putturu: ಪುತ್ತೂರು ಸರಕಾರಿ ಆಸ್ಪತ್ರೆಯಲ್ಲಿ ವಿಕಲ ಚೇತನರ ಯು ಡಿ. ಐಡಿ ಪ್ರಮಾಣ ಪತ್ರ ಶಿಬಿರ ನ.8ರಂದು ನಡೆಯಿತು.
ಆಡಳಿತ ವೈದಾಧಿಕಾರಿ ಡಾ.ಆಶಾಜ್ಯೋತಿ ಅಧ್ಯಕ್ಷತೆಯಲ್ಲಿ ಹಾಗೂ ಪುತ್ತೂರು ತಾಲೂಕು ಮಟ್ಟದ ಪುನರ್ ವಸತಿ ಕಾರ್ಯಕರ್ತ ನವೀನ್ ಕುಮಾರ್ ಉಪಸ್ಥಿತಿಯಲ್ಲಿ ನಡೆಯಿತು.
ಹೊಸತು /ನವಿಕರಣ ವಿಕಲ ಚೇತನರ ಪ್ರಮಾಣ ಪತ್ರ ಶಿಬಿರವನ್ನು ಪುತ್ತೂರು ಸರಕಾರಿ ಆಸ್ಪತ್ರೆಯ ಎಲುಬು ಕೀಲು ತಜ್ಞರಾದ ಡಾಕ್ಟರ್ ಅಜಯ್ ಎಂ. ಬಿ, ಪುತ್ತೂರು ಸರಕಾರಿ ಆಸ್ಪತ್ರೆಯ ಹಿರಿಯ ತಜ್ಞರಾದ ಫಿಸಿಷಿಯನ್ ಡಾಕ್ಟರ್. ಯದು ರಾಜ್ ಡಿ.ಕೆ, ಕಿವಿ ಮೂಗು ಗಂಟಲು ತಜ್ಞರಾದ ದಕ್ಷಿಣ ಕನ್ನಡ ಜಿಲ್ಲೆಯ ಆಡಿಯೋಲಿಸ್ಟ್ ಸುಶಾಂತ್, ಡಾಕ್ಟರ್ ಜೈನಾಬ್ ಸುನು ಆಲಿ ನಡೆಸಿಕೊಟ್ಟರು. ಪುತ್ತೂರು ತಾಲ್ಲೂಕು ಹಾಗೂ ಕಡಬ ತಾಲೂಕಿನ ಗ್ರಾಮೀಣ ಹಾಗೂ ನಗರ ಪುನರ್ ವಸತಿ ಕಾರ್ಯಕರ್ತರು ಉಪಸ್ಥಿತರಿದ್ದರು.