ಬೆಂಗಳೂರು ದೊನ್ನೆ ಬಿರಿಯಾನಿ ಫ್ಯಾಮಿಲಿ ರೆಸ್ಟೋರೆಂಟ್ ಶುಭಾರಂಭ

0

ಪುತ್ತೂರು:ಬೆಂಗಳೂರಿನಲ್ಲಿ ಖ್ಯಾತಿ ಪಡೆದ ತೂಗುದೀಪ ದೊನ್ನೆ ಬಿರಿಯಾನಿಯ ಮಳಿಗೆ ‘ಬೆಂಗಳೂರು ದೊನ್ನೆ ಬಿರಿಯಾನಿ ಫ್ಯಾಮಿಲಿ ರೆಸ್ಟೋರೆಂಟ್’ ನ.4ರಂದು ದರ್ಬೆ ರಿಲಾಯನ್ಸ್ ಡಿಜಿಟಲ್ ಬಳಿ ಶುಭಾರಂಭಗೊಂಡಿತು.


ರಿಬ್ಬನ್ ಕತ್ತರಿಸಿ ಉದ್ಘಾಟಿಸಿದ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಹೊಟೇಲ್ ಉದ್ಯಮದಲ್ಲಿ ಗುಣಮಟ್ಟ ಮತ್ತು ಪ್ರಮಾಣ ಮುಖ್ಯ. ಸೇವೆಯು ಗ್ರಾಹಕರಿಗೆ ತೃಪ್ತಿದಾಯಕವಾಗಿರಬೇಕು. ಸಿಬ್ಬಂದಿಗಳು ಅದಕ್ಕೆ ಪೂರಕವಾಗಿರಬೇಕು. ಬೆಂಗಳೂರಿನಲ್ಲಿ ಖ್ಯಾತಿ ಪಡೆದ ದೊನ್ನೆ ಬಿರಿಯಾನಿಯನ್ನು ಪುತ್ತೂರಿನಲ್ಲಿ ಪ್ರಾರಂಭಿಸಿದ್ದು ಬೆಂಗಳೂರಿನಂತೆ ಪುತ್ತೂರಿನಲ್ಲಿ ಖ್ಯಾತಿ ಪಡೆಯಲಿ. ಸಾಕಷ್ಟು ಅನುಭನಗಳೊಂದಿಗೆ ಯುವಕರು ಸ್ವಂತ ಉದ್ಯಮ ಪ್ರಾರಂಭಿಸಿದ್ದು ನಿಮ್ಮ ಮುಖಾಂತರ ಇನ್ನಷ್ಟು ಮಂದಿಗೆ ಉದ್ಯೋಗ ದೊರೆಯಲಿದೆ. ಇನ್ನಷ್ಟು ಯುವ ಜನತೆ ಉದ್ಯಮದಲ್ಲಿ ಮುಂದೆ ಬರೆಬೇಕು ಎಂದರು.


ದೀಪ ಬೆಳಗಿಸಿದ ಆರಿಕೋಡಿ ಶ್ರೀ ಚಾಮುಂಡೇಶ್ವರಿ ಕ್ಷೇತ್ರದ ಧರ್ಮದರ್ಶಿ ಹರೀಶ್ ಆರಿಕೋಡಿ ಮಾತನಾಡಿ, ಸರಕಾರಿ ಕೆಲಸವೇ ಮುಖ್ಯವಲ್ಲ. ಮನಸ್ಸಿದ್ದರೆ ಸ್ವಂತ ಉದ್ಯೋಗ ಮಾಡಬಹುದು. ಯುವಕರಿಂದ ಪ್ರಾರಂಭಗೊಂಡ ರೆಸ್ಟೋರೆಂಟ್ ರಾಜ್ಯ ಮಟ್ಟದಲ್ಲಿ ಬೆಳೆಯಲಿ. ಉತ್ತಮ ಸೇವೆಯ ಮುಖಾಂತರ ಗ್ರಾಹಕರಿಂದ ಪ್ರಶಂಸೆಗೆ ಪಾತ್ರರಾಗಿ ಸಂಸ್ಥೆಯು ಹೆಮ್ಮರವಾಗಿ ಬೆಳೆದು ನೂರಾರು ಮಂದಿಗೆ ನೆರಳು ನೀಡುವಂತಾಗಲಿ ಎಂದು ಹಾರೈಸಿದರು.


ಮಾಯಿದೇ ದೇವುಸ್ ಚರ್ಚ್‌ನ ಪ್ರಧಾನ ಧರ್ಮಗುರು ಲಾರೆನ್ಸ್ ಮಸ್ಕರೇನಸ್ ಮಾತನಾಡಿ, ಜನರ ಸೇವೆಗಾಗಿ ತಮ್ಮನ್ನು ಅರ್ಪಣೆಗೊಳಿಸುವ ಉದ್ದೇಶದಿಂದ ಯುವ ಜನತೆ ಉದ್ಯಮ ಪ್ರಾರಂಭಿಸಿದ್ದಾರೆ. ಉತ್ತಮ ಸೇವೆ ಇರುವಲ್ಲಿ ಜನರು ಬಳಸಿಕೊಳ್ಳುತ್ತಾರೆ. ಅವರಾಗಿಯೇ ಪ್ರಚಾರ ನೀಡುತ್ತಾರೆ. ಹೊಸ ಉದ್ಯಮವು ಪುತ್ತೂರಿನ ಅಭಿವೃದ್ಧಿಗೆ ಇನ್ನೊಂದು ಗರಿಯಾಗಲಿ. ಸಂಸ್ಥೆಯು ಎಲ್ಲರ ಪ್ರೀತಿ ಪಾತ್ರವಾಗಲಿ ಎಂದರು.


