





ಪುತ್ತೂರು: ಕೆಐಸಿ ಇಲವೇಶನ್ ಸಮ್ಮಿಟ್ ಕಾರ್ಯಕ್ರಮದಲ್ಲಿ ಭಾಗವಹಿಸಲು ಸೌದಿ ಅರೇಬಿಯಾಗೆ ಆಗಮಿಸಿದ ಕರ್ನಾಟಕ ವಿಧಾನಸಭೆಯ ಸಭಾಪತಿ ಯು.ಟಿ ಖಾದರ್ ಹಾಗೂ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರನ್ನು ಅನಿವಾಸಿ ಭಾರತೀಯರ ತಂಡ ಜುಬೈಲ್ ಇಂಟರ್ ಕಾಂಟಿನೆಂಟ್ನಲ್ಲಿ ಸ್ವಾಗತಿಸಿದರು.


ತೌಸೀಫ್ ಅಹ್ಮದ್, ಪ್ಲಾಂಟ್ ಸೊಲ್ಯೂಷನ್ನ ಅಸ್ಕಾಫ್, ತ್ವಾಹಿರ್ ಸಾಲ್ಮರ, ಭಾರತ್ ಮುಸ್ತಫಾ, ಫೈರೋಝ್ ಫಹದ್ ಇಂಜಿನಿಯರ್, ಮುಸ್ತಾಕ್ ಕೋಡಿಂಬಾಡಿ, ಎಸ್.ಎ ಇಂಜಿನಿಯರಿಂಗ್ನ ಆಸಿಫ್ ದರ್ಬೆ, ಫಾರೂಕ್ ಪೋರ್ಟ್ಫೋಲಿಯೋ, ಶರೀಫ್ ಸಾಲ್ಮರ, ಹಾರಿಸ್ ಅರಂಡ ಮೊದಲಾದವರು ಸ್ವಾಗತಿಸಿ ಗೌರವಿಸಿದರು.












