ಕಾವು:ಬುಶ್ರಾ ಆಂಗ್ಲ ಮಾಧ್ಯಮ ಶಾಲೆ ಕಾವು ಇಲ್ಲಿ 69ನೇ ಕನ್ನಡ ರಾಜ್ಯೋತ್ಸವವನ್ನು ವಿಜ್ರಂಭಣೆಯಿಂದ ಆಚರಿಸಲಾಯಿತು. ವೇದಿಕೆಯಲ್ಲಿ ಅಧ್ಯಕ್ಷ ಸ್ಥಾನವನ್ನು ಸಂಸ್ಥೆಯ ಮುಖ್ಯ ಶಿಕ್ಷಕಿ ದೀಪಿಕಾ ಚಾಕೋಟೆ ವಹಿಸಿ ಕನ್ನಡ ರಾಜ್ಯೋತ್ಸವದ ಮಹತ್ವವನ್ನು ವಿದ್ಯಾರ್ಥಿಗಳಿಗೆ ತಿಳಿಸಿದರು.
ವೇದಿಕೆಯಲ್ಲಿ ಸಂಸ್ಥೆಯ ಹಿರಿಯ ಶಿಕ್ಷಕಿ ಹೇಮಲತಾ ಕಜೆಗದ್ದೆ ಕರ್ನಾಟಕ ಎಂಬ ಹೆಸರಿನ ಮಹತ್ವ ಹೇಗೆ ಬೆಳೆಯಿತು ಎಂಬುದರ ಬಗ್ಗೆ ಮಾತನಾಡಿದರು. ಪ್ರಾಥಮಿಕ ಶಾಲಾ ಕನ್ನಡ ಶಿಕ್ಷಕಿ ಚೇತನ ಭಾಷಾ ಉಳಿವಿನ ಬಗ್ಗೆ ಮಾತನಾಡಿದರು..ಶೈಕ್ಷಣಿಕ ಸಲಹೆಗಾರ ಕೃಷ್ಣ ಪ್ರಸಾದ್ ಕನ್ನಡ ಹಾಡಿನೊಂದಿಗೆ ಕರ್ನಾಟಕ ವೈಭವವನ್ನು ಹಾಡಿದರು.
ವಿದ್ಯಾರ್ಥಿಗಳು ಕರ್ನಾಟಕದ ಗತ ವೈಭವದ ಬಗ್ಗೆ ಹಾಡಿನೊಂದಿಗೆ ಸಾಂಸ್ಕೃತಿಕ ಕಾರ್ಯಕ್ರಮವನ್ನು ನೀಡಿದರು. ಶಾಲಾ ನಾಯಕ ಹರ್ಷಲ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಪ್ರೌಢಶಾಲಾ ಕನ್ನಡ ಶಿಕ್ಷಕ ಚಂದ್ರಮೋಹನ್ ಎಲ್ಲರನ್ನ ಸ್ವಾಗತಿಸಿ ಕನ್ನಡ ಭಾಷೆ ಉಳಿವು ಹೋರಾಟ ಬೆಳವಣಿಗೆಯ ಬಗ್ಗೆ ಮಾತನಾಡಿ ಕಾರ್ಯಕ್ರಮ ನಿರೂಪಿಸಿ ಎಲ್ಲರನ್ನು ವಂದಿಸಿದರು…