ಪರವೂರಿನ ಪುತ್ತೂರಿನವರು
ಪುತ್ತೂರು: ಖ್ಯಾತ ಲೇಖಕ ಜಯಪ್ರಕಾಶ್ ರಾವ್ರವರಿಗೆ ಮೈಸೂರು ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಲಭಿಸಿದೆ. ಮೈಸೂರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರು ಪ್ರಶಸ್ತಿ ಪ್ರದಾನ ಮಾಡಿದರು. ಮೂಲತಃ ಪುತ್ತೂರಿನವರಾದ ಜಯಪ್ರಕಾಶ್ ರಾವ್ರವರು ಸ್ವದೇಶಿ ನಿರ್ಮಿತ ತೇಜಸ್ ಯುದ್ಧ ವಿಮಾನ [LCA] ದ ವಿನ್ಯಾಸ ಹಾಗೂ ಅಭಿವೃಧಿ ಕೇಂದ್ರದ ಪ್ರಧಾನ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ DRDO ಸಂಸ್ಥೆಯ ಪ್ರಾದೇಶಿಕ ಸಾರ್ವಜನಿಕ ಸಂಪರ್ಕಾಧಿಕಾರಿ ಹಾಗೂ ಡಾ.ಕಲಾಂ ಅವರ ಸಮನ್ವಯ ಅಧಿಕಾರಿಯಾಗಿ 7 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ಸೇವಾವಧಿಯಲ್ಲಿ ಡಾ.ಕಲಾಂ ಅವರ ಶಿಷ್ಟಾಚಾರ ಅಧಿಕಾರಿಯಾಗಿಯೂ ಹಾಗೂ 3 ಕೇಂದ್ರ ರಕ್ಷಣಾ ಮಂತ್ರಿಗಳ ಸಮನ್ವಯ ಅಧಿಕಾರಿಯಾಗಿ ಕರ್ತವ್ಯ ನಿರ್ವಹಿಸಿ ತಮ್ಮ ಕಾಯ೯ ನಿರ್ವಹಣೆಗಾಗಿ ರಾಷ್ಟ್ರಮಟ್ಟದ ಪ್ರಶಸ್ತಿ ಮತ್ತು ಸಾರ್ವಜನಿಕ ಪರಿಷತ್ತಿನಿಂದ ಸರ್ವಶೇಷ್ಠವಾದ ಹಾಲ್ ಆಫ್ ಫೇಮ್ ಪುರಸ್ಕಾರ ಪಡೆದಿದ್ದಾರೆ. 14 ರಾಷ್ಟ್ರಗಳ ಕನ್ನಡ ಸಂಘಗಳು ಮತ್ತು ಅಕ್ಕ ಹಾಗೂ ನಾವಿಕ ವಿಶ್ವ ಸಮ್ಮೇಳನಗಳಲ್ಲಿ ಉಪನ್ಯಾಸ ನೀಡಿರುವ ಇವರು ಪ್ರಸ್ತುತ ಮೈಸೂರಿನಲ್ಲಿ ನೆಲೆಸಿದ್ದಾರೆ.