ಪುತ್ತೂರು ಮೂರ್ತೆದಾರರ ಸಹಕಾರ ಸಂಘದಲ್ಲಿ ಗಣಪತಿ ಹೋಮ – ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಿಗೆ ಗೌರವ

0

ನನ್ನ ಪ್ರಥಮ ಹುದ್ದೆಯೇ ಮೂರ್ತೆದಾರರ ಸಂಘದಿಂದ ಆರಂಭ – ಸುಂದರ ಪೂಜಾರಿ ಬಡಾವು

ಪುತ್ತೂರು: ಮೂರ್ತೇದಾರರ ಸಹಕಾರ ಸಂಘ ನನಗೆ ಹಲವು ಸಹಕಾರ ನೀಡಿದೆ. ನಾನು ಪ್ರಥಮವಾಗಿ ಚುನಾಯುತನಾದ ಸಂಸ್ಥೆ ಇದ್ದರೆ ಅದು ಮೂರ್ತೆದಾರರ ಸಹಕಾರ ಸಂಘ. ಆ ಬಳಿಕ ನನಗೆ ವಿವಿಧ ಕ್ಷೇತ್ರದಲ್ಲಿ ಹುದ್ದೆ ಲಭಿಸಿದೆ ಎಂದು ನಗರಸಭೆ ಸ್ಥಾಯಿ ಸಮಿತಿ ನೂತನ ಅಧ್ಯಕ್ಷ, ಪುತ್ತೂರು ಮೂರ್ತೆದಾರರ ಸಹಕಾರ ಸಂಘದ ಅಧ್ಯಕ್ಷ ಸುಂದರ ಪೂಜಾರಿ ಬಡಾವು ಅವರು ಹೇಳಿದರು.


ಪುತ್ತೂರು ಪಡೀಲ್ ನಲ್ಲಿ ಕಾರ್ಯಾಚರಿಸುತ್ತಿರುವ ಮೂರ್ತೆದಾರರ ಸಹಕಾರ ಸಂಘದಲ್ಲಿ ದೀಪಾವಳಿ ಹಬ್ಬದ ಅಂಗವಾಗಿ ನಡೆದ ಗಣಪತಿ ಹೋಮದ ಬಳಿಕ ಸಂಘದ ವತಿಯಿಂದ ನಡೆದ ಸರಳ ಸಮಾರಂಭದಲ್ಲಿ ಇತ್ತೀಚೆಗೆ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷರಾಗಿ ಆಯ್ಕೆಗೊಂಡ ಹಿನ್ನೆಲೆಯಲ್ಲಿ ಸಂಘದ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಸಂಸ್ಥೆ ನನಗೆ ಸಮಾಜದಲ್ಲಿ ಸ್ಥಾನಮಾನ ತಂದು ಕೊಟ್ಟಿದೆ. ಹಾಗಾಗಿ ಜೀವಮಾನ ಇಡಿ ಸಂಘಕ್ಕೆ ಋಣಿಯಾಗಿರುತ್ತೇನೆ ಎಂದ ಅವರು ಇವತ್ತು ಸಂಸ್ಥೆ ಸುಮಾರು 50 ಕೋಟಿ ರೂಪಾಯಿಯ ವ್ಯವಹಾರದಲ್ಲಿ ತೊಡಗಿದೆ. ಇದಕ್ಕೆ ಸಂಘದ ಉಪಾಧ್ಯಕ್ಷರು, ನಿರ್ದೇಶಕರು, ಕಾರ್ಯನಿರ್ವಹಣಾಧಿಕಾರಿ ಮತ್ತು ಸಿಬ್ಬಂದಿ ವರ್ಗ ಹಾಗು ಸದಸ್ಯರು ಮೂಲ ಕಾರಣಕರ್ತರಾಗಿದ್ದಾರೆ ಎಂದರು.

ಸಂಘದ ಉಪಾಧ್ಯಕ್ಷ ಬಿ.ಕೆ.ಆನಂದ ಸುವರ್ಣ ಬಪ್ಪಳಿಗೆ, ನಿರ್ದೇಶಕರಾದ ಪದ್ಮಪ್ಪ ಪೂಜಾರಿ ಮತಾವು, ಜಿನ್ನಪ್ಪ ಪೂಜಾರಿ ಮುರ, ವೀರಪ್ಪ ಪೂಜಾರಿ ಡೆಕ್ಕಾಜೆ, ಶಯನಾ ಜಯಾನಂದ ಕೋಡಿಂಬಾಡಿ, ಜಯಲಕ್ಷ್ಮೀ ಸುರೇಶ್ ಕೇಪುಳು, ಗೋಪಾಲಕೃಷ್ಣ ಸುವರ್ಣ, ಕೆ.ಚಂದಪ್ಪ ಪೂಜಾರಿ ಕಾಡ್ಲ, ಉಮೇಶ್ ಬಿ ರಾಗಿದಕುಮೇರು, ಸಂಘದ ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ, ಸಿಬ್ಬಂದಿಗಳಾದ ಕವಿತಾ, ಆದರ್ಶ ಸಹಿತ ಹಲವಾರು ಮಂದಿ ಉಪಸ್ಥಿತರಿದ್ದರು. ಕಾರ್ಯನಿರ್ವಹಣಾಧಿಕಾರಿ ರಾಧಾಕೃಷ್ಣ ಕಾರ್ಯಕ್ರಮ ನಿರೂಪಿಸಿದರು. ಬೆಳಿಗ್ಗೆ ಹರೀಶ್ ಶಾಂತಿ ಗಣಪತಿ ಹೋಮ ನೆರವೇರಿಸಿದರು.

LEAVE A REPLY

Please enter your comment!
Please enter your name here