puttur: ಮಾಯಿದೆ ದೇವುಸ್ ಸಮೂಹ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಸಂತ ವಿಕ್ಟರ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನ.1ರಂದು ಕನ್ನಡ ರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯ ಗುರು ಹ್ಯಾರಿ ಡಿ’ಸೋಜಾ ಇವರು ಕಾರ್ಯಕ್ರಮದ ಅಧ್ಯಕ್ಷ ಸ್ಥಾನವನ್ನು ವಹಿಸಿ ಕನ್ನಡಾಂಬೆಗೆ ಪುಷ್ಪಾರ್ಚನೆಗೈದರು.ಮುಖ್ಯ ಗುರು ಹಾಗೂ ಹಿರಿಯ ಶಿಕ್ಷಕರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ನಮ್ಮ ಕನ್ನಡ ನಾಡಿನ ಮಹತ್ವ ವನ್ನು ಕಿರು ಪ್ರಸಂಗದ ಮೂಲಕ ವಿದ್ಯಾರ್ಥಿಗಳು ಪ್ರದರ್ಶಿಸಿದರು. ಶಾಲಾ ಮುಖ್ಯ ಗುರು ಹ್ಯಾರಿ ಡಿ’ಸೋಜಾ ಮಾತನಾಡಿ ರಾಜ್ಯದಲ್ಲಿ ಹಲವು ಭಾಷೆಗಳಿದ್ದರೂ, ನಾವು ಕನ್ನಡಕ್ಕೆ ಮುಖ್ಯ ಸ್ಥಾನವನ್ನು ನೀಡಬೇಕು. ನಮ್ಮ ನಾಡು ನುಡಿ ಅದು ಕನ್ನಡ ಭಾಷೆ , ಕನ್ನಡವನ್ನು ಬರೆದು ಕನ್ನಡವನ್ನು ಮಾತನಾಡುವುದರ ಮೂಲಕ ನಾವು ಕನ್ನಡಾಂಬೆಗೆ ಕೊಡುಗೆಯನ್ನು ನೀಡಬೇಕಾಗಿದೆ ಎಂದು ಹೇಳಿದರು.
ಕುಮಾರಿ ಹನ ಸ್ವಾಗತಿಸಿದರು. ಕುಮಾರಿ ಸಾನ್ವಿ ವಂದಿಸಿದರು.ಕುಮಾರಿ ಫಾತಿಮಾತ್ ರಿಷ್ಮಾ ಹಾಗೂ ಕುಮಾರಿ ಕೃತಿ ಕಾರ್ಯಕ್ರಮದ ನಿರೂಪಣೆ ಮಾಡಿದರು.