ಕಾಣಿಯೂರು: ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘವು ಸುಧೀರ್ಘ 100 ವರ್ಷಗಳನ್ನು ಪೂರೈಸಿ ನವೆಂಬರ್ ತಿಂಗಳಿಗೆ ಶತಮಾನೋತ್ಸವದ ಸಂಭ್ರಮದಲ್ಲಿದ್ದು, ಶತಮಾನದ ನೆನಪಿಗಾಗಿ ಸಂಘದ ವತಿಯಿಂದ ಮಂಗಳೂರು ಎ. ಜೆ ವೈದ್ಯಕೀಯ ಮಹಾ ವಿದ್ಯಾಲಯ ಆಸ್ಪತ್ರೆಯ ಸಹಭಾಗಿತ್ವದಲ್ಲಿ ಸಂಘದ ಕಾರ್ಯವ್ಯಾಪ್ತಿಯ ಸದಸ್ಯರಿಗೆ ಉಚಿತ ಬೃಹತ್ ಅರೋಗ್ಯ ತಪಾಸಣಾ ಶಿಬಿರವು ನ.3ರಂದು ಕಾಣಿಯೂರು ಸ.ಹಿ. ಪ್ರಾ. ಶಾಲೆಯಲ್ಲಿನ ನಡೆಯಲಿದೆ.
ಕಾರ್ಯಕ್ರಮವನ್ನು ಕಾರ್ಮಿಕ ಮತ್ತು ಉದ್ಯೋಗ ಕೇಂದ್ರ ಸಚಿವರಾದ ಶೋಭಾ ಕರಂದ್ಲಾಜೆ ಅವರು ಉದ್ಘಾಟಿಸಲಿದ್ದು, ಚಾರ್ವಾಕ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷರಾದ ಗಣೇಶ್ ಉದನಡ್ಕ ಅಧ್ಯಕ್ಷತೆ ವಹಿಸಲಿದ್ದಾರೆ. ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಕಾಣಿಯೂರು ಗ್ರಾಮ ಪಂಚಾಯತ್ ಅಧ್ಯಕ್ಷ ವಿಶ್ವನಾಥ ಕೊಪ್ಪ, ದ. ಕ ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕಿನ ನಿರ್ದೇಶಕ ಶಶಿಕುಮಾರ್ ರೈ ಬಾಲ್ಯೊಟ್ಟು, ಸಿ. ಜೆ ಚಂದ್ರಕಲಾ ಅರುವಗುತ್ತು, ಕಾಣಿಯೂರು ಸ. ಹಿ. ಪ್ರಾ. ಶಾಲಾ ಎಸ್ ಡಿ ಎಂ ಸಿ ಅಧ್ಯಕ್ಷ ಪರಮೇಶ್ವರ ಗೌಡ ಅನಿಲ, ಹಿರಿಯ ವಿದ್ಯಾರ್ಥಿ ಸಂಘದ ಅಧ್ಯಕ್ಷ ಪದ್ಮಯ್ಯ ಗೌಡ ಅನಿಲ, ಕಾಣಿಯೂರು ಕುಮಾರ್ ಕ್ಲಿನಿಕ್ ನ ಡಾ. ಉದಯ ಕುಮಾರ್ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಶಿಬಿರದಲ್ಲಿ ದಂತ ತಪಾಸಣೆ, ಚರ್ಮರೋಗ, ಎಲುಬು (ಆರ್ಥೋಪೆಡಿಕ್ಸ್ ), ಕಣ್ಣಿನ ತಪಾಸಣೆ (ಆಯ್ದ ಫಲಾನುಭವಿಗಳಿಗೆ ಕನ್ನಡಕ ನೀಡಲಾಗುವುದು), ಕಿವಿ, ಮೂಗು, ಗಂಟಲು ತಪಾಸಣೆ ( ಇ.ಎನ್.ಟಿ), ಒ.ಬಿ.ಜಿ (ಸ್ತ್ರೀ ರೋಗ) ಹಾಗೂ ಸಾಮಾನ್ಯ ಅರೋಗ್ಯ ತಪಾಸಣೆಯು ನಡೆಯಲಿದ್ದು, ಶಿಬಿರದ ಸದುಪಯೋಗವನ್ನು ಪಡೆದುಕೊಳ್ಳುವಂತೆ ಸಂಘದ ಅಧ್ಯಕ್ಷ ಗಣೇಶ್ ಉದನಡ್ಕ, ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಅಶೋಕ್ ಗೌಡ, ಉಪಾಧ್ಯಕ್ಷ ಬಾಲಕೃಷ್ಣ ಗೌಡ ಇಡ್ಯಡ್ಕ ಹಾಗೂ ನಿರ್ದೇಶಕರು ತಿಳಿಸಿದ್ದಾರೆ.