ಪುತ್ತೂರು: ಹತ್ತು ಹಲವು ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಹತ್ತೂರಲ್ಲೂ ಪ್ರಸಿದ್ಧಿ ಪಡೆದುಕೊಂಡಿರುವ ಕುಂಬ್ರ ವರ್ತಕರ ಸಂಘಕ್ಕೆ 20 ವರ್ಷಗಳು ತುಂಬುತ್ತಿದ್ದು ಇದರ ಸವಿ ನೆನಪಿಗಾಗಿ ಸಂಘದ 20 ನೇ ವರ್ಷಾಚರಣೆ ಹಾಗೂ ಪೊರ್ಲುದ ಕುಂಬ್ರ ‘ ಸೆಲ್ಪೀ ಪಾಯಿಂಟ್’ ಇದರ ಉದ್ಘಾಟನಾ ಕಾರ್ಯಕ್ರಮ ನ.16 ರಂದು ಕುಂಬ್ರ ಜಂಕ್ಷನ್ನಲ್ಲಿ ನಡೆಯಲಿದ್ದು ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ನ.4 ರಂದು ಕುಂಬ್ರ ನ್ಯೂ ಫ್ಯಾಮಿಲಿ ಕಾಂಪ್ಲೆಕ್ಸ್ ವಠಾರದಲ್ಲಿ ನಡೆಯಿತು. ಹಿರಿಯ ಪ್ರಗತಿ ಪರ ಕೃಷಿಕ ಗುಂಡ್ಯಡ್ಕ ವಾಸು ಪೂಜಾರಿಯವರು ಆಮಂತ್ರಣ ಪತ್ರಿಕೆ ಬಿಡುಗಡೆಗೊಳಿಸಿ ಕಾರ್ಯಕ್ರಮದ ಯಶಸ್ವಿಗೆ ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ವರ್ತಕರ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯ, ಗೌರವ ಸಲಹೆಗಾರರುಗಳಾದ ಅಬ್ದುಲ್ ರಹೀಮಾನ್ ಹಾಜಿ ಅರಿಯಡ್ಕ, ಕುಂಬ್ರ ದುರ್ಗಾಪ್ರಸಾದ್ ರೈ, ಚಂದ್ರಕಾಂತ ಶಾಂತಿವನ, ನಿಕಟಪೂರ್ವ ಅಧ್ಯಕ್ಷ ಎಸ್.ಮಾಧವ ರೈ ಕುಂಬ್ರ, ಕೋಶಾಧಿಕಾರಿ ಸಂಶುದ್ದೀನ್ ಎ.ಆರ್, ಪ್ರಧಾನ ಕಾರ್ಯದರ್ಶಿ ಭವ್ಯ ರೈ, ಮಾಜಿ ಅಧ್ಯಕ್ಷರುಗಳಾದ ದಿವಾಕರ ಶೆಟ್ಟಿ, ಮೆಲ್ವಿನ್ ಮೊಂತೆರೋ, ಉಪಾಧ್ಯಕ್ಷ ಉದಯ ಆಚಾರ್ಯ ಕೃಷ್ಣನಗರ, ಜತೆ ಕಾರ್ಯದರ್ಶಿ ಚರಿತ್ ಕುಮಾರ್, ಪದಾಧಿಕಾರಿಗಳಾದ ಸುರೇಶ್ ಕುಮಾರ್ ಸುಶಾ, ಪ್ರಸಾದ್ ಶಾಂಭವಿ ಬೇಕರಿ, ರಮೇಶ್ ಆಳ್ವ ಕಲ್ಲಡ್ಕ, ಉಮ್ಮರ್ ಡಿ.ಕೆ, ನಾರಾಯಣ ಕುಕ್ಕುಪುಣಿ, ಬಾಲಕೃಷ್ಣ ಪಾಟಾಳಿ, ಹನೀಫ್ ಭಾರತ್ ಸ್ಟೋರ್, ಅಜಿತಾ ನಾರಾಯಣ್ ಮತ್ತಿತರರು ಉಪಸ್ಥಿತರಿದ್ದರು. ಸ್ಥಾಪಕ ಅಧ್ಯಕ್ಷ ಶ್ಯಾಮ್ಸುಂದರ ರೈ ಕೊಪ್ಪಳ ಸ್ವಾಗತಿಸಿ, ಮಾಜಿ ಅಧ್ಯಕ್ಷ ನಾರಾಯಣ ಪೂಜಾರಿ ಕುರಿಕ್ಕಾರ ವಂದಿಸಿದರು.
ನ.16 ಅದ್ಧೂರಿ ಕಾರ್ಯಕ್ರಮ
ನ.16 ರಂದು ಸಂಜೆ 6.30 ರಿಂದ ಸಂಘದ ಅಧ್ಯಕ್ಷ ರಫೀಕ್ ಅಲ್ರಾಯರವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು ಶಾಸಕರಾದ ಅಶೋಕ್ ಕುಮಾರ್ ರೈ ಕಾರ್ಯಕ್ರಮ ಉದ್ಘಾಟಿಸಲಿದ್ದು, ಒಳಮೊಗ್ರು ಗ್ರಾಪಂ ಅಧ್ಯಕ್ಷೆ ತ್ರಿವೇಣಿ ಪಲ್ಲತ್ತಾರುರವರು ಪೊರ್ಲುದ ಕುಂಬ್ರ ‘ಸೆಲ್ಫೀ ಪಾಯಿಂಟ್’ ಉದ್ಘಾಟಿಸಲಿದ್ದಾರೆ.ಸಂಸದ ಕ್ಯಾ.ಬ್ರಿಜೇಶ್ ಚೌಟ, ವಿಧಾನ ಪರಿಷತ್ತು ಸದಸ್ಯ ಕಿಶೋರ್ ಕುಮಾರ್ ಪುತ್ತೂರು ಸಹಿತ ಹಲವು ಮಂದಿ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿ ವಿಶೇಷವಾಗಿ ಆಕರ್ಷಣ್ ಇಂಡಸ್ಟ್ರೀಸ್ ಮುಕ್ರಂಪಾಡಿ ಇವರು ಕೊಡುಗೆಯಾಗಿ ನೀಡಿದ ‘ಸೆಲ್ಪೀ ಪಾಯಿಂಟ್’ ಉದ್ಘಾಟನೆ, ಅಕ್ಷಯ ಕಾಲೇಜು ಸಂಪ್ಯ ಇವರಿಂದ ‘ಅಕ್ಷಯ ಕಲಾ ವೈಭವ’ ನಡೆಯಲಿದೆ.