ಪುತ್ತೂರು: ಪಾಂಗಳಾಯಿ ಬೆಥನಿ ಪ್ರೌಢಶಾಲೆಯಲ್ಲಿ ನ.1ರಂದು 69ನೇ ಕನ್ನಡ ರಾಜ್ಯೋತ್ಸವವನ್ನು ಶಾಲಾ ಸಭಾಂಗಣದಲ್ಲಿ ನಡೆಯಿತು.
ಅಧ್ಯಕ್ಷತೆ ವಹಿಸಿದ್ದ ಶಾಲಾ ಮುಖ್ಯೋಪಾಧ್ಯಾಯಿನಿ ಭಗಿನಿ ಶಾಂತಿ ಆಗ್ನೆಸ್ ಮಾತನಾಡಿ, ವಿದ್ಯಾರ್ಥಿಗಳಿಗೆ ಕನ್ನಡವನ್ನು ಸರಿಯಾಗಿ ಬರೆಯುವ ಓದುವ ದೃಢ ನಿರ್ದಾರ ಮಾಡಬೇಕೆಂದು ಕರೆ ನೀಡಿದರು.
ಮುಖ್ಯ ಅತಿಥಿ ರಾಮಚಂದ್ರ ಭಟ್ ಮಾತನಾಡಿ, ಕನ್ನಡದ ಮಹತ್ವ, ಹಿರಿಮೆ, ಭಾಷೆಯ ಮೇಲಿನ ಹಿಡಿತ ಬಗ್ಗೆ ಮಾಹಿತಿ ನೀಡಿದರು. ರಕ್ಷಕ ಶಿಕ್ಷಕ ಸಂಘದ ಉಪಾಧ್ಯಕ್ಷ ರಘುನಾಥ್ ರೈ, ಸುರಕ್ಷಾ ಸಮಿತಿಯ ಅಧ್ಯಕ್ಷೆ ಸುನಿತಾ ಪಿರೇರಾ ವೇದಿಕೆಯಲ್ಲಿ ಉಪಸ್ಥಿತರಿದ್ದರು.
೯ನೇ ತರಗತಿಯ ವಿದ್ಯಾರ್ಥಿಗಳು ಕಾರ್ಯಕ್ರಮವನ್ನು ನಡೆಸಿಕೊಟ್ಟರು. ವಿದ್ಯಾರ್ಥಿಗಳಾದ ಚಿನ್ಮಯಿ ಮತ್ತು ಪ್ರೀತಿಕಾ ಕಾರ್ಯಕ್ರಮ ವಿರ್ವಹಿಸಿದರು. ಶಮ್ನಾ ಸ್ವಾಗತಿಸಿದರು. ರೀದಾ ವಂದಿಸಿದರು. ಅಭಿರಾಮ್ ಕನ್ನಡನಾಡಿನ ಮಹತ್ವದ ಬಗ್ಗೆ ತಿಳಿಸಿದರು. ಶಿಕ್ಷಕಿ ಫ್ಲೋರಿನ್ ಮಕ್ಕಳಿಗೆ ಮಾರ್ಗದರ್ಶನ ನೀಡಿದರು.