಗಿರುವ ಧನಲಕ್ಷ್ಮಿಯನ್ನು ಪೂಜಿಸುವ ಪದ್ಧತಿ ನಮ್ಮ ಸನಾತನ ಸಂಸ್ಕೃತಿಯಲ್ಲಿ ಅನಾದಿ ಕಾಲದಿಂದಲೂ ಪ್ರಚಲಿತದಲ್ಲಿದೆ. ಅದಕ್ಕೆಂದೇ, ‘ಯಾ ದೇವಿ ಸರ್ವಭೂತೇಶು ಲಕ್ಷ್ಮೀ ರೂಪೇಣ ಸಂಸ್ಥಿತಾ..’ ಎನ್ನುವ ಉಕ್ತಿಯಂತೆ, ಬೆಳಕಿನ ಹಬ್ಬದ ಶುಭ ಸಂದರ್ಭದಲ್ಲಿ ಆಭರಣಗಳನ್ನು ಖರೀದಿಸುವುದರಿಂದ ಆ ‘ಸ್ವರ್ಣ ಸಂಪತ್ತು’ ನಮ್ಮ ಮನೆ-ಮನಗಳು ಬೆಳಗುತ್ತವೆ ಎಂಬ ನಂಬಿಕೆ.

ಪ್ರತೀ ಹಬ್ಬಗಳು ಹಾಗೂ ವಿಶೇಷ ದಿನಾಚರಣೆಗಳ ಸಂದರ್ಭಗಳಲ್ಲಿ ತನ್ನ ಚಿನ್ನದ ಮಳಿಗೆಗಳಲ್ಲಿ ಗ್ರಾಹಕರಿಗಾಗಿ ವೈವಿಧ್ಯಮಯ ಆಫರ್ಗಳನ್ನು ಪರಿಚಯಿಸುತ್ತಲೇ ಇರುತ್ತದೆ. ಅದರಂತೆ, ಈ ಬಾರಿ ಬೆಳಕಿನ ಹಬ್ಬದ ಶುಭ ಸಂದರ್ಭದಲ್ಲಿ ಪುತ್ತೂರಿನ ಮುಖ್ಯ ರಸ್ತೆಯಲ್ಲಿರುವ ಪ್ರತಿಷ್ಠಿತ ಜಿ.ಎಲ್. ಆಚಾರ್ಯ ಜ್ಯುವೆಲ್ಲರ್ಸ್ ನಲ್ಲಿ ಸಂಸ್ಥೆಯ ಸಂಸ್ಥಾಪಕರಾದ ದಿ| ಶ್ರೀ ಜಿ ಎಲ್ ಆಚಾರ್ಯ ಜನ್ಮಶತಾಬ್ಧಿ ಹಾಗೂ ದೀಪಾವಳಿ ಪ್ರಯುಕ್ತ ಗ್ರಾಹಕ ಬಂಧುಗಳು ಖರೀದಿಸುವ ಚಿನ್ನಾಭರಣಗಳ ಖರೀದಿಗೆ ವಿಶೇಷ ಕೊಡುಗೆಯನ್ನು ಪ್ರಕಟಿಸಲಾಗಿದೆ.

ಇದರಂತೆ, ದಿ| ಜಿ.ಎಲ್. ಆಚಾರ್ಯರ ಜನ್ಮಶತಾಬ್ಧಿ ಅಂಗವಾಗಿ “ಗ್ಲೋವಿಂಗ್ 100” ಹೆಸರಿನಲ್ಲಿ ಹಾಗೂ ದಿಪಾವಳಿ ಪ್ರಯುಕ್ತ ಎಲ್ಲಾ ಗ್ರಾಹಕರು ತಾವು ಖರೀದಿಸುವ ಚಿನ್ನಾಭರಣಗಳ ಮೇಲೆ ಖಚಿತ ಉಡುಗೊರೆಗಳನ್ನು ಪಡೆದುಕೊಳ್ಳಲಿದ್ದಾರೆ. ಇಷ್ಟು ಮಾತ್ರವಲ್ಲದೇ, ಅದೃಷ್ಟಶಾಲಿ ಗ್ರಾಹಕರಿಗೆ ಚಿನ್ನದ ನೆಕ್ಲೇಸ್ ಪಡೆಯುವ ಸುವರ್ಣಾವಕಾಶವಿದ್ದು, ಈ ಕೊಡುಗೆ ಅ.31 ರಿಂದ ನವಂಬರ್ 13ರವರೆಗೆ ಲಭ್ಯವಿದೆ.

