PUTTUR:2024-25ನೇ ಸಾಲಿನ ರಾಮಕುಂಜ ಕ್ಲಸ್ಟರ್ ಮಟ್ಟದ ಪ್ರಾಥಮಿಕ ವಿಭಾಗದ ಪ್ರತಿಭಾ ಕಾರಂಜಿ ಸ್ಪರ್ಧೆಯನ್ನು ಆತೂರು ಆಯಿಶಾ ವಿದ್ಯಾಲಯದಲ್ಲಿ ನ.7ರಂದು ನಡೆಯಿತು.
ಸಂಸ್ಥೆಯ ಸ್ಥಾಪಕ ಕಾರ್ಯದರ್ಶಿ ಜಲೀಲ್ ಮುಕ್ರಿ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷ ಅಮೀನ್ ಅಹ್ಸನ್ ಅಧ್ಯಕ್ಷೀಯ ಸ್ಥಾನವನ್ನು ವಹಿಸಿ ಮಾತನಾಡಿದರು.ಪುತ್ತೂರು ಕ್ಷೇತ್ರ ಶಿಕ್ಷಣಾಧಿಕಾರಿ ಲೋಕೇಶ್ ಎಸ್ ಮುಖ್ಯ ಅಥಿತಿಗಳಾಗಿ ಭಾಗವಹಿಸಿ ಮಕ್ಕಳಿಗೆ ಶುಭ ಹಾರೈಸಿದರು.
ಮುಖ್ಯ ಅಥಿತಿಗಳಾಗಿ ಭಾಗವಹಿಸಿ ದ ರಾಮಕುಂಜ ಗ್ರಾಮಪಂಚಾಯತ್ ಅಧ್ಯಕ್ಷೆ ಸುಚೇತ ಬಿ, ಕೊಯಿಲ ಗ್ರಾಮಪಂಚಾಯತ್ ಅಧ್ಯಕ್ಷ ಪುಷ್ಪ ಸುಭಾಶ್ ಶೆಟ್ಟಿ ಮಕ್ಕಳಿಗೆ ಶುಭ ನುಡಿ ಹೇಳಿದರು.ಸಿಆರ್ ಪಿ ಮಹೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು.ಪ್ರತಿಭಾ ಕಾರಂಜಿ ನೋಡಲ್ ಅಧಿಕಾರಿ ಶಾಂತಪ್ಪ ,ಮು.ಶಿ ಹಳೆನೇರಂಕಿ ಶಾಲೆ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಅಬ್ದುಲ್ ಹಸೀಬ್ ರವರು ಸ್ವಾಗತಿಸಿ ,ಪ್ರಾಂಶುಪಾಲರು ವಂದಿಸಿದರು.ಕಾರ್ಯಕ್ರಮವನ್ನು ಉಪನ್ಯಾಸಕರಾದ ರಮ್ಯ ಎಸ್ ಹಾಗೂ ಸವಿತಾ ಎಸ್ ಕೆ ರವರು ನಿರೂಪಿಸಿದರು.
ಕಿರಿಯ ವಿಭಾಗದ ಸಮಗ್ರ ಪ್ರಶಸ್ತಿಯನ್ನು ರಾಮಕುಂಜ ಆಂಗ್ಲ ಮಾಧ್ಯಮ ಶಾಲೆ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಹಳೆನೇರಂಕಿ ಶಾಲೆ ಪಡೆದುಕೊಂಡಿತು.
ಹಿರಿಯರ ವಿಭಾಗದ ಸಮಗ್ರ ಪ್ರಶಸ್ತಿಯನ್ನು ರಾಮಕುಂಜ ಆಂಗ್ಲ ಮಾಧ್ಯಮ ಶಾಲೆ ಪಡೆದುಕೊಂಡರೆ, ದ್ವಿತೀಯ ಸ್ಥಾನವನ್ನು ಆತಿಥೇಯ ವಹಿಸಿಕೊಂಡ ಆಯಿಶಾ ಶಾಲೆ ಪಡೆದುಕೊಂಡಿತು.