ಪುತ್ತೂರು: ಸರಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆ ಕುದ್ಮಾರು ಇಲ್ಲಿ ನಡೆದ ಸವಣೂರು ವಲಯ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಪುಣ್ಚಪ್ಪಾಡಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಒಟ್ಟು 16 ಪ್ರಶಸ್ತಿಗಳು ಬಂದಿದ್ದು ಕಿರಿಯರ ವಿಭಾಗದಲ್ಲಿ ಸಮಗ್ರ ಪ್ರಥಮ ಹಾಗೂ ಹಿರಿಯರ ವಿಭಾಗದಲ್ಲಿ ದ್ವಿತೀಯ ಸಮಗ್ರವನ್ನು ತನ್ನದಾಗಿಸಿಕೊಂಡಿದೆ.
ಕಿರಿಯರ ವಿಭಾಗದ ಧಾರ್ಮಿಕ ಪಠಣ ವಿವಾನ್ ಕಾರಂತ್ ಪ್ರಥಮ, ಕಥೆ ಹೇಳುವುದು ತ್ರಿಶ ವಿ.ಜೆ ಪ್ರಥಮ, ದೇಶಭಕ್ತಿಗೀತೆ ಪ್ರೇಕ್ಷ ಪ್ರಥಮ, ಅಭಿನಯಗೀತೆ ಮನ್ವಿತ ಪಿ.ಎಸ್ ಪ್ರಥಮ, ಭಕ್ತಿಗೀತೆ ಚೈತನ್ಯ.ಓ ದ್ವಿತೀಯ, ಕ್ಲೇ ಮಾಡೇಲಿಂಗ್ ಸಮೃದ್ಧ್ ತೃತೀಯ, ಚಿತ್ರಕಲೆ ಹಿಮಾನಿ ಸಿ. ಎಸ್ ತೃತೀಯ, ಛದ್ಮವೇಷ ಕೌಶಿಕ್ ಎಂ.ಡಿ ತೃತೀಯ ಹಾಗೂ ಹಿರಿಯರ ವಿಭಾಗದ ದೇಶಭಕ್ತಿಗೀತೆ ನಿಹಾಲ್ ಪ್ರಥಮ,ಕಥೆ ಹೇಳುವುದು ಸನ್ನಿಧಿ ಡಿ.ರೈ ಪ್ರಥಮ, ಧನುಷ್ ಕೆ.ಆರ್ ಆಶು ಭಾಷಣ ಪ್ರಥಮ ಮತ್ತು ಮಿಮಿಕ್ರಿ ದ್ವಿತೀಯ, ಕ್ಲೇ ಮಾಡೇಲಿಂಗ್ ತನ್ವಿತ್ ಪಿ.ಎಸ್ ದ್ವಿತೀಯ,ಕನ್ನಡ ಕಂಠಪಾಠ ಲಾವಣ್ಯ ದ್ವಿತೀಯ,ಹಿಂದಿ ಕಂಠಪಾಠ ಸಂಕೇತ್ ಎಲ್.ಬಿ ತೃತೀಯ, ಧಾರ್ಮಿಕ ಪಠಣ ಸನ್ನಿಧಿ.ಎನ್ ತೃತೀಯ ಬಹುಮಾನವನ್ನು ಪಡೆದಿದ್ದು 7 ವಿದ್ಯಾರ್ಥಿಗಳು ತಾಲೂಕು ಮಟ್ಟದ ಸ್ಪರ್ಧೆಗಳಿಗೆ ಆಯ್ಕೆಯಾಗಿರುತ್ತಾರೆ.