ನಿಡ್ಪಳ್ಳಿ ಗ್ರಾಮ ಪಂಚಾಯತ್ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ

0

ನಿಡ್ಪಳ್ಳಿ; ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಾಮಾಜಿಕ ಪರಿಶೋಧನೆ ನಿರ್ದೇಶನಾಲಯ ಬೆಂಗಳೂರು, ನಿಡ್ಪಳ್ಳಿ ಗ್ರಾಮ ಪಂಚಾಯತ್ ಇದರ 2024-25 ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಮತ್ತು 15 ನೇ  ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನೆ ಗ್ರಾಮ ಸಭೆ ನ.11 ರಂದು ಗ್ರಾಮ ಪಂಚಾಯತ್ ಸಭಾಭವನದಲ್ಲಿ ನಡೆಯಿತು.

ಸಭೆಯಲ್ಲಿ ವಿವಿಧ ಹಂತದ ಕಾಮಗಾರಿ ಅನುಷ್ಠಾನ, ಕಾಮಗಾರಿ ನಿರ್ವಹಣೆ ಮತ್ತು ಸೂಕ್ತ ದಾಖಲಾತಿಗಳನ್ನು ಗ್ರಾಮ ಸಭೆಯಲ್ಲಿ ಮಂಡಿಸಲಾಯಿತು.

 ತಾಲೂಕು ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ವಿಷ್ಣು ಪ್ರಸಾದ್ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ನರೇಗಾ ತಾಲೂಕು ವ್ಯವಸ್ಥಾಪಕಿ ಕು.ಸೌಮ್ಯ,ಅಣ್ಣಪ್ಪ ನಾಯ್ಕ ಸಾಮಾಜಿಕ ಪರಿಶೋಧನೆಯ ವರದಿ ವಾಚಿಸಿದರು.ಪಂಚಾಯತ್ ಅಧ್ಯಕ್ಷ ವೆಂಕಟ್ರಮಣ ಬೋರ್ಕರ್ ಮಾತನಾಡಿ ನರೇಗಾದಲ್ಲಿ ಗ್ರಾಮಸ್ಥರು ಹೆಚ್ಚು ತಮ್ಮನ್ನು ತೊಡಗಿಸಿಕೊಂಡು ಪ್ರಯೋಜನ ಪಡೆದು‌ ಕೊಳ್ಳುವಂತೆ ತಿಳಿಸಿದರು. ನರೇಗಾ ಯೋಜನೆಯ ತಾಂತ್ರಿಕ ತಾಲೂಕು ಸಂಯೋಜಕ ವಿನೋದ್, ಪಂಚಾಯತ್ ಸದಸ್ಯರಾದ ಸತೀಶ್ ಶೆಟ್ಟಿ, ಬಾಲಚಂದ್ರ ನಾಯ್ಕ ವೇದಿಕೆಯಲ್ಲಿ ಉಪಸ್ಥಿತರಿದ್ದರು.

   ನರೇಗಾ ಯೋಜನೆಯ ಸಾಮಾಜಿಕ ಪರಿಶೋಧನಾ ತಂಡದ ಸದಸ್ಯರಾದ ರಮೇಶ್ ಪೂಜಾರಿ, ವಿದ್ಯಾ, ಚಂಚಲ, ಕೃತಿಶ್ರೀ, 15 ನೇ ಹಣಕಾಸು ಯೋಜನೆಯ ಸಾಮಾಜಿಕ ಪರಿಶೋಧನಾ ತಂಡದ ಸದಸ್ಯರಾದ ರೋಹಿಣಿ, ರಶ್ಮಿ ಹಾಜರಿದ್ದರು.

   ಪಿಡಿಒ ಸಂಧ್ಯಾಲಕ್ಷ್ಮೀ ಸ್ವಾಗತಿಸಿ ವಂದಿಸಿದರು.ಸಿಬ್ಬಂದಿಗಳಾದ ರೇವತಿ, ಸಂಶೀನಾ, ವಿನೀತ್ ಕುಮಾರ್, ಜಯ ಕುಮಾರಿ ಸಹಕರಿಸಿದರು.ಗ್ರಾಮಸ್ಥರು, ಸಂಜೀವಿನಿ ಒಕ್ಕೂಟದ ಸದಸ್ಯರು, ಸ್ತ್ರೀ ಶಕ್ತಿ ಗುಂಪಿನ ಸದಸ್ಯರು, ಉದ್ಯೋಗ ಚೀಟಿದಾರರು ಪಾಲ್ಗೊಂಡರು.

     ವರದಿ ಸಾಲಿನಲ್ಲಿ ಒಟ್ಟು  ಸಾಮಾಗ್ರಿ ವೆಚ್ಚ- ರೂ. 7,64,036, ಕೂಲಿ ವೆಚ್ಚ- ರೂ. 16,76,064 ಸೇರಿ ಒಟ್ಟು ಖರ್ಚು  ರೂ.24,40,100 ಆಗಿರುತ್ತದೆ.

LEAVE A REPLY

Please enter your comment!
Please enter your name here