ರೆಂಜಲಾಡಿ ಬದ್ರಿಯಾ ಜುಮಾ ಮಸೀದಿ ಮಹಾಸಭೆ-ಪದಾಧಿಕಾರಿಗಳ ಆಯ್ಕೆ

0

ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ, ಪ್ರ.ಕಾರ್ಯದರ್ಶಿಯಾಗಿ ಝೈನುದ್ದೀನ್ ಜೆ.ಎಸ್ ಪುನರಾಯ್ಕೆ

ಪುತ್ತೂರು: ಬದ್ರಿಯಾ ಜುಮಾ ಮಸೀದಿ ರೆಂಜಲಾಡಿ ಇದೆ 2024-25ನೇ ಸಾಲಿನ ಗೌರವಾಧ್ಯಕ್ಷರಾಗಿ ವಿ.ಎಚ್ ಅಬ್ದುಲ್ ಶಕೂರ್ ಹಾಜಿ, ಅಧ್ಯಕ್ಷರಾಗಿ ಆರ್.ಎಂ ಅಲಿ ಹಾಜಿ ರೆಂಜಲಾಡಿ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ ಝೈನುದ್ದೀನ್ ಹಾಜಿ ಜೆ.ಎಸ್ ಪುನರಾಯ್ಕೆಗೊಂಡಿದ್ದಾರೆ.


ರೆಂಜಲಾಡಿ ಗೌಸಿಯಾ ಮದ್ರಸ ಸಭಾಂಗಣದಲ್ಲಿ ನಡೆದ ಕಮಿಟಿಯ ವಾರ್ಷಿಕ ಮಹಾಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.


ಉಪಾಧ್ಯಕ್ಷರಾಗಿ ಇಮ್ರಾನ್ ಮಲ್ನಾಡ್ ಹಾಗೂ ಉಮ್ಮರ್ ಸುಲ್ತಾನ್ ರೆಂಜಲಾಡಿ, ಕೋಶಾಧಿಕಾರಿಯಾಗಿ ಅಬ್ದುಲ್ ರಹಿಮಾನ್ ಕಲ್ಪಣೆ, ಜೊತೆ ಕಾರ್ಯದರ್ಶಿಗಳಾಗಿ ಅಬ್ದುಲ್ ಅಝೀಝ್ ರೆಂಜಲಾಡಿ, ಅಬ್ದುಲ್ ರಹೀಂ ರೆಂಜಲಾಡಿ ಹಾಗೂ ಇಸಾಕ್ ಎಸ್.ಪಿ.ಟಿ ರೆಂಜಲಾಡಿ ಆಯ್ಕೆಯಾದರು.


ನಿರ್ದೇಶಕರಾಗಿ ಅಮೀರ್ ರೆಂಜಲಾಡಿ, ಕೆ.ಎಂ ಹನೀಫ್ ರೆಂಜಲಾಡಿ, ಅಬ್ದುಲ್ ರಹಿಮಾನ್ ಹಾಜಿ ಪರಾಡ್, ಮಹಮ್ಮದ್ ಕೆಜಿಎನ್ ಕಲ್ಪಣೆ, ಆಸಿಫ್ ರೆಂಜಲಾಡಿ, ಹಸೈನಾರ್ ಡಿ.ಪಿ.ಓ, ಇಸ್ಮಾಯಿಲ್ ಕಟ್ಟತ್ತಡ್ಕ, ರಫೀಕ್ ರೆಂಜಲಾಡಿ, ಜಿ.ಎ ಮಹಮ್ಮದ್, ಹಸೈನಾರ್ ಎಚ್, ಯೂಸುಫ್ ಎ, ಹನೀಫ್ ಆರ್.ಐ ಹಾಗೂ ಉಸ್ಮಾನ್ ರೆಂಜಲಾಡಿ ಅವರನ್ನು ಆಯ್ಕೆ ಮಾಡಲಾಯಿತು.

ಸಲಹಾ ಸಮಿತಿ ಸದಸ್ಯರಾಗಿ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ, ಇಬ್ರಾಹಿಂ ಕಡ್ಯ, ನಾಸಿರ್ ಫೈಝಿ, ಮಹಮ್ಮದ್ ಅಮಾನಿ ಹಾಗೂ ಎ ಇಬ್ರಾಹಿಂ ಅವರನ್ನು ಆಯ್ಕೆ ಮಾಡಲಾಯಿತು.

LEAVE A REPLY

Please enter your comment!
Please enter your name here