ಕಸ್ತೂರಿ ರಂಗನ್ ವರದಿ ವಿರೋಧಿಸಿ ಗುಂಡ್ಯದಲ್ಲಿ ನಡೆಯುವ ಪ್ರತಿಭಟನೆಯನ್ನು ಯಶಸ್ವಿಗೊಳಿಸಲು ಬಿಳಿನೆಲೆ ಪ್ರಾ.ಕೃ.ಪ.ಸ.ಸಂ.ದ ಅಧ್ಯಕ್ಷ ದಾಮೋದರ ಗುಂಡ್ಯ ಕರೆ

0

ಕಡಬ: ಕಸ್ತೂರಿರಂಗನ್ ವರದಿಗೆ ಬಿಳಿನೆಲೆ ಪ್ರಾ.ಕೃ.ಪ.ಸ.ಸಂ.ಮಹಾಸಭೆಯಲ್ಲಿ ಸದಸ್ಯರಿಂದ ಸಂಪೂರ್ಣ ವಿರೋಧ ವ್ಯಕ್ತವಾಗಿದ್ದು, ಈ ಹಿನ್ನಲೆಯಲ್ಲಿ ನ.15ರಂದು ನಡೆಯುವ ಪ್ರತಿಭಟನೆಗೆ ಸಹಕಾರ ಸಂಘದ ವತಿಯಿಂದ ಸಂಪೂರ್ಣ ಬೆಂಬಲ ಘೋಷಣೆ ಮಾಡಲಾಗಿದೆ ಎಂದು ಸಂಘದ ಅಧ್ಯಕ್ಷ ದಾಮೋದರ ಗುಂಡ್ಯ ಅವರು ಹೇಳಿದ್ದಾರೆ.
ನಮ್ಮ ಭೂಮಿ, ನಮ್ಮ ಕೃಷಿ ಉಳಿದರೆ ಮಾತ್ರ ಸಂಘ ಉಳಿಯಬಹುದು ಈ ವ್ಯವಸ್ಥೆಗೆ ದಕ್ಕೆ ಬಂದಾಗ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ, ಈ ನಿಟ್ಟಿನಲ್ಲಿ ಸಂಘದ ವ್ಯಾಪ್ತಿಯ ಎಲ್ಲ ಸದಸ್ಯರು ಪ್ರತಿಭಟನೆಯಲ್ಲಿ ಭಾಗವಹಿಸಿ ಪ್ರತಿಭಟನೆಯನ್ನು ಯಶಸ್ವಿಗೊಳಿಸಬೇಕಾಗಿ ಅವರು ಕರೆ ನೀಡಿದ್ದಾರೆ.

LEAVE A REPLY

Please enter your comment!
Please enter your name here