ಕೋಟಿ-ಚೆನ್ನಯ ಕಂಬಳ ಸಮಿತಿ ಅಧ್ಯಕ್ಷ ಚಂದ್ರಹಾಸ ಶೆಟ್ಟಿ, ವಿಜಯ ಸಾಮ್ರಾಟ್‌ನ ಸ್ಥಾಪಕಾಧ್ಯಕ್ಷ ಸಹಜ್ ರೈ ಬಳೆಜ್ಜ, ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಎಂ.ಎಸ್ ಮಹಮ್ಮದ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೃಷ್ಣಪ್ರಸಾದ್ ಆಳ್ವ, ನಿಕಟಪೂರ್ವ ಅಧ್ಯಕ್ಷ ಎಂ.ಬಿ ವಿಶ್ವನಾಥ ರೈ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ಮುರಳೀಧರ ರೈ ಮಠಂತಬೆಟ್ಟು, ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಡಾ. ರಾಜರಾಮ ಕೆ.ಬಿ., ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಅಧ್ಯಕ್ಷ ಪಂಜಿಗುಡ್ಡೆ ಈಶ್ವರ ಭಟ್, ಕಾಂಗ್ರೆಸ್ ಸೇವಾದಳದ ಜಿಲ್ಲಾಧ್ಯಕ್ಷ ಜೋಕಿಂ ಡಿ ಸೋಜ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ರವೀಂದ್ರ ಶೆಟ್ಟಿ ನುಳಿಯಾಲು, ಮುರಳೀಧರ ರೈ ಮಠಂತಬೆಟ್ಟು, ಉದ್ಯಮಿ ಶಿವರಾಮ ಆಳ್ವ, ಇಡ್ಕಿದು ಸೇವಾ ಸಹಕಾರ ಸಂಘದ ಅಧ್ಯಕ್ಷ ಸುಧಾಕರ ಶೆಟ್ಟಿ, ಕರ್ನಾಟಕ ಜಾನಪದ ಪರಿಷತ್‌ನ ಅಧ್ಯಕ್ಷ ಸಂತೋಷ್ ರೈ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ ಪೆರ್ನೆ, ಪೂಡಾ ಸದಸ್ಯ ನಿಹಾಲ್ ರೈ, ಮಠಂತಬೆಟ್ಟು ಮಹಿಷಮರ್ದಿನಿ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಮಾಜಿ ಅಧ್ಯಕ್ಷ ನಿರಂಜನ ರೈ ಮಠಂತಬೆಟ್ಟು, ನಗರ ಸಭಾ ನಾಮನಿರ್ದೇಶಿತ ಸದಸ್ಯ ರೋಶನ್ ರೈ, ಉದ್ಯಮಿ ಗಂಗಾಧರ ಶೆಟ್ಟಿ ಪನಡ್ಕ, ಯಂಗ್ ಬ್ರಿಗೇಡ್ ಅಧ್ಯಕ್ಷ ರಂಜಿತ್ ಬಂಗೇರ, ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ಘಟಕದ ಅಧ್ಯಕ್ಷ ಶರೂನ್ ಸಿಕ್ವೇರಾ ಸೇರಿದಂತೆ ಹಲವು ಮಂದಿ ಗಣ್ಯರು ಆಗಮಿಸಿ ಶುಭಹಾರೈಸಿದರು.


ವಿ.ಜೆ ವಿಖ್ಯಾತ್ ಸ್ವಾಗತಿಸಿ, ವಂದಿಸಿದರು. ಪಾಲುದಾರರಾದ ಪ್ರಜ್ವಲ್ ರೈ, ರಾಜೇಶ್ ಶೆಟ್ಟಿ ಹಾಗೂ ಕಾರ್ತಿಕ್ ಅತಿಥಿಗಳನ್ನು ಸ್ವಾಗತಿಸಿ, ಸತ್ಕರಿಸಿದರು.


ದೊನ್ನೆ ಬಿರಿಯಾನಿ ಸವಿದ ಅತಿಥಿಗಳು:
ಉದ್ಘಾಟನಾ ಕಾರ್ಯಕ್ರಮದ ಬಳಿಕ ಶಾಸಕರು, ಅತಿಥಿಗಳು ಹಾಗೂ ಅಬ್ಯಾಗತರು ಬೆಂಗಳೂರು ದೊನ್ನೆ ಬಿರಿಯಾನಿ ರುಚಿಯನ್ನು ಸವಿದರು.

LEAVE A REPLY

Please enter your comment!
Please enter your name here