ಪುತ್ತೂರು: ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ನ.7,8,9ರಂದು ನಡೆದ ಸಹ್ಯಾದ್ರಿ ಸೈನ್ಸ್ ಟ್ಯಾಲೆಂಟ್ ಹಂಟ್ 2024 ಕಾರ್ಯಕ್ರಮದಲ್ಲಿ ಬೆಟ್ಟಂಪಾಡಿ ಪ್ರೌಢಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿದ್ದು ಬಹುಮಾನ ಲಭಿಸಿರುತ್ತದೆ. 15 ಮಂದಿ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದು, 10ನೇ ತರಗತಿಯ ದೀಪಕ್ ರಾಜ್, ಅವಿನಾಶ್, ಆಕಾಶ್ರವರು ತಯಾರಿಸಿದ ಸ್ಮಾರ್ಟ್ ಗ್ಲಾಸ್ ಯೋಜನೆಯ ಮಾದರಿಗೆ ಬಹುಮಾನ ಲಭಿಸಿದೆ. ವಿಜ್ಞಾನ ಶಿಕ್ಷಕಿ ಸಿಂಧು ವಿ.ಕೆ.ರವರು ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದ್ದರು.
Home ಇತ್ತೀಚಿನ ಸುದ್ದಿಗಳು ಸಹ್ಯಾದ್ರಿಯಲ್ಲಿ ಸಿನೆರ್ಜಿ 2024: ಬೆಟ್ಟಂಪಾಡಿ ಸ.ಪ್ರೌ. ಶಾಲಾ ವಿದ್ಯಾರ್ಥಿಗಳಿಗೆ ಬಹುಮಾನ