ಪುತ್ತೂರು: ಪುತ್ತೂರು ತಾಲೂಕು ಶಾಂತಿಗೋಡು ಗ್ರಾಮದ ಆನಡ್ಕ ಸರಕಾರಿ ಶಾಲೆಯ 7ನೇ ತರಗತಿ ವಿದ್ಯಾರ್ಥಿನಿ ಪ್ರಗತಿರವರು ಜಿಲ್ಲಾ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ 600ಮೀ ಓಟದಲ್ಲಿ ದ್ವಿತೀಯ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದು, ಇವರು ಅನಡ್ಕದ ಗುಂಡ್ಯಾಡ್ಕ ನಿವಾಸಿ ನಾರಾಯಣ ನಾಯ್ಕ ಮತ್ತು ಪೂರ್ಣಿಮಾ ದಂಪತಿ ಪುತ್ರಿ.
ಮರಾಟಿ ಸಮಾಜದ ಕ್ರೀಡಾ ಪ್ರತಿಭೆ ರಾಜ್ಯ ಮಟ್ಟಕ್ಕೆ ಆಯ್ಕೆ ಬಗ್ಗೆ ಹರ್ಷಿತರಾದ ಮರಾಟಿ ಸಮಾಜ ಸೇವಾ ಸಂಘ ನರಿಮೊಗರು ಇದರ ಅಧ್ಯಕ್ಷರಾದ ಮಹಾಲಿಂಗ ನಾಯ್ಕ ನರಿಮೊಗರು ಮತ್ತು ಪದಾಧಿಕಾರಿಗಳು ಪ್ರಗತಿ ಮನೆಗೆ ಹೋಗಿ ಆಕೆಯನ್ನು ಗೌರವಿಸಿದರು. ಈ ಸಂದರ್ಭದಲ್ಲಿ ಸಂಘದ ಮಾಜಿ ಅಧ್ಯಕ್ಷರುಗಳಾದ ಸುಂದರ ನಾಯ್ಕ ಮಾಯಂಗಳ, ಮೋಹನ ನಾಯ್ಕ ಕೆದಗೆದಡಿ, ಅಶ್ವಿನಿ, ಪಂಚಾಯತ್ ಸದಸ್ಯರಾದ ಪುಷ್ಪಾ ಮಾಯಂಗಲ, ಸಂಘದ ಉಪಾಧ್ಯಕ್ಷರಾದ ಗೋಪಾಲ ನಾಯ್ಕ ಎಲಿಕ, ಮಾಜಿ ಕಾರ್ಯದರ್ಶಿಗಳಾದ ಯೋಗೀಶ್ ಪಿ ಶಾಂತಿಗೋಡ್, ಮಾಜಿ ಪಂಚಾಯತ್ ಅಧ್ಯಕ್ಷರಾದ ನಳಿನಿ ಮುಂಡೋಡಿ, ಲಲಿತ ಪಂಜೀಗ ಹಾಗೂ ಪ್ರಗತಿಯ ಮನೆಯವರು ಉಪಸ್ಥಿತರಿದ್ದರು.