ಪಶು ಪಾಲನಾ ಇಲಾಖೆಯಿಂದ ಉಚಿತ ರಬ್ಬರ್ ನೆಲಹಾಸುಗೆ ಹೈನುಗಾರರಿಂದ ಅರ್ಜಿ ಆಹ್ವಾನ

0

ಪುತ್ತೂರು: ಪಶುಪಾಲನೆ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಲ್ಲಿ 2024-25ನೇ ಸಾಲಿನಲ್ಲಿ ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು(ಕೌ ಮ್ಯಾಟ್) ಉಚಿತ ವಿತರಣೆ ಹೈನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ.


ಕನಿಷ್ಠ ಎರಡು ಜಾನುವಾರುಗಳನ್ನು ಹೊಂದಿರುವ ಆಸಕ್ತ ಹೈನುಗಾರರು ಹತ್ತಿರದ ಪಶುಪಾಲನಾ ಇಲಾಖೆಯನ್ನು ಸಂಪರ್ಕಿಸಿ ಅರ್ಜಿ ಸಲ್ಲಿಸಬಹುದಾಗಿರುತ್ತದೆ. ಅರ್ಜಿಯೊಂದಿಗೆ ಹೈನುಗಾರರ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಬ್ಯಾಂಕ್ ಉಳಿತಾಯ ಖಾತೆ ಪ್ರತಿಯನ್ನು ಸಲ್ಲಿಸಬೇಕು. ಪರಿಶಿಷ ಜಾತಿ ಹಾಗೂ ಪರಿಶಿಷ್ಟ ಪಂಗಡದವರು ಆರ್‌ಡಿ ಸಂಖ್ಯೆ ಇರುವ ಜಾತಿ ಪ್ರಮಾಣಪತ್ರ ಪ್ರತಿಯನ್ನು ಕಡ್ಡಾಯವಾಗಿ ಸಲ್ಲಿಸಬೇಕು. ಪುತ್ತೂರು ತಾಲೂಕಿನಲ್ಲಿ ಒಟ್ಟು 26 ಹೈನುಗಾರರಿಗೆ ತಲಾ ಎರಡು ರಬ್ಬರ್ ನೆಲಹಾಸು ಉಚಿತವಾಗಿ ವಿತರಿಸುವ ಗುರಿಯನ್ನು ನಿಗದಿಪಡಿಸಲಾಗಿದೆ. ಅರ್ಜಿ ಸಲ್ಲಿಸಲು ನ.12 ಕೊನೇ ದಿನವಾಗಿರುತ್ತದೆ. ಪಶು ಆಸ್ಪತ್ರೆಯ ಮುಖ್ಯ ಪಶುವೈದ್ಯಾಧಿಕಾರಿ(ಆಡಳಿತ) ಡಾ| ಧರ್ಮಪಾಲ್ ಕೆ. ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

LEAVE A REPLY

Please enter your comment!
Please enter your name here