ಹೊಸ ಬಗೆಯ ವಿನ್ಯಾಸದ ನೆಕ್ಲೇಸ್ ಗಳು, ವೆಡ್ಡಿಂಗ್ ಕಲೆಕ್ಷನ್, ಲೈಟ್ ವೈಟ್ ಆಭರಣಗಳು, ಆಧುನಿಕ ಶೈಲಿಯ ಚಿನ್ನದ ತಾಳಿ, ಸಾಂಪ್ರದಾಯಿಕ ಕರಿಮಣಿ ಸರಗಳು, ಚಿನ್ನದ ಅಪರೂಪದ ಕಲಾತ್ಮಕ ಕಿವಿಯೋಲೆಗಳ ಅಪೂರ್ವ ಸಂಗ್ರಹವಿದ್ದು ಗ್ರಾಹಕರ ಬಹು ಆಯ್ಕೆಗಾಗಿ ಇವೆಲ್ಲಾ ಲಭ್ಯವಿದೆ.



1957ರಲ್ಲಿ ಶ್ರೀಯುತ ಜಿ.ಎಲ್. ಆಚಾರ್ಯ ಅವರಿಂದ ಕೃಷಿ ಪಟ್ಟಣವಾದ ಪುತ್ತೂರಿನಲ್ಲಿ ಸ್ಥಾಪಿಸಲಾದ ಸಂಸ್ಥೆಯು ಸುಮಾರು 67 ವರ್ಷಗಳಿಂದ ಸ್ವರ್ಣೋದ್ಯಮದಲ್ಲಿ ವಿಶ್ವಾಸ, ಪರಿಶುದ್ಧತೆ, ಪರಂಪರೆ, ನವನವೀನ ವಿನ್ಯಾಸ ಹಾಗೂ ಗ್ರಾಹಕ ಸೇವೆಗಳಿಗೆ ಸದಾ ಬದ್ಧವಾಗಿರುವ ಸಂಸ್ಥೆಯಾಗಿ ಬೆಳೆದು ಬಂದಿದ್ದು, ಗ್ರಾಹಕರ ಮನಸೂರೆಗೊಳ್ಳುವ ವಿನೂತನ ವಿನ್ಯಾಸದ ಚಿನ್ನದ ಆಭರಣಗಳು, ವಜ್ರಾಭರಣಗಳು, ಬೆಳ್ಳಿಯ ಆಭರಣಗಳು, ಆಂಟಿಕ್ ಆಭರಣಗಳು, ಅನ್ ಕಟ್ ಡೈಮಂಡ್ಸ್ ಹಾಗೂ ಅಮೂಲ್ಯ ಹರಳುಗಳ ವಿಪುಲ ಸಂಗ್ರಹವಿದ್ದು ಗ್ರಾಹಕರು ಆರಾಮದಾಯಕವಾಗಿ ಶಾಪಿಂಗ್ ಮಾಡಲು ಉತ್ತಮ ಪಾರ್ಕಿಂಗ್ ವ್ಯವಸ್ಥೆ ಕೂಡಾ ಲಭ್ಯವಿದೆ.

ಆಧುನಿಕ ಮತ್ತು ಪಾರಂಪರಿಕ ಚಿನ್ನದ ಆಭರಣಗಳು, ವಜ್ರಾಭರಣಗಳಿಗೆ ಹಾಗೂ ಗುಣಮಟ್ಟದ ಚಿನ್ನಾಭರಣಗಳ ಮಾರಾಟದಲ್ಲಿ ಹೆಸರುವಾಸಿಯಾಗಿರುವ ಸಂಸ್ಥೆಯು ಸುಳ್ಯ, ಮೂಡಬಿದ್ರೆ, ಹಾಸನ ಹಾಗೂ ಕುಶಾಲನಗರದಲ್ಲಿ ಮಳಿಗೆಗಳನ್ನು ಹೊಂದಿದ್ದು, ಈ ವಿಶೇಷ ಆಫರ್ ಮತ್ತು ಉಡುಗೊರೆಗಳು ಎಲ್ಲಾ ಮಳಿಗೆಗಳಲ್ಲಿ ಲಭ್ಯವಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.

LEAVE A REPLY

Please enter your comment!
Please enter your name here